ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷೀಯ ಚುನಾವಣೆ ಚರ್ಚೆಯಲ್ಲಿ ಭಾಗವಹಿಸಲ್ಲ; ಡೋನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 09 : "ಅಮೆರಿಕ ಅಧ್ಯಕೀಯ ಚುನಾವಣೆ ಕುರಿತು ನಡೆಯುವ ವರ್ಚುವಲ್ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುದಿಲ್ಲ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಕ್ಟೋಬರ್ 15ರಂದು ಮುಂದಿನ ಚರ್ಚೆ ನಿಗದಿಯಾಗಿದೆ.

ಡೋನಾಲ್ಡ್ ಟ್ರಂಪ್ FOX Businessಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಕೋವಿಡ್ ಸೋಂಕು ತಗುಲಿದ ಬಳಿಕ ಮೊದಲ ಬಾರಿಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಸೋಮವಾರ ಟ್ರಂಪ್ ಶ್ವೇತ ಭವನಕ್ಕೆ ವಾಪಸ್ ಆಗಿದ್ದಾರೆ.

ಕಮಲಾ ಹ್ಯಾರಿಸ್‌ರನ್ನು 'ರಾಕ್ಷಸಿ' ಎಂದು ಉದ್ಘರಿಸಿದ ಡೊನಾಲ್ಡ್ ಟ್ರಂಪ್ ಕಮಲಾ ಹ್ಯಾರಿಸ್‌ರನ್ನು 'ರಾಕ್ಷಸಿ' ಎಂದು ಉದ್ಘರಿಸಿದ ಡೊನಾಲ್ಡ್ ಟ್ರಂಪ್

ಗುರುವಾರ ಅಧ್ಯಕ್ಷೀಯ ಚರ್ಚೆಗಳ ಆಯೋಗ (ಸಿಪಿಡಿ) ಅಕ್ಟೋಬರ್ 15ರಂದು ಮುಂದಿನ ಚರ್ಚೆ ನಡೆಯಲಿದೆ ಎಂದು ಘೋಷಣೆ ಮಾಡಿದೆ. ಈ ಘೋಷಣೆ ಹೊರಬಂದ ಕೆಲವೇ ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಟ್ರಂಪ್ ಹೇಳಿದರೆ ನಾನು ಕೊರೊನಾ ವೈರಸ್ ಲಸಿಕೆ ತೆಗೆದುಕೊಳ್ಳೊಲ್ಲ: ಕಮಲಾ ಹ್ಯಾರಿಸ್ಟ್ರಂಪ್ ಹೇಳಿದರೆ ನಾನು ಕೊರೊನಾ ವೈರಸ್ ಲಸಿಕೆ ತೆಗೆದುಕೊಳ್ಳೊಲ್ಲ: ಕಮಲಾ ಹ್ಯಾರಿಸ್

Donald Trump Refused To Participate In Virtual Presidential Debate

ಅಕ್ಟೋಬರ್ 15ರಂದು 2ನೇ ಚರ್ಚೆ ನಡೆಯಲಿದೆ. ಅಭ್ಯರ್ಥಿಗಳು ವಿವಿಧ ಪ್ರದೇಶಗಳಿಂದ ವರ್ಚುವಲ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಡಿಪಿ ಕೇಳಿತ್ತು. ಆದರೆ, ಸಂದರ್ಶನದಲ್ಲಿ ಟ್ರಂಪ್ ಜೋ ಬೈಡನ್ ಜೊತೆ ತಾವು ವರ್ಚುವಲ್ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

 ಭಾರತೀಯರಿಗೆ ಹಿನ್ನಡೆ ಸಾಧ್ಯತೆ: ಹೆಚ್‌-1ಬಿ ವೀಸಾಗಳ ಮೇಲೆ ತೀವ್ರ ಮಿತಿ ಹೇರಲಿರುವ ಟ್ರಂಪ್ ಭಾರತೀಯರಿಗೆ ಹಿನ್ನಡೆ ಸಾಧ್ಯತೆ: ಹೆಚ್‌-1ಬಿ ವೀಸಾಗಳ ಮೇಲೆ ತೀವ್ರ ಮಿತಿ ಹೇರಲಿರುವ ಟ್ರಂಪ್

"ಆಯೋಗ ಚರ್ಚೆಯ ರೀತಿಯನ್ನು ಬದಲಾಯಿಸಿದೆ ಇದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ನಾವು ವರ್ಚುವಲ್ ಡಿಬೇಟ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಇಂತಹದ್ದರಲ್ಲಿ ಸಮಯ ವ್ಯರ್ಥ ಮಾಡುವುದಿಲ್ಲ" ಎಂದು ಡೊನಾಲ್ಡ್ ಟ್ರಂಪ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜೋ ಬೈಡನ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅಧ್ಯಕ್ಷರು ಏನು ಮಾಡಲು ಹೊರಟಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಪ್ರತಿ ಸೆಕೆಂಡಿಗೆ ಒಮ್ಮೆ ಅವರು ಮನಸ್ಸನ್ನು ಬದಲಾಯಿಸುತ್ತಾರೆ. ಇದಕ್ಕೆ ಪ್ರತಿಕ್ರಿಯೆ ನೀಡುವುದು ಬೇಜವಾಬ್ದಾರಿ ಆಗುತ್ತದೆ" ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡನ್ ಮೊದಲ ಚರ್ಚೆಯಲ್ಲಿ ಮುಖಾಮುಖಿಯಾಗಿದ್ದರು. ಅಧ್ಯಕೀಯ ಚುನಾವಣೆ ಬಗ್ಗೆ ಚರ್ಚೆಗಳನ್ನು ಮಾಡಿದ್ದರು. ಒಟ್ಟು ಮೂರು ಚರ್ಚೆಗಳು ನಡೆಯಲಿವೆ.

English summary
In a interview America president Donald Trump refused to participate in virtual presidential debate. Commission on presidential debates announced next debate on October 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X