• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತಕ್ಕೆ ಭಾರೀ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ನಡೆ

|

ವಾಷಿಂಗ್ಟನ್, ಮಾರ್ಚ್ 05: ಏರ್ ಸ್ಟ್ರೈಕ್ ಸಮಯದಲ್ಲಿ ಭಾರತದ ಪರ ನಿಂತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಇದ್ದಕ್ಕಿದ್ದಂತೆಯೇ ಭಾರತಕ್ಕೆ ಭಾರೀ ಆಘಾತ ನೀಡಿದ್ದಾರೆ.

ಆದ್ಯತೆಯ ವಹಿವಾಟಿನ ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆಯುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಆದರೂ ಬಿಜಿನೆಸ್ ಮನ್ ಗಿಂತ ಎತ್ತರಕ್ಕೇರದ ಟ್ರಂಪ್

ಇನ್ನು ಮೇಲೆ ಭಾರತಕ್ಕೆ ಸುಂಕ ರಹಿತ ಸೌಲಭ್ಯವನ್ನು ನೀಡುವುದಿಲ್ಲ. ಭಾರತ ಮತ್ತು ಅಮೆರಿಕದ ನಡುವೆ ಈ ಕುರಿತು ಹಲವು ಬಾರಿ ಮಾತುಕತೆ ನಡೆದಿದ್ದರೂ, ಭಾರತ ಅಮೆರಿಕದಿಂದ ರಫ್ತಾಗುವ ವಸ್ತುಗಳಿಗೂ ಸಮಾನ ಸೌಲಭ್ಯ ನೀಡದೆ ಇರುವುದು ಮತ್ತು ಭಾರತದ ಮಾರುಕಟ್ಟೆಗೆ ಅಮೆರಿಕದಿಂದ ರಫ್ತಾಗುವ ವಸ್ತುಗಳು ಹಲವು ಅಡೆತಡೆಗಳನ್ನು ಎದುರಿಸಬೇಕಾಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಭಾರತ ಅತಿ ಹೆಚ್ಚು ತೆರಿಗೆ ಹಾಕುತ್ತಿದೆ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಭಾರತ ಅಮೆರಿಕದಿಂದ ರಫ್ತಾಗುವ ವಸ್ತುಗಳಿಗೂ ಸಮಾನ ಮತ್ತು ಸಮಂಜಸವಾದ ಪ್ರವೇಶ ನೀಡುವುದಾದರೆ ಈ ನಿರ್ಧಾರವನ್ನು ಮತ್ತೆ ಪರಾಮರ್ಶಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.

ಏನಿದು ಜಿಎಸ್ ಪಿ?

ಏನಿದು ಜಿಎಸ್ ಪಿ?

ಅಮೆರಿಕದ ಆದ್ಯತೆ ವಹಿವಾಟು ವ್ಯವಸ್ಥೆ ಇರುವುದು ಜಗತ್ತಿನ ಹಲವು ಬಡ ದೇಶಗಳು ವ್ಯಾಪಾರ-ವ್ಯವಹಾರ ಕ್ಷೇತ್ರಗಳಲ್ಲಿ ಮುಂದುವರಿದು, ಅವರ ಆರ್ಥಿಕತೆ ದೃಢವಾಗಿ, ಬಡತನದಿಂದ ಹೊರಗೆ ಬರಲು ನೆರವಾಗುವ ಉದ್ದೇಶದಿಂದ. ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿ ಪಥದಲ್ಲಿರುವ ದೇಶಗಳಿಗೆ ನೀಡುವ ಒಂದು ವ್ಯವಸ್ಥೆ ಅಂದುಕೊಳ್ಳಬಹುದು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಂದ ಮಾಡಿಕೊಳ್ಳುವ ಆಮದಿನ ಮೇಲೆ ಕಡಿಮೆ ಅಥವಾ ಶೂನ್ಯ ಸುಂಕ ವಿಧಿಸಲಾಗುತ್ತದೆ. ಅಮೆರಿಕ ಮಾತ್ರ್ ಅಲ್ಲ, ಯುನೈಟೆಡ್ ಕಿಂಗ್ ಡಮ್, ಯುರೋಪಿಯನ್ ಒಕ್ಕೂಟದ ಕೆಲ ರಾಷ್ಟ್ರಗಳು ಈ ರೀತಿ ಅನುಕೂಲ ನೀಡುತ್ತದೆ. ಅರ್ಹ ಉತ್ಪನ್ನಗಳಿಗೆ ತುಂಬ ಕಡಿಮೆ ಅಥವಾ ಶೂನ್ಯ ಸುಂಕದ ಮೂಲಕ ನೆರವಾಗುತ್ತವೆ.

ಭಾರತ-ಪಾಕಿಸ್ತಾನದಿಂದ ಧನಾತ್ಮಕ ಸುದ್ದಿ ಬರಲಿದೆ: ಟ್ರಂಪ್ ಭರವಸೆ

ಜಿಎಸ್ ಪಿ ಉದ್ದೇಶ ಏನು?

ಜಿಎಸ್ ಪಿ ಉದ್ದೇಶ ಏನು?

ರಫ್ತು ಮಾಡುವುದನ್ನು ಪ್ರೋತ್ಸಾಹಿಸುವ ಮೂಲಕ ಬಡ ದೇಶಗಳನ್ನು ಆರ್ಥಿಕವಾಗಿ ಮೇಲೆತ್ತುವುದು ಈ ಯೋಜನೆ ಉದ್ದೇಶ. ಇದರ ಜತೆಗೆ ತಮ್ಮದೇ ದೇಶದ ಕಂಪನಿಗಳು ವಿದೇಶಿ ಕಂಪನಿಗಳ ಜತೆಗೆ ಸ್ಪರ್ಧೆಗೆ ಇಳಿದು, ದೇಶದ ಜನರಿಗೆ ಸ್ಪರ್ಧಾತ್ಮಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲಿ ಎಂಬ ಉದ್ದೇಶವಿದೆ.

ಟ್ರಂಪ್ ಸರ್ಕಾರದ ಹೊಸ ಎಚ್1ಬಿ ವೀಸಾ ನೀತಿಯಲ್ಲೇನಿದೆ?

ಭಾರತದ ಮೇಲೆ ಆಗುವ ಪರಿಣಾಮ ಏನು?

ಭಾರತದ ಮೇಲೆ ಆಗುವ ಪರಿಣಾಮ ಏನು?

ಭಾರತವನ್ನು ಅಮೆರಿಕದ ಆದ್ಯತಾ ವಹಿವಾಟಿನ ಪಟ್ಟಿಯಲ್ಲೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ಕಳೆದ ವರ್ಷ ಆಗಸ್ಟ್ ನಲ್ಲೇ ಮನವಿ ಮಾಡಲಾಗಿತ್ತು. ಹೀಗೆ ಮಾಡುವುದರಿಂದ ಅಮೆರಿಕದ ಕಾರ್ಖಾನೆಗಳು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಬಹುದು. ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಬಹುದು ಎಂದಿತ್ತು. ಜಿಎಸ್ ಪಿಯಿಂದ ಭಾರತವನ್ನು ಹೊರಗಿಟ್ಟರೆ ವಿಶ್ವ ವ್ಯಾಪಾರ ಒಕ್ಕೂಟದ ಎದುರು ಅಮೆರಿಕ ವಿರುದ್ಧ ದೂರು ಒಯ್ಯುವುದಾಗಿ ಹಾಗೂ ಇದು ಮಲತಾಯಿ ಧೋರಣೆ, ಅಭಿವೃದ್ಧಿಗೆ ಬೇಕೆಂತಲೆ ಅಡ್ಡಗಾಲು ಹಾಕಲಾಗುತ್ತಿದೆ ಎಂದು ದೂರುವುದಾಗಿ ಹೇಳಿತ್ತು.

ಆ ನಂತರದ ಬೆಳವಣಿಗೆಗಳು, ಲಾಬಿ ಭಾರತದಾ ಪರ ಕೆಲಸ ಮಾಡಿತ್ತು. ಅಮೆರಿಕದ ಸೂಪರ್ ಮಾರ್ಕೆಟ್ ವಾಲ್ ಮಾರ್ಟ್ ಭಾರತದ ಬೆನ್ನಿಗೆ ನಿಂತಿತು. ವಾಲ್ ಮಾರ್ಟ್ ಗ್ರಾಹಕರಿಗೆ ಹಾಗೂ ಅಮೆರಿಕದ ಸರಬರಾಜುದಾರರಿಗೆ ಕಡಿಮೆ ಬೆಲೆಗೆ ಉತ್ಪನ್ನ ನೀಡುವುದಕ್ಕೆ ಭಾರತಕ್ಕೆ ಆದ್ಯತಾ ವಹಿವಾಟು ಮುಂದುವರಿಸಬೇಕು ಎಂದಿತ್ತು. ಆದ್ಯತಾ ವಹಿವಾಟಿನಡಿ ಭಾರತವು ಅಮೆರಿಕಕ್ಕೆ 1937 ಉತ್ಪನ್ನಗಳ ರಫ್ತು ಮಾಡುತ್ತದೆ.

ಆದ್ಯತಾ ವಹಿವಾಟಿನ ನಿಯಮಗಳೇನು?

ಆದ್ಯತಾ ವಹಿವಾಟಿನ ನಿಯಮಗಳೇನು?

ಈ ವಹಿವಾಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಶೂನ್ಯ ಅಥವಾ ಕಡಿಮೆ ಸುಂಕ ಹಾಕಲಾಗುತ್ತದೆ. ಬಡ ದೇಶಗಳ ಪಟ್ಟಿಯನ್ನು ಅಮೆರಿಕವೇ ಸಿದ್ಧಪಡಿಸುತ್ತದೆ. ಆಯ್ದ ಉತ್ಪನ್ನಗಳಿಗೆ ಉಳಿದ ವಿಶ್ವ ವಾಣಿಜ್ಯ ಒಕ್ಕೂಟದ ರಾಷ್ಟ್ರಗಳಿಗಿಂತ ಕಡಿಮೆ ಸುಂಕ ಹಾಕಲಾಗುತ್ತದೆ. ಪ್ರತಿ ವರ್ಷ ಉತ್ಪನ್ನಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ. ಜತೆಗೆ ಯಾವ ದೇಶಗಳನ್ನು ಆದ್ಯತಾ ವಹಿವಾಟಿನ ಅಡಿ ಪರಿಗಣಿಸಬೇಕು ಎಂದು ಕೂಡ ತೀರ್ಮಾನಿಸಲಾಗುತ್ತದೆ.

ಯಾವೆಲ್ಲ ಉತ್ಪನ್ನಗಳಿಗೆ ಈ ಸೌಲಭ್ಯ?

ಯಾವೆಲ್ಲ ಉತ್ಪನ್ನಗಳಿಗೆ ಈ ಸೌಲಭ್ಯ?

ಕೃಷಿ ಉತ್ಪನ್ನಗಳು, ಪ್ರಾಣಿ ಜನ್ಯ ಉತ್ಪನ್ನಗಳು, ಮಾಂಸ, ಮೀನುಗಾರಿಕೆ ಉತ್ಪನ್ನ ಹಾಗೂ ಕರಕುಶಲ ವಸ್ತುಗಳು ಹೀಗೆ. ಇನ್ನು ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಹೇಳುವುದಾದರೆ ನೂರಿಪ್ಪತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆದ್ಯತಾ ವಹಿವಾಟಿನ ಅಡಿಯಲ್ಲಿ ಲಾಭ ಪಡೆಯುತ್ತಿವೆ. ಗಾತ್ರದ ಲೆಕ್ಕದಲ್ಲಿ ಹೇಳಬೇಕೆಂದರೆ ಭಾರತ ಹಾಗೂ ಬ್ರೆಜಿಲ್ ಅತಿ ದೊಡ್ಡ ಫಲಾನುಭವಿ ದೇಶಗಳು. ಚೀನಾ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಈ ಅನುಕೂಲ ಇಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US President Donald Trump said on Monday he intends to end India's preferential trade treatment, that allows $5.6 billion worth of Indian exports to enter the United States duty free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more