ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ: ಮತ್ತೆ ಮೂಗು ತೂರಿಸಿದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 21: ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಲು ಸಿದ್ಧರಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದಲ್ಲಿನ ಸನ್ನಿವೇಶ ಸ್ಫೋಟಕವಾದದ್ದು ಮತ್ತು ಸಂಕೀರ್ಣವಾದದ್ದು ಎಂದಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ಸರಿಪಡಿಸಲು ಮಧ್ಯಸ್ಥಿಕೆಯೋ ಅಥವಾ ಇನ್ನೇನಾದರೋ ಮಾಡಲು ಸಾಧ್ಯವಾದುದ್ದನ್ನು ಮಾಡುವುದಾಗಿ ಹೇಳಿದ್ದಾರೆ.

ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್‌ಗೆ ಟ್ರಂಪ್ ಕರೆಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್‌ಗೆ ಟ್ರಂಪ್ ಕರೆ

'ಕಾಶ್ಮೀರವು ಅತ್ಯಂತ ಸಂಕೀರ್ಣ ಸ್ಥಳ. ಅಲ್ಲಿ ಹಿಂದೂಗಳಿದ್ದಾರೆ, ಮುಸ್ಲಿಮರು ಇದ್ದಾರೆ. ಅವರು ಜತೆಯಾಗಿ ಹೊಂದಿಕೊಂಡು ಹೋಗುತ್ತಿದ್ದಾರೆ ಎಂದು ನಾನು ಹೇಳಲಾರೆ. ಈಗ ಅಲ್ಲಿ ಆಗುತ್ತಿರುವುದು ಅದೇ' ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Donald Trump Kashmir Mediate India Pakistan Complicated Situation

ಫ್ರಾನ್ಸ್‌ನ ಬಿಯಾರಿಟ್ಜ್‌ನಲ್ಲಿ ನಡೆಯಲಿರುವ ಜಿ7 ರಾಷ್ಟ್ರಗಳ ಸಮಾವೇಶದ ವೇಳೆ ಮೋದಿ ಮತ್ತು ಟ್ರಂಪ್ ಭೇಟಿಯಾಗಲಿದ್ದಾರೆ.

'ನಾವು ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತಿದ್ದೇವೆ. ಈ ಎರಡೂ ದೇಶಗಳ ನಡುವೆ ಭಾರಿ ದೊಡ್ಡ ಸಮಸ್ಯೆಗಳಿವೆ. ಮಧ್ಯಸ್ಥಿಕೆ ಅಥವಾ ಬೇರೆ ರೀತಿಯಲ್ಲಿ ನಾನು ಹೆಚ್ಚಿನದ್ದನ್ನು ಮಾಡುತ್ತೇನೆ. ಅದು ಸಂಕೀರ್ಣ ಸ್ಥಿತಿ. ಅಲ್ಲಿ ಧರ್ಮದ ಕುರಿತು ಹೆಚ್ಚಿನ ಸವಾಲುಗಳಿವೆ. ಧರ್ಮ ಎನ್ನುವುದು ಸಂಕೀರ್ಣ ವಿಷಯ' ಎಂದು ಟ್ರಂಪ್ ಹೇಳಿದ್ದಾರೆ.

ಪಾಕ್ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾದ ಇಮ್ರಾನ್ ಖಾನ್ಪಾಕ್ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾದ ಇಮ್ರಾನ್ ಖಾನ್

ಇದಕ್ಕೂ ಮೊದಲು ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿ ಕಾಶ್ಮೀರ ವಿಚಾರದ ಕುರಿತು ಮಾತುಕತೆ ನಡೆಸಿದ್ದರು.

'ಇಮ್ರಾನ್ ಖಾನ್ ಮತ್ತು ನರೇಂದ್ರ ಮೋದಿ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಅವರಿಬ್ಬರೂ ನನಗೆ ಉತ್ತಮ ಸ್ನೇಹಿತರು ಮತ್ತು ಮಹಾನ್ ವ್ಯಕ್ತಿಗಳು. ಇಬ್ಬರೊಂದಿಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ' ಎಂದು ತಿಳಿಸಿದ್ದರು.

English summary
US President Donald Trump said he is interested to mediate on Kashmir between Indian and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X