ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಜಗಳ ಶಮನಕ್ಕೆ ಸಹಾಯ ಮಾಡಲು ಸಿದ್ಧ: ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 5: ಭಾರತ ಮತ್ತು ಚೀನಾ ನಡುವಿನ ಲಡಾಖ್ ಗಡಿ ಸಂಘರ್ಷವನ್ನು ಶಮನಗೊಳಿಸಲು ಸಹಾಯ ಮಾಡಲು ಸಿದ್ಧ ಇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಪೂರ್ವ ಲಡಾಖ್‌ನ ವಾಸ್ತವ ಗಡಿ ರೇಖೆ (ಪಿಎಲ್‌ಎ) ಉದ್ದಕ್ಕೂ ಭಾರತ-ಚೀನಾ ಸೇನಾ ಪಡೆಗಳು ನೆಲೆ ನಿಂತಿರುವುದರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ತಿಳಿದಿರುವಂತೆ ಚೀನಾ ಮತ್ತು ಭಾರತ ಗಡಿಯಲ್ಲಿ ಉತ್ತಮವಾಗಿ ಸಾಗುತ್ತಿದ್ದಾರೆ. ಅಲ್ಲಿ ಬಹಳ ಕೆಟ್ಟ ಸ್ಥಿತಿ ಉಂಟಾಗಿದೆ. ಚೀನಾ ಮತ್ತು ಭಾರತದಡೆಗಿನ ಗೌರವದೊಂದಿಗೆ ಸಹಾಯ ಮಾಡಲು ನಾವು ಸಿದ್ಧರಾಗಿದ್ದೇವೆ. ನಾವು ಏನನ್ನಾದರೂ ಮಾಡಬಹುದಾಗಿದ್ದರೆ ಅದರಲ್ಲಿ ಭಾಗಿಯಾಗಲು ಇಷ್ಟಪಡುತ್ತೇವೆ. ಈಗಾಗಲೇ ಎರಡೂ ದೇಶಗಳೊಂದಿಗೆ ಈ ಕುರಿತು ಮಾತನಾಡುತ್ತಿದ್ದೇವೆ ಎಂದರು.

ಭಾರತವನ್ನು ಚೀನಾ ಬೆದರಿಸುತ್ತಿದೆಯೇ ಎಂಬ ಪ್ರಶ್ನೆಗೆ, ಹಾಗೆ ಮಾಡುತ್ತಿಲ್ಲ ಎಂದು ನನ್ನ ಆಶಯ. ಆದರೆ ಹೆಚ್ಚಿನ ಜನರು ಅರ್ಥಮಾಡಿಕೊಂಡಿರುವುದಕ್ಕಿಂತಲೂ ಅವರಿಬ್ಬರೂ ಬಹಳ ಕಠಿಣವಾಗಿ ಹೋಗುತ್ತಿರುವುದಂತೂ ನಿಶ್ಚಿತ ಎಂದು ತಿಳಿಸಿದರು.

Donald Trump Offers To Help On India-China Standoff In Ladakh

ಈ ಸಮಯದಲ್ಲಿ ನೀವು ರಷ್ಯಾಕ್ಕಿಂತಲೂ ಹೆಚ್ಚು ಮಾತನಾಡುವಂತಹ ದೇಶವೆಂದರೆ ಚೀನಾ. ಏಕೆಂದರೆ ಚೀನಾ ಮಾಡುತ್ತಿರುವ ಕೆಲಸಗಳು ಇನ್ನೂ ಬಹಳ ಕೆಟ್ಟದಾಗಿವೆ. ಚೀನಾ ವೈರಸ್‌ನಿಂದ ಏನೆಲ್ಲ ಆಯಿತು ನೋಡಿ. ಜಗತ್ತಿನ ಎಲ್ಲ 188 ದೇಶಗಳಿಗೆ ಅವರು ಏನು ಮಾಡಿದ್ದಾರೆ ನೋಡಿ ಎಂದು ಕೊರೊನಾ ವೈರಸ್ ಹರಡಿಸಿದ ಚೀನಾ ವಿರುದ್ಧ ಮತ್ತೆ ಕಿಡಿಕಾರಿದರು.

English summary
US President Donald Trump said India-China standoff in Ladakh is very nasty and he is ready to help on this matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X