• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಲೀಕತ್ವ ಬದಲಾಯಿಸದಿದ್ದರೆ ಅಮೆರಿಕದಲ್ಲೂ ಟಿಕ್‌ಟಾಕ್ ಬ್ಯಾನ್: ಟ್ರಂಪ್

|

ವಾಷಿಂಗ್ಟನ್, ಆಗಸ್ಟ್ 04: ಟಿಕ್‌ಟಾಕ್ ಮಾಲೀಕತ್ವ ಬದಲಾಯಿಸದಿದ್ದರೆ ಅಮೆರಿಕದಲ್ಲೂ ಅಪ್ಲಿಕೇಷನ್‌ಗೆ ನಿಷೇಧ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

   ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ | Oneindia Kannada

   ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್‌ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

   ಟಿಕ್‌ಟಾಕ್ ಖರೀದಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ಮೈಕ್ರೋಸಾಫ್ಟ್‌ ಮಾತುಕತೆ

   ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ದಿನದಿಂದ ದಿನಕ್ಕೆ ವಿಶ್ವದ ಒಂದೊಂದೇ ದೇಶಗಳು ಟಿಕ್ ಟಾಕ್ ಆ್ಯಪ್ ಗಳನ್ನು ನಿಷೇಧಿಸುತ್ತಿವೆ. ಅದರಲ್ಲೂ ಭಾರತ, ಅಮೆರಿಕಾ ಸೇರಿದಂತೆ ಪ್ರಮುಖ ದೇಶಗಳು ಟಿಕ್ ಟಾಕ್ ನಿಷೇಧಿಸುತ್ತಿರುವುದರಿಂದ ಚೀನಾ ರಾಷ್ಟ್ರಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.

   ಸುದ್ದಿಗಾರರೊಂದಿಗೆ ಮಾತನಾಡಿರುವಅವರು, ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್‌ಗೆ ಸೆಪ್ಟೆಂಬರ್ 15ರವರೆಗೂ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾರಾಟವಾಗದೇ ಹೋದಲ್ಲಿ, ಆ್ಯಪ್‌ನ್ನು ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ. ಆ್ಯಪ್ ನ್ನು ಮೈಕ್ರೋಸಾಫ್ಟ್ ಅಥವಾ ಇತರೆ ಯಾವುದೇ ಸಂಸ್ಥೆ ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ.

   ಶುಕ್ರವಾರ (ಜುಲೈ 31), ತಂತ್ರಜ್ಞಾನದ ದೈತ್ಯ ಮೈಕ್ರೋಸಾಫ್ಟ್ ಟಿಕ್ ಟಾಕ್‌ ಯುಎಸ್ ಕಾರ್ಯಾಚರಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತೊಂದು ಸುತ್ತಿನಲ್ಲಿ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

   ನಾದ ಬೈಟ್‌ಡ್ಯಾನ್ಸ್‌ ಕಂಪನಿಯ ಒಡೆತನದ ಟಿಕ್‌ಟಾಕ್ ಅನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿದ ಬೆನ್ನಲ್ಲೇ ಟಿಕ್‌ಟಾಕ್ ಅಮೆರಿಕಾದ ಕಾರ್ಯಾಚರಣೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಚರ್ಚಿಸಿದೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ.

   "ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮತ್ತು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ನಡುವಿನ ಸಂಭಾಷಣೆಯ ನಂತರ, ಮೈಕ್ರೋಸಾಫ್ಟ್ ಅಮೆರಿಕಾದಲ್ಲಿ ಟಿಕ್‌ಟಾಕ್ ಖರೀದಿಯನ್ನು ಅನ್ವೇಷಿಸಲು ಚರ್ಚೆಗಳನ್ನು ಮುಂದುವರಿಸಲು ಸಿದ್ಧವಾಗಿದೆ" ಎಂದು ಸಾಫ್ಟ್‌ವೇರ್ ದೈತ್ಯ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

   English summary
   US President Donald Trump gave popular Chinese-owned video app TikTok six weeks to sell its US operations to an American company, saying Monday it would be "out of business" otherwise, and that the government wanted a financial benefit from the deal.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X