ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ನಡುವೆ ಅಣು ಪರೀಕ್ಷೆ ಬಗ್ಗೆ ಟ್ರಂಪ್ ಚರ್ಚೆ!

|
Google Oneindia Kannada News

ವಾಷಿಂಗ್ಟನ್, ಮೇ 24: ದಶಕಗಳ ನಂತರ ಅಮೆರಿಕ ಮತ್ತೊಮ್ಮೆ ಅಣುಪರೀಕ್ಷೆಗೆ ಮುಂದಾಗುತ್ತಿದೆಯೇ? ಕೊವಿಡ್ 19 ನಿಯಂತ್ರಿಸಲು ವಿಫಲವಾದ ಡೊನಾಲ್ಡ್ ಟ್ರಂಪ್ ಈಗ ಅಣುಪರೀಕ್ಷೆ ವಿಷಯ ಮುಂದಿಟ್ಟುಕೊಂಡು ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

1992ರ ನಂತರ ಇದೆ ಮೊದಲ ಬಾರಿಗೆ ಅಣುಪರೀಕ್ಷೆ ನಡೆಸುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಚರ್ಚಿಸಿರುವ ಬಗ್ಗೆ ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ರಷ್ಯಾ ಹಾಗೂ ಚೀನಾಗಳಿಗೆ ಎಚ್ಚರಿಕೆ, ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಅಣು ಪರೀಕ್ಷೆ ನಡೆಸಲು ಚರ್ಚಿಸಲಾಗಿದೆ ಎಂದು ವರದಿ ಬಂದಿದೆ.

ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?

ಅಮೆರಿಕದ ರಕ್ಷಣಾ ನೀತಿಯಲ್ಲಿ ಗಣನೀಯ ಬದಲಾವಣೆ ತರಲು ಟ್ರಂಪ್ ಆಡಳಿತ ಮುಂದಾಗಿದೆ. ಇದರಿಂದಾಗಿ ಅಣ್ವಸ್ತ್ರ ಹೊಂದಿರುವ ದೇಶಗಳ ನಡುವೆ ನಾಟಕೀಯವಾಗಿ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ ಇದೆ. ಅಮೆರಿಕ ಪರೀಕ್ಷೆ ನಡೆಸಿದರೆ ಅದು ಅಭೂತಪೂರ್ವ ಮಟ್ಟದ ಅಣ್ವಸ್ತ್ರ ಸಮರಕ್ಕೆ ಚಾಲನೆ ನೀಡಲಿದೆ ಎಂದು ರಕ್ಷಣಾ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Donald Trumps Office Discusses Nuclear Test after a decade

ಮೇ 15ರಂದು ನಡೆದ ಸಭೆಯಲ್ಲಿ ಅಣು ಪರೀಕ್ಷೆಯ ಬಗ್ಗೆ ಚರ್ಚಿಸಲಾಗಿದೆ ಎಂದು ಸಭೆಯ ವಿವರಗಳನ್ನು ಬಲ್ಲ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ಸುದ್ದಿಯನ್ನು ಸೋರಿಕೆ ಮಾಡಿದ್ದಾರೆ.

ರಷ್ಯಾ ಹಾಗೂ ಚೀನಾಗಳು ನಿಯಮ ಮೀರಿ ಕಡಿಮೆ ಪ್ರಮಾಣದಲ್ಲಿ ಅಣು ಪರೀಕ್ಷೆ ನಡೆಸುತ್ತಿವೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಮಾಸ್ಕೋ ಹಾಗೂ ಬೀಜಿಂಗ್ ಪ್ರತಿನಿಧಿಗಳು, ಅಮೆರಿಕದಿಂದ ಬಂದಿರುವ ಆರೋಪಗಳನ್ನುಅಲ್ಲಗೆಳೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಬ್ಯಾಂಕ್ ಮಾಹಿತಿ ಬಟಾ ಬಯಲು!ಡೊನಾಲ್ಡ್ ಟ್ರಂಪ್ ಬ್ಯಾಂಕ್ ಮಾಹಿತಿ ಬಟಾ ಬಯಲು!

ಅಣ್ವಸ್ತ ಕುರಿತಂತೆ ಚೀನಾ, ರಷ್ಯಾ ಹಾಗೂ ಅಮೆರಿಕ ತ್ರಿಪಕ್ಷೀಯ ಒಪ್ಪಂದಕ್ಕೆ ಬರುವ ಮುನ್ನ ತ್ವರಿತ ಗತಿಯಲ್ಲಿ ಅಣು ಪರೀಕ್ಷೆ ನಡೆಸುವ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ.

ಅಣು ಪರೀಕ್ಷೆಗೆ ಅಮೆರಿಕ ಮುಂದಾದರೆ, ಅನಗತ್ಯ ಶೀತಲ ಸಮರ, ರಾಜಕೀಯ ಗೊಂದಲಗಳನ್ನು ಎದುರಿಸಬೇಕಾಗುತ್ತದೆ ಎಂದು ಅಣ್ವಸ್ತ್ರ ವಿರೋಧಿ ಅಭಿಯಾನದ ಸದಸ್ಯ 2017ರ ನೊಬೆಲ್ ಶಾಂತಿ ಪುರಸ್ಕೃತ ಬೀಟ್ರಿಸ್ ಫಿನ್ ಅವರು ಟ್ರಂಪ್ ಗೆ ಎಚ್ಚರಿಕೆ ನೀಡಿದ್ದಾರೆ.

English summary
President Donald Trump's administration has discussed holding the first US nuclear test since 1992 as a potential warning to Russia and China, the Washington Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X