ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಎಡಪಂಥೀಯರ ಪರ, ನನ್ನದೇ ಸೋಷಿಯಲ್ ಮೀಡಿಯಾ ಮಾಡ್ತೀನಿ: ಟ್ರಂಪ್ ಸೆಡ್ಡು

|
Google Oneindia Kannada News

ವಾಷಿಂಗ್ಟನ್, ಜನವರಿ 9: ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಮುಂದುವರಿದರೆ ಅಧಿಕಾರ ಹಸ್ತಾಂತರಕ್ಕೂ ಮುನ್ನ ದೊಡ್ಡ ಮಟ್ಟದ ದೊಂಬಿಯನ್ನೇ ಎಬ್ಬಿಸಬಹುದು ಎಂಬ ಭಯದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸಂಸ್ಥೆಗಳು ಅವರ ಖಾತೆಗಳನ್ನು ಅಮಾನತು ಮಾಡಿವೆ. ಟ್ರಂಪ್ ಅವರ ಟ್ವೀಟ್‌ಗಳ ಮೇಲೆ ಸದಾ ಕಣ್ಣಿಟ್ಟಿರುವ ಟ್ವಿಟ್ಟರ್, ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ.

ಟ್ರಂಪ್ ಅವರ ಖಾತೆಯನ್ನು ಕಾಯಂ ಆಗಿ ಸ್ಥಗಿತಗೊಳಿಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಪರ ಪ್ರಚಾರಕ್ಕಾಗಿ ಇರುವ 'ಟೀಮ್ ಟ್ರಂಪ್' ಖಾತೆಯನ್ನು ಕೂಡ ಟ್ವಿಟ್ಟರ್ ಅಮಾನತು ಮಾಡಿದೆ.

ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತ

ಈ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿಕೆ ಬಿಡುಗಡೆ ಮಾಡಿದ್ದು, ಟ್ವಿಟ್ಟರ್ ವಿರುದ್ಧ ಕಿಡಿಕಾರಿದ್ದಾರೆ. 'ಹೀಗೆ ಆಗಬಹುದು ಎಂದು ನಾನು ಮೊದಲೇ ಹೇಳಿದ್ದೆ. ನಾವು ಇತರೆ ವಿವಿಧ ಜಾಲತಾಣಗಳ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿಯೇ ದೊಡ್ಡ ಪ್ರಕಟಣೆ ನೀಡಲಿದ್ದೇವೆ. ನಾವು ಭವಿಷ್ಯದಲ್ಲಿ ಶೀಘ್ರದಲ್ಲಿಯೇ ನಮ್ಮದೇ ಸ್ವಂತ ಜಾಲತಾಣ ವೇದಿಕೆ ಕಟ್ಟುವ ಸಾಧ್ಯತೆಯ ಬಗ್ಗೆ ಗಮನ ಹರಿಸಿದ್ದೇವೆ' ಎಂದು ಟ್ರಂಪ್ ಹೇಳಿದ್ದಾರೆ.

'ನಮ್ಮನ್ನು ಮೌನವಾಗಿರಿಸಲು ಸಾಧ್ಯವಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ. ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಟ್ವಿಟ್ಟರ್ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ.

ಸ್ವಯಂ ಕ್ಷಮಾದಾನಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್!ಸ್ವಯಂ ಕ್ಷಮಾದಾನಕ್ಕೆ ಮುಂದಾದ ಡೊನಾಲ್ಡ್ ಟ್ರಂಪ್!

ದುರಾಚಾರಿಗಳಿಗೆ ಅವಕಾಶ

ದುರಾಚಾರಿಗಳಿಗೆ ಅವಕಾಶ

'ಟ್ವಿಟ್ಟರ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವುದಲ್ಲ. ಅವರು ತೀವ್ರಗಾಮಿ ಎಡಪಂಥೀಯ ವೇದಿಕೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿ ಜಗತ್ತಿನ ಅತ್ಯಂತ ದುರಾಚಾರದ ಜನರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಲಾಗುತ್ತಿದೆ' ಎಂದು ಟ್ರಂಪ್ ಹೇಳಿದ್ದಾರೆ.

ಹೊಂದಾಣಿಕೆ ಮಾಡಿಕೊಂಡಿದ್ದಾರೆ

ಹೊಂದಾಣಿಕೆ ಮಾಡಿಕೊಂಡಿದ್ದಾರೆ

'ಟ್ವಿಟ್ಟರ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇಧಿಸುವುದರಲ್ಲಿ ಮುಂದೆ ಮುಂದೆ ಹೋಗುತ್ತಲೇ ಇದೆ. ಈ ರಾತ್ರಿ ಟ್ವಿಟ್ಟರ್ ಉದ್ಯೋಗಿಗಳು ಡೆಮಾಕ್ರಾಟ್‌ಗಳು ಮತ್ತು ತೀವ್ರಗಾಮಿ ಎಡಪಂಥೀಯರ ಜತೆಗೆ ಸಹಭಾಗಿತ್ವ ಮಾಡಿಕೊಂಡು ನನ್ನನ್ನು ಮೌನವಾಗಿಸಲು ಅವರ ವೇದಿಕೆಯಿಂದ ನನ್ನ ಖಾತೆಯನ್ನು ತೆಗೆದುಹಾಕಿದ್ದಾರೆ. ಟ್ವಿಟ್ಟರ್ ಖಾಸಗಿ ಸಂಸ್ಥೆಯಾಗಿರಬಹುದು. ಆದರೆ ಸರ್ಕಾರದ ಸೆಕ್ಷನ್ 230ರ ಕಾಣಿಕೆ ಇಲ್ಲ ಎಂದರೆ ಅವರು ಅಸ್ತಿತ್ವದಲ್ಲಿ ಉಳಿಯುತ್ತಿರಲಿಲ್ಲ' ಎಂದಿದ್ದಾರೆ.

ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿ ಟ್ರಂಪ್ ಬೆಂಬಲಿಗರಿಂದ ಹೇಸಿಗೆ ಕೃತ್ಯ!ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿ ಟ್ರಂಪ್ ಬೆಂಬಲಿಗರಿಂದ ಹೇಸಿಗೆ ಕೃತ್ಯ!

ಫೇಸ್‌ಬುಕ್, ಇನ್‌ಸ್ಟಾಗ್ರಾಂ

ಫೇಸ್‌ಬುಕ್, ಇನ್‌ಸ್ಟಾಗ್ರಾಂ

ಟ್ರಂಪ್ ಅವರು ತಮ್ಮ ಪ್ರಚಾರ ತಂಡ 'ಟೀಮ್ ಟ್ರಂಪ್'ನ ಖಾತೆಯಿಂದ ಹೀಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ತಮ್ಮನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡ ಈ ಟ್ವೀಟ್‌ಗಳ ಬೆನ್ನಲ್ಲೇ ಟ್ವಿಟ್ಟರ್, 'ಟೀಮ್ ಟ್ರಂಪ್' ಖಾತೆಯನ್ನು ಕೂಡ ಅಮಾನತು ಮಾಡಿದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಕೂಡ ಟ್ರಂಪ್ ಅವರ ಚಟುವಟಿಕೆಗಳನ್ನು ನಿಯಂತ್ರಿಸಿವೆ.

ಹಿಂಸೆಗೆ ಕುಮ್ಮಕ್ಕು ನೀಡುವ ಅಪಾಯ

ಹಿಂಸೆಗೆ ಕುಮ್ಮಕ್ಕು ನೀಡುವ ಅಪಾಯ

'ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಟ್ವೀಟ್‌ಗಳನ್ನು ಮತ್ತು ಅವುಗಳ ಸುತ್ತಲಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದ ಬಳಿಕ, ಹಿಂಸಾಚಾರಕ್ಕೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯದ ಹಿನ್ನೆಲೆಯಲ್ಲಿ ನಾವು ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದೇವೆ' ಎಂದು ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.

English summary
US President Donald Trump slammed twitter for permanently suspending his account and said we will not be silenced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X