ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪ್ರದಾಯ ಮುರಿದ ಡೊನಾಲ್ಡ್ ಟ್ರಂಪ್, ಬೈಡನ್ ಪದಗ್ರಹಣದ ವೇಳೆ ರೆಸಾರ್ಟ್ ವಾಸ!

|
Google Oneindia Kannada News

ವಾಷಿಂಗ್ಟನ್, ಜನವರಿ 20: ಜೋ ಬೈಡನ್ ಅವರ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ಕೊನೆಯ ಪಯಣ ಆರಂಭಿಸಿದ್ದಾರೆ. ಸಂಪ್ರದಾಯವನ್ನು ಮುರಿದಿರುವ ಅವರು, ಬೈಡನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಲಿದ್ದಾರೆ.

ಪತ್ನಿ ಮೆಲಾನಿಯಾ ಟ್ರಂಪ್ ಜತೆಗೆ ಕೊನೆಯ ಸಲ ಏರ್ ಫೋರ್ಸ್ ಒನ್ ವಿಮಾನವೇರಿ ಫ್ಲೋರಿಡಾದ ಪಾಮ್ ಬೀಚ್‌ಗೆ ಪ್ರಯಾಣಿಸಿದ ಟ್ರಂಪ್, ಶ್ವೇತಭವನದ ವೈಭವ ಮತ್ತು ಅಧಿಕಾರದ ಜೀವನಕ್ಕೆ ಗುಡ್‌ಬೈ ಹೇಳಿದರು. ಅದರ ಜತೆಗೆ ತಾವು ಮತ್ತಷ್ಟು ಪ್ರಬಲರಾಗಿ ಮರಳುವ ಭರವಸೆಯನ್ನು ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವುಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು

ಬುಧವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದ ನಂತರ ವಾಷಿಂಗ್ಟನ್‌ನ ಹೊರಗಿನ ವಾಯುನೆಲೆಯಲ್ಲಿ ಸಿಬ್ಬಂದಿ, ಬೆಂಬಲಿಗರು ಮತ್ತು ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಕಿರು ಭಾಷಣ ಮಾಡಿದ ಟ್ರಂಪ್, ನಾಲ್ಕು ವರ್ಷ ಅವಿಸ್ಮರಣೀಯ ಕ್ಷಣಗಳನ್ನು ಕಳೆದಿದ್ದಾಗಿ ಹೇಳಿಕೊಂಡರು.

Donald Trump Leaves White House, Skips Bidens Inauguration And Travels To Florida

'ನಾವು ಜತೆಗೂಡಿ ಸಾಕಷ್ಟು ಸಾಧನೆ ಮಾಡಿದ್ದೇವೆ. ನಾನು ನಿಮಗಾಗಿ ಸದಾ ಹೋರಾಡುತ್ತೇನೆ. ಮತ್ತಷ್ಟು ಪ್ರಬಲನಾಗಿ ಮರಳಿ ಬರುತ್ತೇನೆ. ನಾನು ಗುಡ್‌ಬೈ ಹೇಳಲು ಬಯಸಿದ್ದೆನಷ್ಟೇ. ಕಚೇರಿಯಲ್ಲಿ ಕಳೆದ ಸಮಯವು ತಮ್ಮ ಜೀವಮಾನದ ಗೌರವ' ಎಂದರು.

ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?

ತಮ್ಮ ಭಾಷಣದಲ್ಲಿ ಬೈಡನ್ ಹೆಸರನ್ನು ಪ್ರಸ್ತಾಪಿಸದ ಟ್ರಂಪ್, ಹೊಸ ಆಡಳಿತಕ್ಕೆ ಉತ್ತಮ ಅದೃಷ್ಟ ಹಾಗೂ ಮಹಾನ್ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಬೈಡನ್ ಅವರ ಪ್ರಮಾಣವಚನ ಸ್ವೀಕಾರ ನಡೆಯುವ ಸಂದರ್ಭದಲ್ಲಿ ಟ್ರಂಪ್ ಅವರು ಫ್ಲೋರಿಡಾದ ತಮ್ಮ ಮಾರ್-ಎ-ಲಾಗೋ ರೆಸಾರ್ಟ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಮೆರಿಕದ ಸುಮಾರು 150 ವರ್ಷಗಳ ಅಧ್ಯಕ್ಷೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಮ್ಮ ಉತ್ತರಾಧಿಕಾರಿಯ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಮೊದಲ ಅಧ್ಯಕ್ಷ ಎಂದೆನಿಸಿದ್ದಾರೆ.

ಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನಬೈಡನ್ ಸಂಪುಟದಲ್ಲಿ 20 ಭಾರತೀಯರು, ಇಬ್ಬರು ಕನ್ನಡಿಗರಿಗೆ ಉನ್ನತ ಸ್ಥಾನ

ಶ್ವೇತಭವನದಿಂದ ನಿರ್ಗಮಿಸುವ ಮುನ್ನ ಬೈಡನ್‌ಗೆ ಟ್ರಂಪ್ ಪತ್ರವೊಂದನ್ನು ಬಿಟ್ಟುಹೋಗಿದ್ದಾರೆ. ಆ ಪತ್ರದಲ್ಲಿ ಏನಿದೆ ಎನ್ನುವುದು ಬಹಿರಂಗವಾಗಿಲ್ಲ. ಉಪಾಧ್ಯಕ್ಷ ಮೈಕ್ ಪೆನ್ಸ್, ಟ್ರಂಪ್ ಬೀಳ್ಕೊಡುಗೆ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಆದರೆ, ಬೈಡನ್ ಪ್ರಮಾಣವಚನದ ವೇಳೆ ಉಪಸ್ಥಿತರಿರಲಿದ್ದಾರೆ. ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್, ಬರಾಕ್ ಒಬಾಮ ಮತ್ತು ಕ್ಲಿಂಟನ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary
Donald Trump left the White House for the last time and travels to Florida with wife while skipping the inauguration of Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X