ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಕನಿಯಲ್ಲಿ ನಿಂತು ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 11 : "ನಾನು ಪರಿಣಾಮವಾಗಿ ಥೆರಪಿ ಮತ್ತು ಔಷಧಿಗಳನ್ನು ಸಿದ್ಧಪಡಿಸುತ್ತಿದ್ದೇವೆ. ನಾವು ಕಾಯಿಲೆಯಿಂದ ಗುಣಮುಖರಾಗುತ್ತೇವೆ, ಕೆಲವೇ ದಿನಗಳಲ್ಲಿ ಔಷಧಿ ಬರಲಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಕೋವಿಡ್ ಸೋಂಕು ತಗುಲಿದ್ದ ಡೊನಾಲ್ಡ್ ಟ್ರಂಪ್ ಮೊದಲ ಬಾರಿ ಶ್ವೇತ ಭವನದ ಬಾಲ್ಕನಿ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಬಾಲ್ಕನಿಯಲ್ಲಿ ಒಬ್ಬರೇ ನಿಂತು ಮಾಸ್ಕ್ ಧರಿಸದೇ ಟ್ರಂಪ್ ಭಾಷಣ ಮಾಡಿದರು.

 ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್ ಜೋ ಬೈಡೆನ್ ಗೆದ್ರೂ ''ಕಮ್ಯೂನಿಸ್ಟ್'' ಕಮಲಾ ಅಧ್ಯಕ್ಷೆಯಾಗ್ತಾರೆ: ಟ್ರಂಪ್

Donald Trump

ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಟ್ರಂಪ್ ಸೋಮವಾರ ಡಿಸ್ಚಾರ್ಜ್ ಆಗಿ ಶ್ವೇತ ಭವನಕ್ಕೆ ಆಗಮಿಸಿದ್ದರು. ಬಳಿಕ ಇದೇ ಮೊದಲ ಬಾರಿಗೆ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷೀಯ ಚುನಾವಣೆ ಚರ್ಚೆಯಲ್ಲಿ ಭಾಗವಹಿಸಲ್ಲ; ಡೋನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆ ಚರ್ಚೆಯಲ್ಲಿ ಭಾಗವಹಿಸಲ್ಲ; ಡೋನಾಲ್ಡ್ ಟ್ರಂಪ್

"ಕಾನೂನು ಮತ್ತು ಸುವ್ಯವಸ್ಥೆಗಾಗಿ ಶಾಂತಿಯುತ ಪ್ರತಿಭಟನೆ" ಎಂಬ ಕಾರ್ಯಕ್ರಮಕ್ಕಾಗಿ ನೂರಾರು ಜನರು ಶ್ವೇತ ಭವನದ ಲಾನ್‌ನಲ್ಲಿ ಸೇರಿದ್ದರು. "ಐ ಯಾಮ್ ಫೀಲಿಂಗ್ ಗ್ರೇಟ್" ಎಂದು ಡೊನಾಲ್ಡ್ ಟ್ರಂಪ್ ಜನರನ್ನು ಉದ್ದೇಶಿಸಿ ಮಾತು ಆರಂಭಿಸಿದರು.

ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್ ಕೋವಿಡ್ ಹಬ್ಬಿಸಿದ ಚೀನಾ ದೊಡ್ಡ ಬೆಲೆ ತೆರಲಿದೆ; ಟ್ರಂಪ್

"ನಿಮ್ಮ ಹಾರೈಕೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದ ಡೊನಾಲ್ಡ್ ಟ್ರಂಪ್, "ನಾವು ದೊಡ್ಡ ದೊಡ್ಡ ಸಮಾವೇಶಗಳನ್ನು ಆರಂಭಿಸಲಿದ್ದೇವೆ. ನಮ್ಮ ದೇಶವನ್ನು ಸೋಶಿಯಲಿಸ್ಟ್ ದೇಶವಾಗಲು ನಾವು ಬಿಡುವುದಿಲ್ಲ" ಎಂದು ಹೇಳಿದರು.

ಚೀನಾದ ಮೇಲೆ ಸಹ ಆರೋಪಗಳನ್ನು ಮಾಡಿದ ಟ್ರಂಪ್, "ಔಷಧಿ ಕೆಲವೇ ದಿನಗಳಲ್ಲಿ ಬರಲಿದೆ. ನಮ್ಮಲ್ಲಿ ಉತ್ತಮ ಕಂಪನಿಗಳಿದ್ದು, ಅವುಗಳನ್ನು ಸರಬರಾಜು ಮಾಡಲಿವೆ. ಚೀನಾ ವೈರಸ್ ವಿರುದ್ಧ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ" ಎಂದರು.

ಶ್ವೇತ ಭವನಕ್ಕೆ ಬಂದ ಬಳಿಕ ಟ್ರಂಪ್ ಹಲವಾರು ಸಂದರ್ಶನಗಳನ್ನು, ಟಿವಿ ಕಾರ್ಯಕ್ರಮಗಳನ್ನು ಮಾಡಿದ್ದರು. ಆದರೆ, ಮೊದಲ ಬಾರಿಗೆ ಜನರನ್ನು ಉದ್ದೇಶಿಸಿ ಮಾತನಾಡಿದರು. ಟ್ರಂಪ್ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂಬ ಪ್ರಕಟಣೆಯನ್ನು ಶ್ವೇತ ಭವನ ಇನ್ನೂ ಹೊರಡಿಸಿಲ್ಲ.

English summary
America president Donald Trump made his first public appearance. Trump return to White House from a three-day stay in the hospital for COVID-19. Not wearing a mask Trump spoke from the balcony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X