ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್‌ ಧರಿಸಲು ಯಾವುದೇ ತೊಂದರೆ ಇಲ್ಲ, ಆದರೆ...: ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜುಲೈ 1: ಮಾಸ್ಕ್ ಧರಿಸಲು ಯಾವುದೇ ತೊಂದರೆ ಇಲ್ಲ ಆದರೆ.. ನನಗೆ ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ನಿತ್ಯ ಲಕ್ಷದವರೆಗೂ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾದರೂ ಗಂಭೀರವಾಗಿ ಪರಿಗಣಿಸಿದ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸದೆಯೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

Recommended Video

Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸುತ್ತಿಲ್ಲ ಎಂದು ಅನೇಕ ಮಂದಿ ಅವರನ್ನೇ ಅನುಸರಿಸಿದ್ದರು, ಹೀಗಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು, ಮಾಸ್ಕ್ ಧರಿಸುವವರು ಟ್ರಂಪ್ ಅವರ ವಿರೋಧಿಗಳು, ಮಾಸ್ಕ್ ಧರಿಸದವರು ಅವರ ಬೆಂಬಲಿಗರು ಎನ್ನುವ ವ್ಯಂಗ್ಯ ಕೇಳಿ ಬಂದಿತ್ತು.

ಬುದ್ಧಿ ಕಲಿಯದಿದ್ದರೆ ಅಮೆರಿಕಕ್ಕೆ ಇನ್ನಷ್ಟು ಕೊರೊನಾ ಆಘಾತಬುದ್ಧಿ ಕಲಿಯದಿದ್ದರೆ ಅಮೆರಿಕಕ್ಕೆ ಇನ್ನಷ್ಟು ಕೊರೊನಾ ಆಘಾತ

ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿಗೆ ತುತ್ತಾಗಿರುವ ಅಮೆರಿಕದಲ್ಲಿ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಆತಂಕ ಎದುರಾಗಿದೆ. ಅಮರಿಕದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ನಿಮಯಗಳನ್ನು ಪಾಲಿಸದಿದ್ದರೆ ಶೀಘ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದುಪ್ಪಟ್ಟಾಗಬಹುದು. ದೇಶದಲ್ಲಿ ಪ್ರತಿದಿನ 2ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದರಿಂದ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆರೋಗ್ಯ ತಜ್ಞ ಆಂಥೋನಿ ಫಾಸಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.ಈಗಾಗಲೇ ಅಮೆರಿಕದಲ್ಲಿ 1 ಲಕ್ಷದ 26 ಸಾವಿರ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಉಪಾಧ್ಯಕ್ಷ ಮೈಕ್ ಪೆನ್ಸ್‌ ಸಾಕಷ್ಟು ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದನ್ನು ನೋಡಿದ್ದೇವೆ, ಆದರೆ ಟ್ರಂಪ್ ಮಾತ್ರ ಯಾವುದೇ ಸಂದರ್ಭದಲ್ಲೂ ಮಾಸ್ಕ್ ಧರಿಸಿದ್ದನ್ನು ಕಂಡಿಲ್ಲ.

ಅಂತಹ ಪರಿಸ್ಥಿತಿ ಬಂದರೆ ಖಂಡಿತವಾಗಿಯೂ ಮಾಸ್ಕ್ ಧರಿಸುತ್ತೇನೆ

ಅಂತಹ ಪರಿಸ್ಥಿತಿ ಬಂದರೆ ಖಂಡಿತವಾಗಿಯೂ ಮಾಸ್ಕ್ ಧರಿಸುತ್ತೇನೆ

ಮಾಸ್ಕ್ ಧರಿಸಲೇಬೇಕು ಎನ್ನುವ ಪರಿಸ್ಥಿತಿ ಬಂದರೆ ಖಂಡಿತವಾಗಿಯೂ ಮಾಸ್ಕ್ ಧರಿಸುತ್ತೇನೆ.ಆದರೆ ನನಗೆ ಈಗ ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಸಹಾಯಕಾರಿ

ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮಾಸ್ಕ್ ಸಹಾಯಕಾರಿ

ಮಾಸ್ಕ್ ಒಳ್ಳೆಯದು, ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ರಾಷ್ಟ್ರವ್ಯಾಪಿ ಕಡ್ಡಾಯವಾಗಿರಬೇಕೆ ಎಂಬ ಕುರಿತು ಅನುಮಾನ ವ್ಯಕ್ತಪಡಿಸಿದರು. ನೀವು ಕೆಲವೊಂದು ಸ್ಥಳಕ್ಕೆ ತೆರಳಿದರೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಅಷ್ಟು ಸಾಕೆಂದೆನಿಸುತ್ತದೆ ಎಂದು ಹೇಳಿದರು.

ಶೀಘ್ರವೇ ಕೊರೊನಾ ವೈರಸ್‌ಗೆ ಮುಕ್ತಿ

ಶೀಘ್ರವೇ ಕೊರೊನಾ ವೈರಸ್‌ಗೆ ಮುಕ್ತಿ

ಶೀಘ್ರವೇ ಕೊರೊನಾವೈರಸ್‌ಗೆ ಮುಕ್ತಿ ಸಿಗಲಿದೆ, ನಾವು ಆದಷ್ಟು ಬೇಗ ವೈರಸ್‌ಗೆ ಲಸಿಕೆ ಕಂಡು ಹಿಡಿಯುತ್ತೇವೆ. ಕೊರೊನಾ ವೈರಸ್ ಖಂಡಿತವಾಗಿಯೂ ದೇಶದಿಂದ ಮಾಯವಾಗುತ್ತದೆ.

ದಿನಕ್ಕೆ 2 ಲಕ್ಷಕ್ಕೂ ಅಧಿಕ ಪ್ರಕರಣ

ದಿನಕ್ಕೆ 2 ಲಕ್ಷಕ್ಕೂ ಅಧಿಕ ಪ್ರಕರಣ

ಅಮೆರಿಕ ಈಗ ಕೊರೊನಾ ನಿಯಂತ್ರಿಸುವ ಯಾವ ಗೋಜಿಗೂ ಹೋಗುತ್ತಿಲ್ಲ, ಅಮೆರಿಕ ಕಾಂಗ್ರೆಸ್ ಸೆನೆಟ್ ಹಾಗೂ ಅಧ್ಯಕ್ಷರು ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು. ಇದು ಕಾಲಹರಣ ಮಾಡುವ ಸಮಯವಲ್ಲ.

ಆರ್ಥಿಕ ಚಟುವಟಿಕೆಯ ಜೊತೆಗೆ ಕೊರೊನಾ ನಿಯಂತ್ರಣ ಕೂಡ ಅಷ್ಟೇ ಮುಖ್ಯ ಎಂದು ಫಾಸಿ ಹೇಳಿದ್ದಾರೆ. ಅಮೆರಿಕದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಸಮಾಧಾನಕರ ಕ್ರಮಗಳನ್ನು ತೆಗದುಕೊಂಡಿಲ್ಲ, ನಾವು ಕೊರೊನಾ ನಿಯಂತ್ರಣದ ವಿರುದ್ಧ ದಿಕ್ಕಿನಲ್ಲಿ ಹೊರಟಿದ್ದೇವೆ. ಈಗ ಪ್ರತಿದಿನ ಸುಮಾರು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದೆ. ಟೆಕ್ಸಾಸ್ ಮತ್ತೆ ಫ್ಲೋರಿಡಾ ಒಂದರಲ್ಲೇ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬರುತ್ತಿವೆ ಎಂದು ಆಂಥೋನಿ ಫಾಸಿ ಹೇಳಿದ್ದಾರೆ.

ಅಮೆರಿಕದಲ್ಲಿ ಈಗ ಮಾಸ್ಕ್ ಧರಿಸುವುವ ಬಗ್ಗೆಯೂ ರಾಜಕೀಯ ಆರಂಭವಾಗಿದೆ. ಮಾಸ್ಕ್ ಧರಿಸುವವರು ಟ್ರಂಪ್ ವಿರೋಧಿ, ಮಾಸ್ಕ್ ಧರಿಸದೆ ಇರುವವರು ಟ್ರಂಪ್ ಪರ ಎನ್ನುವ ಚರ್ಚೆ ನಡೆಯುತ್ತಿದೆ. ಹೀಗಾಗಿ ಟ್ರಂಪ್ ಕೂಡ ಮಾಸ್ಕ್ ಧರಿಸಲು ಆರಂಭಿಸಬೇಕು, ಇದರಿಂದ ಅಸಂಖ್ಯಾತ ಬೆಂಬಲಿಗರು ಮಾಸ್ಕ್ ಧರಿಸಲು ಮುಂದಾಗುತ್ತಾರೆ. ಅಧ್ಯಕ್ಷರೇ ಮೊದಲು ಈ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

English summary
US President Donald Trump, who has yet to be seen in public wearing a face mask during the coronavirus pandemic, said Wednesday he would have "no problem" doing so, while reiterating his belief that the contagion will just disappear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X