ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆಯೇ ಡೊನಾಲ್ಡ್ ಟ್ರಂಪ್ ಬದುಕಿನ ರೀತಿ: ಸೋದರ ಸೊಸೆಯಿಂದಲೇ ಆರೋಪ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 30: ತಮಗೆ ಪಿತ್ರಾರ್ಜಿತವಾಗಿ ಬರಬೇಕಿದ್ದ ಲಕ್ಷಾಂತರ ಡಾಲರ್ ಹಣವನ್ನು ನೀಡದೆ ವಂಚಿಸಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕುಟುಂಬದ ಇತರರ ವಿರುದ್ಧ ಅವರ ಸೋದರ ಸೊಸೆ ಮೇರಿ ಟ್ರಂಪ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ದೂರು ಕೂಡ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್, ಅವರ ಸಹೋದರಿ ಮರಿನ್ನಾ ಟ್ರಂಪ್ ಬಾರ್ರಿ, ಆಗಸ್ಟ್‌ನಲ್ಲಿ ಮೃತಪಟ್ಟ ಅವರ ಸಹೋದರ ರಾಬರ್ಟ್ ಟ್ರಂಪ್ ವಿರುದ್ಧ ಮ್ಯಾನ್ ಹಟ್ಟನ್‌ನ ನ್ಯೂಯಾರ್ಕ್ ನ್ಯಾಯಾಲಯವೊಂದರಲ್ಲಿ ದೂರು ನೀಡಿರುವ ಅವರು, ದೊಡ್ಡ ಮಟ್ಟದ ವಂಚನೆ ಹಾಗೂ ಸಂಚಿನ ಆರೋಪ ಮಾಡಿದ್ದಾರೆ.

ಡೊನಾಲ್ಡ್ ವಿರುದ್ಧ ಗಂಭೀರ ಆರೋಪ, ಸರಿಯಾಗಿ ತೆರಿಗೆ ಕಟ್ಟಲಿಲ್ವಾ ಟ್ರಂಪ್..?ಡೊನಾಲ್ಡ್ ವಿರುದ್ಧ ಗಂಭೀರ ಆರೋಪ, ಸರಿಯಾಗಿ ತೆರಿಗೆ ಕಟ್ಟಲಿಲ್ವಾ ಟ್ರಂಪ್..?

'ವಂಚನೆ ಎನ್ನುವುದು ಈ ಕುಟುಂಬ ವ್ಯವಹಾರ ಮಾತ್ರವಲ್ಲ, ಅದು ಅವರ ಜೀವನ ಮಾರ್ಗ ಕೂಡ' ಎಂದು ಮೇರಿ ಕಿಡಿಕಾರಿದ್ದಾರೆ. ಈ ಆರೋಪಕ್ಕೆ ಡೊನಾಲ್ಡ್ ಟ್ರಂಪ್ ಅವರ ವಕೀಲ ಜೇ ಸೆಕುಲ್ವೊ, ರಾಬರ್ಟ್ ಟ್ರಂಪ್ ಅವರ ಪರ ವಕಾಲತ್ತು ವಹಿಸುತ್ತಿದ್ದ ವಕೀಲ ಹಾಗೂ ಟ್ರಂಪ್ ಬಾರ್ರಿ ಪ್ರತಿಕ್ರಿಯೆ ನೀಡಿಲ್ಲ. ಮುಂದೆ ಓದಿ...

ಪುಸ್ತಕದಲ್ಲಿ ಆರೋಪ

ಪುಸ್ತಕದಲ್ಲಿ ಆರೋಪ

ಮೇರಿ ಟ್ರಂಪ್ ಅವರು ತಮ್ಮ ಇತ್ತೀಚಿನ ಪುಸ್ತಕ 'ಟೂ ಮಚ್ ಆಂಡ್ ನೆವರ್ ಎನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟೆಡ್ ದಿ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್'ನಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಕುಟುಂಬದ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ಅದರಲ್ಲಿನ ಕೆಲವು ಅಂಶಗಳು ಈ ದೂರಿನಲ್ಲಿವೆ.

ಫ್ರೆಡ್ ಟ್ರಂಪ್ ಆಸ್ತಿ ವಂಚನೆ

ಫ್ರೆಡ್ ಟ್ರಂಪ್ ಆಸ್ತಿ ವಂಚನೆ

ಡೊನಾಲ್ಡ್ ಟ್ರಂಪ್ ಹಾಗೂ ಇತರರು ತಮ್ಮ ಅಜ್ಜ ಫ್ರೆಡ್ ಟ್ರಂಪ್ ಅವರಿಗೆ ಸೇರಿದ ಎಸ್ಟೇಟ್ ಒಂದನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಮ್ಮ ಮೇಲೆ ದೈಹಿಕ ಒತ್ತಡ ಪ್ರಯೋಗಿಸಿದ್ದರು ಎಂದು ಆರೋಪಿಸಿದ್ದಾರೆ. ಫ್ರೆಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಂದೆ. ಅವರು 1999ರಲ್ಲಿ ನಿಧನರಾಗಿದ್ದರು.

ಟ್ರಂಪ್ ವಿರುದ್ಧ ಅವರದ್ದೇ ಪಕ್ಷದವರು ತಿರುಗಿಬಿದ್ದಿದ್ದೇಕೆ?ಟ್ರಂಪ್ ವಿರುದ್ಧ ಅವರದ್ದೇ ಪಕ್ಷದವರು ತಿರುಗಿಬಿದ್ದಿದ್ದೇಕೆ?

ಸುಳ್ಳುಗಳ ಮೇಲೆ ಸುಳ್ಳು ಹೇಳಿದ್ದಾರೆ

ಸುಳ್ಳುಗಳ ಮೇಲೆ ಸುಳ್ಳು ಹೇಳಿದ್ದಾರೆ

ಟ್ರಂಪ್ ಹಾಗೂ ಕುಟುಂಬದ ಇತರರು ನನ್ನಿಂದ ಕದಿಯಲು ಗುಟ್ಟಾಗಿ ಜತೆಗೆ ಕೆಲಸ ಮಾಡುವ ಮೂಲಕ ನನಗೆ ದ್ರೋಹ ಮಾಡಿದ್ದಾರೆ. ನನಗೆ ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿ ಮೌಲ್ಯದ ಬಗ್ಗೆ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದ್ದಾರೆ. ಜತೆಗೆ ಅದರ ನೈಜ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಎಲ್ಲವನ್ನೂ ಕೊಟ್ಟುಬಿಡುವಂತೆ ಮಾಡುವ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತೆರಿಗೆ ವಂಚನೆ ಆರೋಪ

ತೆರಿಗೆ ವಂಚನೆ ಆರೋಪ

ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 2016ರಲ್ಲಿ ಕೇವಲ 750 ಡಾಲರ್ ತೆರಿಗೆ ಪಾವತಿಸಿದ್ದಾರೆ. ಕಳೆದ 15 ವರ್ಷದಲ್ಲಿ 10 ವರ್ಷ ಕಾಲ ಅವರು ತೆರಿಗೆಯನ್ನೇ ಪಾವತಿಸಿಲ್ಲ. ಆದಾಯಕ್ಕಿಂತ ನಷ್ಟವೇ ಹೆಚ್ಚು ಎಂಬ ಲೆಕ್ಕ ತೋರಿಸಿ ಅವರು ವಂಚಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

English summary
Donald Trump's Niece Mary Trump has filed a complaint against US President and other family members of cheating her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X