ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್ ವಿರುದ್ಧ ರೊಚ್ಚಿಗೆದ್ದ ಟ್ರಂಪ್..! ಮತ್ತೊಮ್ಮೆ ಟ್ರಂಪ್‌ಗೆ ಅಧ್ಯಕ್ಷ ಪಟ್ಟ ಸಿಗುತ್ತಾ..?

|
Google Oneindia Kannada News

ಬೈಡನ್ ಪಾಲಿಗೆ ಪರಮ ಶತ್ರು, ಅಮೆರಿಕದ ಅತ್ಯಂತ ವಿವಾದಾತ್ಮ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ರೊಚ್ಚಿಗೆದ್ದಿದ್ದಾರೆ. ಹಾಲಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ಮಾಜಿ ಅಧ್ಯಕ್ಷ ಟ್ರಂಪ್ ಗಂಭೀರ ಆರೋಪಗಳನ್ನೇ ಮಾಡಿದ್ದಾರೆ. 'ಅಲಬಾಮ'ದಲ್ಲಿ ಆಯೋಜಿಸಿದ್ದ ರ‍್ಯಾಲಿ ಉದ್ದೇಶಿಸಿ ಮಾತನಾಡಿರುವ ಟ್ರಂಪ್, ಅಫ್ಘಾನಿಸ್ತಾನ ಬೆಳವಣಿಗೆಗೆ ಜೋ ಬೈಡನ್ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಅಮೆರಿಕದ ಇತಿಹಾಸದಲ್ಲೇ ಈ ಘಟನೆ ದೊಡ್ಡ ಸೋಲು, ಇದು ಬೈಡನ್ ಆಡಳಿತದ ವಿದೇಶಾಂಗ ನೀತಿಯ ದೊಡ್ಡ ವೈಫಲ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಟ್ರಂಪ್ ಬೈಡನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಜೋ ಬೈಡನ್‌ಗೆ ಅಮೆರಿಕ ಆಳಲು ಬರುವುದಿಲ್ಲ ಎಂಬ ಅರ್ಥದಲ್ಲಿ ಆಕ್ರೋಶ ಹೊರಹಾಕಿದ್ದರು ಟ್ರಂಪ್‌. ಆದ್ರೆ ಈಗ ಬಹಿರಂಗ ವೇದಿಕೆಯಲ್ಲೇ ಬೈಡನ್‌ಗೆ ಬಿಸಿ ಮುಟ್ಟಿಸಿದ್ದಾರೆ ಮಾಜಿ ಅಧ್ಯಕ್ಷ ಟ್ರಂಪ್.

ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್ಅಫ್ಘಾನಿಸ್ತಾನ ತಾಲಿಬಾನ್ ಹಿಡಿತದಲ್ಲಿದ್ದರೂ ಅಮೆರಿಕಕ್ಕೆ ಬೆದರಿಕೆ: ಬೈಡನ್

ಬೈಡನ್ ಮಾಡಿದ ಎಡವಟ್ಟಿನಿಂದಾಗಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ತನ್ನ ಸೇನಾ ನೆಲೆಗಳನ್ನು ಕಳೆದುಕೊಂಡಿದೆ, ಹಾಗೇ ಅಮೆರಿಕ ಸೇನೆ 83 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 6.17 ಲಕ್ಷ ಕೋಟಿ ರೂಪಾಯಿ ಮೊತ್ತದ ರಕ್ಷಣಾ ಉಪಕರಣ ಬಿಟ್ಟು ಹೊರಗಡೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಸೇವ್ ಅಮೆರಿಕ’ ಎನ್ನುತ್ತಿರುವ ಟ್ರಂಪ್

‘ಸೇವ್ ಅಮೆರಿಕ’ ಎನ್ನುತ್ತಿರುವ ಟ್ರಂಪ್

ಟ್ರಂಪ್ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಸುಮ್ಮನೆ ಕುಳಿತಿಲ್ಲ. ಮತ್ತೊಂದು ಚುನಾವಣೆಗೆ ಟ್ರಂಪ್ ಸಿದ್ಧತೆ ನಡೆಸಿದ್ದಾರೆ. 2020ರಲ್ಲಿ ಸೋತರೆ ಏನಂತೆ 2024ಕ್ಕೆ ಸಿದ್ಧವಾಗಬೇಕು ಎಂಬುದು ಲೆಕ್ಕಾಚಾರ! ಹೀಗಾಗಿಯೇ ರಾಜಕೀಯ ರ‍್ಯಾಲಿಗಳನ್ನು ಆಯೋಜಿಸುತ್ತಿರುವ ಟ್ರಂಪ್ ಮತ್ತೊಮ್ಮೆ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ 'ಸೇವ್ ಅಮೆರಿಕ' ಎಂಬ ಹೆಸರಲ್ಲಿ ರ‍್ಯಾಲಿ ನಡೆಸುತ್ತಿರುವ ಟ್ರಂಪ್, ಅಫ್ಘಾನ್ ಬೆಳವಣಿಗೆಯನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಅಲಬಾಮದಲ್ಲಿ ನಡೆದ ರ‍್ಯಾಲಿ ವೇಳೆ ಅಧ್ಯಕ್ಷ ಬೈಡನ್ ವಿರುದ್ಧ ಕೆಂಡಕಾರಿದ ಟ್ರಂಪ್, ಹಲವು ಆರೋಪಗಳನ್ನ ಮಾಡಿದ್ದಾರೆ.

 ಟ್ರಂಪ್ ಮತ್ತೊಂದು ಎಡವಟ್ಟು..!

ಟ್ರಂಪ್ ಮತ್ತೊಂದು ಎಡವಟ್ಟು..!

ಬೈಡನ್ ವಿರುದ್ಧದ ಕಿಚ್ಚಿಗೆ, ಕೋಪಕ್ಕೆ ಟ್ರಂಪ್ ಮತ್ತೊಂದು ಎಡವಟ್ಟು ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಅಲಬಾಮ ರಾಜ್ಯದ ಪ್ರಮುಖ ನಗರವಾದ ಕಾಲ್ಮನ್‌ನಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಿಂದ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಆದರೆ ಪರಿಸ್ಥಿತಿ ಸೂಕ್ಷ್ಮವಾಗಿದ್ರೂ ಟ್ರಂಪ್‌ ರ‍್ಯಾಲಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈಗಾಗಲೇ ಅಮೆರಿಕ 4ನೇ ಅಲೆಯ ಬಲೆಯೊಳಗೆ ಸಿಲುಕುವ ಅಪಾಯವಿದೆ. ಆದರೂ ಟ್ರಂಪ್ ಈ ರೀತಿ ಬೃಹತ್ ರಾಜಕೀಯ ಸಮಾವೇಶ ನಡೆಸುತ್ತಿರುವುದು ತಜ್ಞರ ಆಕ್ರೋಶಕ್ಕೆ ಕಾರಣವಾಗಿದೆ.

ಅಫ್ಘಾನ್‌, ಕೋವಿಡ್‌ ಸುದ್ದಿ ನಡುವೆ ಬೈಡೆನ್‌ ರೇಟಿಂಗ್ಸ್‌ ಡೌನ್‌ಅಫ್ಘಾನ್‌, ಕೋವಿಡ್‌ ಸುದ್ದಿ ನಡುವೆ ಬೈಡೆನ್‌ ರೇಟಿಂಗ್ಸ್‌ ಡೌನ್‌

ಟ್ರಂಪ್ ಇದ್ದಿದ್ದರೆ ಸರಿ ಮಾಡ್ತಿದ್ರಾ..?

ಟ್ರಂಪ್ ಇದ್ದಿದ್ದರೆ ಸರಿ ಮಾಡ್ತಿದ್ರಾ..?

ಹೌದು, ಇಂತಹ ಪ್ರಶ್ನೆ ಮೂಡುವುದು ಸಹಜ. ಟ್ರಂಪ್ ಈಗ ನೀಡಿರುವ ಹೇಳಿಕೆ ಅಂತಹ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಆದ್ರೆ ಈ ಪ್ರಶ್ನೆಗೆ ಒಂದೇ ಪದದ ಉತ್ತರ 'ಇಲ್ಲ' ಎನ್ನಬಹುದು. ಏಕೆಂದರೆ ಸ್ವತಃ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ಗೂ ತಾಲಿಬಾನ್ ಉಗ್ರರನ್ನು ಸದೆಬಡಿಯುವುದಕ್ಕೆ ಆಗಿರಲಿಲ್ಲ. ತಾಲಿಬಾನ್ ಜೊತೆ ಮಾತುಕತೆ ಆರಂಭಿಸಿ ಸಂಧಾನ ಸೂತ್ರ ಮುಂದಿಟ್ಟಿದ್ದ ಟ್ರಂಪ್‌ಗೆ ತಾಲಿಬಾನ್ ರಕ್ತದ ಮೂಲಕ ಉತ್ತರ ಕೊಟ್ಟಿತ್ತು. ಹತ್ತಾರು ಎಡವಟ್ಟು ನಿರ್ಧಾರಗಳು ಟ್ರಂಪ್ ಆಡಳಿತಕ್ಕೆ ಪೆಟ್ಟುಕೊಟ್ಟಿತ್ತು.

ಉಗ್ರರನ್ನೇ ಹೊಗಳಿದ್ದ ಟ್ರಂಪ್..!

ಉಗ್ರರನ್ನೇ ಹೊಗಳಿದ್ದ ಟ್ರಂಪ್..!

ಟ್ರಂಪ್ ಮಾಡಿಕೊಂಡಿದ್ದ ಎಡವಟ್ಟು ಒಂದೆರಡಲ್ಲ. ಇದೇ ರೀತಿ 2020ರಲ್ಲಿ ತಾಲಿಬಾನ್ ಉಗ್ರರನ್ನು ಹೊಗಳಿದ್ದ ಟ್ರಂಪ್‌ಗೆ ಇದೇ ಉಗ್ರರು ಶಾಕ್ ನೀಡಿದ್ದರು. ತಾಲಿಬಾನಿ ನಾಯಕರ ಜೊತೆ ಹಿಂದೆ ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚೆ ನಡೆಸಲು ಮುಂದಾಗಿದ್ದರು. ಅಲ್ಲದೆ ತಾಲಿಬಾನಿಗಳು ಒಳ್ಳೆಯವರು ಎಂದು ಟ್ರಂಪ್ ಹೇಳಿದ್ದರು. ಆದರೆ ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಉಗ್ರರ ಜೊತೆ ಮಾತುಕತೆ ನಡೆಸಿದ್ದಕ್ಕೆ ಅಮೆರಿಕದ ವಿರುದ್ಧ ಅಶ್ರಫ್ ಘನಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೆಲ್ಲಾ ನಡೆದು ಕೆಲವೇ ದಿನಗಳು ಕಳೆಯುವ ಒಳಗಾಗಿ ಅಮೆರಿಕದ ಸೈನಿಕರನ್ನೇ ತಾಲಿಬಾನ್ ಉಗ್ರರು ಕೊಂದು ಹಾಕಿದ್ದರು. ದಾಳಿ ಬಳಿಕ ಅಮೆರಿಕ, ತಾಲಿಬಾನ್ ಮಾತುಕತೆಯೇ ಮುರಿದುಬಿದ್ದಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಸೇನೆ ಹಿಂಪಡೆಯಲು ಟ್ರಂಪ್ ಒಪ್ಪಿಗೆ ಸೂಚಿಸಿದ್ದರು.

English summary
Ex-president Trump slams US president Biden over Afghan & Taliban issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X