• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್: ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

|

ವಾಷಿಂಗ್ಟನ್, ಆಗಸ್ಟ್ 01: ಶೀಘ್ರವೇ ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್ ಆಗಲಿದ್ದು, ಚೀನಾ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲು ನಿರ್ಧರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ವೈಟ್‌ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಈ ಕುರಿತು ಮಾತನಾಡಿ, ಭಾರತವು ಚೀನಾದ 106 ಅಪ್ಲಿಕೇಷನ್‌ಗಳನ್ನು ನಿಷೇಧಿಸಿದೆ. ನಾವು ಕೂಡ ಟಿಕ್‌ಟಾಕ್ ಅಪ್ಲಿಕೇಷನ್‌ಗೆ ನಿಷೇಧ ಹೇರಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಟಿಕ್‌ಟಾಕ್ ಅಮೆರಿಕದ ಜನರ ವೈಯುಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಭಾರತವು ಕೂಡ ಈ ಅಪ್ಲಿಕೇಷನ್‌ನಿಂದ ದೇಶದ ಭದ್ರತೆಗೆ ದಕ್ಕೆಯುಂಟಾಗಲಿದೆ ಎನ್ನುವ ಕಾರಣಕ್ಕೆ ನಿಷೇಧವನ್ನು ಹೇರಿದೆ. ನಾವೂ ಕೂಡ ಶೀಘ್ರವೇ ಟಿಕ್‌ಟಾಕ್ ಮೇಲೆ ನಿಷೇಧ ಹೇರಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಇದೇ ಅಮೆರಿಕ ಕೊರೋನಾ ವೈರಸ್ ವಿಚಾರವಾಗಿ ಚೀನಾ ಸರ್ಕಾರ ಜಗತ್ತಿಗೆ ಪಾರದರ್ಶಕವಾಗಿರಲಿಲ್ಲ. ಸೂಕ್ತ ಸಂದರ್ಭದಲ್ಲಿ ವೈರಸ್ ಕುರಿತು ಮಾಹಿತಿ ನೀಡಿದ್ದರೆ ವೈರಸ್ ಇಷ್ಟು ಪ್ರಮಾಣದಲ್ಲಿ ಹರಡದಂತೆ ಎಚ್ಚರಿಕೆ ವಹಿಸಬಹುದಿತ್ತು ಎಂದು ಕಿಡಿಕಾರಿತ್ತು.

ಟಿಕ್‌ ಟಾಕ್ ಬ್ಯಾನ್: ಚೀನಾ ಸರ್ಕಾರ ಬಳಕೆದಾರರ ಡೇಟಾವನ್ನು ಕೋರಿಲ್ಲ ಎಂದ ಕಂಪನಿ

ಅಲ್ಲದೆ ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆದಿದ್ದ ಅಮೆರಿಕ, ಕೊರೋನಾ ಚೀನಾದಿಂದ ಸೃಷ್ಟಿಯಾದ ಜೈವಿಕ ಅಸ್ತ್ರ ಎಂದೂ ಗಂಭೀರ ಆರೋಪ ಮಾಡಿತ್ತು. ಅಲ್ಲದೆ ಚೀನಾ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದ ಅಮೆರಿಕ, ಇದೇ ಕೊರೋನಾ ವಿಚಾರವಾಗಿ ವಿಶ್ವಸಂಸ್ಥೆಯ ವಿರುದ್ಧವೂ ಕಿಡಿಕಾರಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ವಕ್ತಾರನಂತೆ ಮಾತನಾಡುತ್ತಿದೆ. ಹೀಗಾಗಿ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿರುವ ನಿಧಿಯನ್ನು ಮುಂದಿನ ದಿನಗಳಲ್ಲಿ ರದ್ದು ಮಾಡುವುದಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಚೀನಾ ವಿರೋಧಿ ಮನೋಭಾವ

ಚೀನಾ ವಿರೋಧಿ ಮನೋಭಾವ

ಇದರ ಬೆನ್ನಲ್ಲೇ ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ದಟ್ಟವಾಗಿದೆ. ಚೀನಾದ ಎಲ್ಲ ಸರಕುಗಳನ್ನು ತಿರಸ್ಕರಿಸಲು ಇಡೀ ಭಾರತ ಅಲಿಖಿತವಾಗಿ ನಿರ್ಧರಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಟಿಕ್​ಟಾಕ್​ ಸೇರಿ ಚೀನಾದ ಒಟ್ಟು 59 ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಮೆರಿಕ ಕೂಡ ಇದೇ ಹಾದಿಯಲ್ಲಿ ಸಾಗಲು ನಿರ್ಧರಿಸಿದಂತಿದೆ.

ಅಮೆರಿಕದ ಕಂಪನಿಯಾಗಲಿದೆಯೇ ಟಿಕ್‌ಟಾಕ್

ಅಮೆರಿಕದ ಕಂಪನಿಯಾಗಲಿದೆಯೇ ಟಿಕ್‌ಟಾಕ್

ಟಿಕ್ ಟಾಕ್ ಸಂಸ್ಥೆ ಶೀಘ್ರವೇ ಚೀನಾದೊಂದಿಗಿನ ಸಂಪರ್ಕ ಕಡಿದುಕೊಳ್ಳಲಿದ್ದು, ಅಮೆರಿಕಾ ಸಂಸ್ಥೆಯಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರರೊಬ್ಬರು ಹೇಳಿದ್ದರು.

ಟಿಕ್‌ಟಾಕ್ ಮಾತೃ ಸಂಸ್ಥೆಯನ್ನು ತೊರೆಯಲಿದೆಯೇ?

ಟಿಕ್‌ಟಾಕ್ ಮಾತೃ ಸಂಸ್ಥೆಯನ್ನು ತೊರೆಯಲಿದೆಯೇ?

ಟಿಕ್ ಟಾಕ್ ಸಂಸ್ಥೆ ಚೀನಾದ ಮಾತೃಸಂಸ್ಥೆಯನ್ನು ತೊರೆಯಲಿದ್ದು ಶೇ.100 ರಷ್ಟು ಅಮೆರಿಕಾ ಸಂಸ್ಥೆಯಾಗಲಿದ್ದು, ಭಾರತದಲ್ಲಿ ಹೇರಿರುವ ನಿಷೇಧದ ಮಾದರಿಯಿಂದ ತಪ್ಪಿಸಿಕೊಳ್ಳುವ ಬೇಡಿಕೆಗಳನ್ನು ಪೂರೈಸಲಿದೆ ಎಂದು ಶ್ವೇತ ಭವನದಲ್ಲಿ ಟ್ರಂಪ್ ಸಲಹೆಗಾರರು ತಿಳಿಸಿದ್ದಾರೆ.

ಮೈಕ್ ಪಾಂಪಿಯೋ ಏನು ಹೇಳಿದ್ದರು

ಮೈಕ್ ಪಾಂಪಿಯೋ ಏನು ಹೇಳಿದ್ದರು

ಅಮೆರಿಕ ಸಚಿವ ಮೈಕ್ ಪೊಂಪಿಯೋ ಸಲಹೆ ನೀಡಿರುವಂತೆ ಟಿಕ್ ಟಾಕ್ ನ್ನು ನಿಷೇಧ ಮಾಡುವ ಸಂಬಂಧ ಅಮೆರಿಕ ಇನ್ನೂ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ನಿಷೇಧ ವಿಧಿಸುವ ಬದಲು ಚೀನಾದ ಬೈಟ್ ಡ್ಯಾನ್ಸ್ ಸಂಸ್ಥೆಯಿಂದ ಅದನ್ನು ಹೊರತರುವುದು ಅತ್ಯುತ್ತಮವಾದ ಆಯ್ಕೆ ಎಂದು ರಾಷ್ಟ್ರೀಯ ಆರ್ಥಿಕ ಪರಿಷತ್ ನ ನಿರ್ದೇಶಕ ಕುಡ್ಲೋ ಹೇಳಿದ್ದಾರೆ. ಟಿಕ್ ಟಾಕ್ ಚೀನಾದ ಸಂಪರ್ಕ ಕಡಿದುಕೊಂಡು ಅಮೆರಿಕ ಸಂಸ್ಥೆಯಾದರೆ ಭಾರತ ನಿಷೇಧವನ್ನು ಹಿಂಪಡೆಯುವ ಆಯ್ಕೆಯನ್ನು ಪರಿಗಣಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
President Donald Trump said Friday he will bar fast-growing social media app TikTok from the United States as American authorities have raised concerns the service could be used by Chinese intelligence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X