ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ವಾಗ್ದಂಡನೆ: ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭ

|
Google Oneindia Kannada News

ವಾಷಿಂಗ್ಟನ್, ಜನವರಿ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ವಾಗ್ದಂಡನೆಯ ವಿಚಾರಣೆ ಗುರುವಾರ ಅಮೆರಿಕದ ಸೆನೆಟ್‌ನಲ್ಲಿ ಆರಂಭವಾಗಿದೆ. ಅಮೆರಿಕದ 45ನೇ ಅಧ್ಯಕ್ಷರಾಗಿರುವ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷಾತೀತವಾಗಿ ನಿರ್ಧರಿಸುವುದಾಗಿ ಸೆನೆಟ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಅಮೆರಿಕದ ಇತಿಹಾಸದಲ್ಲಿ ಮೂರನೇ ಬಾರಿಗೆ ಈ ಪ್ರಕ್ರಿಯೆಗಾಗಿ ಸೆನೆಟ್ ಸದನ ವಾಗ್ದಂಡನೆಯ ನ್ಯಾಯಾಲಯವಾಗಿ ಬದಲಾಗಿದೆ. ಈ ಸಭೆಯ ಅಧ್ಯಕ್ಷತೆ ವಹಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಸೆನೆಟರ್‌ಗಳಿಗೆ ಪ್ರತಿಜ್ಞೆ ಬೋಧಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ಮುಖಭಂಗ: ವಾಗ್ದಂಡನೆಗೆ ಒಪ್ಪಿಗೆ

ಕಪ್ಪನೆಯ ನಿಲುವಂಗಿ ಧರಿಸಿದ್ದ ನ್ಯಾ. ರಾವರ್ಟ್ಸ್, ಅಮೆರಿಕದ ಸಂವಿಧಾನಕ್ಕೆ ಅನುಗುಣವಾಗಿ ಪಕ್ಷಾತೀತ ನ್ಯಾಯ ನೀಡುವುದಾಗಿ ಪ್ರತಿಜ್ಞೆ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ಎಲ್ಲರೂ ಒಕ್ಕೊರಲಿನಿಂದ ಬಲಗೈ ಮೇಲೆತ್ತಿ, 'ಹೌದು' ಎಂದರು. ಈ ವೇಳೆ 99 ಸಂಸದರು ಹಾಜರಿದ್ದು, ಒಬ್ಬರು ಗೈರಾಗಿದ್ದರು.

Donald Trump Impeachment Hearing Begins In Senate

ಇದಕ್ಕೂ ಮುನ್ನ ಸಾಂಕೇತಿಕ ನಡೆಯಾಗಿ ಟ್ರಂಪ್ ಅವರ ವಿರುದ್ಧದ ಅಧಿಕಾರ ದುರ್ಬಳಕೆ ಮತ್ತು ಕಾಂಗ್ರೆಸ್ ಚಟುವಟಿಕೆಗೆ ಅಡ್ಡಿಪಡಿಸಿದ್ದರ ವಾಗ್ದಂಡನೆಯ ಆರೋಪಗಳ ಎರಡು ಅಂಶಗಳನ್ನು ಸೆನೆಟ್‌ನಲ್ಲಿ ಓದಲಾಯಿತು.

ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ: ವಾಗ್ದಂಡನೆ ಪರ ಅಧಿಕ ಮತ

ಡಿಸೆಂಬರ್‌ನಲ್ಲಿ ಜನಪ್ರತಿನಿಧಿಗಳ ಸಭೆಯಲ್ಲಿ ನಡೆದ ಮಹಾಭಿಯೋಗದ ಪ್ರಕ್ರಿಯೆಯಲ್ಲಿ ಟ್ರಂಪ್ ವಿರುದ್ಧ ಅಧಿಕ ಮತಗಳು ಚಲಾವಣೆಗೊಂಡಿದ್ದವು. ಅದಕ್ಕೂ ಮುನ್ನ ನ್ಯಾಯಾಂಗ ಸಮಿತಿ ಕೂಡ ವಾಗ್ದಂಡನೆಯ ಎರಡು ಆರೋಪಗಳನ್ನು ಒಪ್ಪಿಕೊಂಡಿತ್ತು. ಸೆನೆಟ್‌ನಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಸದಸ್ಯರೇ ಹೆಚ್ಚಿದ್ದಾರೆ.

English summary
The impeachment trail of US Donald Trump begins in the US Senate on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X