ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ಅಮೆರಿಕದ ಪ್ರತಿಷ್ಠಿತ "ಲೀಜನ್ ಆಫ್ ಮೆರಿಟ್" ಗೌರವ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 22: ಅಮೆರಿಕದ ಪ್ರತಿಷ್ಠಿತ "ಲೀಜನ್ ಆಫ್ ಮೆರಿಟ್" ಪ್ರಶಸ್ತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಿದ್ದಾರೆ.

ಉಭಯ ದೇಶಗಳ ನಡುವಿನ ಯುದ್ಧತಂತ್ರದ ಸಹಭಾಗಿತ್ವವನ್ನು ವೃದ್ಧಿಸಿದ ನಾಯಕತ್ವ ಗುಣ ಹಾಗೂ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ರೂಪಿಸಿದ ಕಾರಣಕ್ಕೆ ಮೋದಿ ಅವರಿಗೆ ಈ ಗೌರವ ಸಮರ್ಪಿಸಲಾಗಿದೆ. ವೈಟ್ ಹೌಸ್ ನಲ್ಲಿ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ತರಣ್ ಜೀತ್ ಸಿಂಗ್ ಸಂಧು ನರೇಂದ್ರ ಮೋದಿ ಅವರ ಪರವಾಗಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಯಾನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇಂದಿನಿಂದ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ: ಪ್ರಧಾನಿ ಮೋದಿಯಿಂದ ಉದ್ಘಾಟನೆಇಂದಿನಿಂದ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ: ಪ್ರಧಾನಿ ಮೋದಿಯಿಂದ ಉದ್ಘಾಟನೆ

ಅಮೆರಿಕ ಸಶಸ್ತ್ರ ಪಡೆ ವತಿಯಿಂದ ರಾಜ್ಯ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ನೀಡಲಾಗುವ ಅತ್ಯುನ್ನತ ಪದವಿಯ ಮುಖ್ಯ ಕಮಾಂಡರ್ ಲೀಜನ್ ಆಫ್ ಮೆರಿಟ್ ಅನ್ನು ಮೋದಿಯವರಿಗೆ ನೀಡಲಾಗಿದೆ.

Donald Trump Presents PM Narendra Modi With Prestigious Legion Of Merit

ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಜಾಗತಿಕ ಶಕ್ತಿಯಾಗಿ ಭಾರತವನ್ನು ಅಭಿವೃದ್ಧಿಪಡಿಸಿದ, ಅಮೆರಿಕ ಹಾಗೂ ಭಾರತದ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಅತ್ಯುನ್ನತ ಮಟ್ಟಕ್ಕೆ ತಂದ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮೋದಿ ಅವರೊಂದಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ನ ಮಾಜಿ ಪ್ರಧಾನಿ ಶಿನ್ಸೊ ಅಬೆ ಅವರಿಗೂ ಪ್ರಶಸ್ತಿ ನೀಡಲಾಗಿದ್ದು, ಆ ದೇಶದ ರಾಯಭಾರಿಗಳು ಪ್ರಶಸ್ತಿ ಸ್ವೀಕರಿಸಿದರು.

ನಾಯಕತ್ವ ಹಾಗೂ ಮುಕ್ತ ಇಂಡೋ-ಪೆಸಿಫಿಕ್ ಸಹಭಾಗಿತ್ವದ ಕಾರಣಕ್ಕೆ ಅಬೆ ಅವರಿಗೆ ಪ್ರಶಸ್ತಿ ನೀಡಿದ್ದು, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ನಾಯಕತ್ವ ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಿ ಸಮಗ್ರ ಭದ್ರತೆ ಒದಗಿಸಿದ ದೃಷ್ಟಿಯಿಂದ ಪ್ರಶಸ್ತಿ ನೀಡಿ ಗೌರವಿಸಿರುವುದಾಗಿ ತಿಳಿದುಬಂದಿದೆ.

English summary
US President Donald Trump on Monday presented the prestigious Legion of Merit to Prime Minister Narendra Modi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X