ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ವಂಚನೆ ನಿರಾಕರಿಸಿದ್ದ ಅಧಿಕಾರಿಯನ್ನು ವಜಾಗೊಳಿಸಿದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 18: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಎದುರು ಸೋಲು ಅನುಭವಿಸಿರುವ ಡೊನಾಲ್ಡ್ ಟ್ರಂಪ್ ಮಾಡಿರುವ, ಚುನಾವಣೆಯಲ್ಲಿ ಭಾರಿ ವಂಚನೆ ನಡೆದಿದೆ ಎಂಬ ಆರೋಪವನ್ನು ನಿರಾಕರಿಸಿದ್ದ ಹಿರಿಯ ಚುನಾವಣಾ ಭದ್ರತಾ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ನವೆಂಬರ್ 3ರಂದು ನಡೆದ ಚುನಾವಣೆಯು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಸುರಕ್ಷಿತ ಚುನಾವಣೆ ಎಂದು ಸರ್ಕಾರದ ಹಿರಿಯ ಚುನಾವಣಾ ಭದ್ರತಾ ಅಧಿಕಾರಿ ಕ್ರಿಸ್ ಕ್ರೆಬ್ಸ್ ಮತ್ತು ಅವರ ಸಂಸ್ಥೆ ಜಂಟಿಯಾಗಿ ಘೋಷಣೆ ಮಾಡಿತ್ತು. ಕ್ರಿಸ್ ಕ್ರೆಬ್ಸ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕೆಲಸದಿಂದ ಕಿತ್ತುಹಾಕಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

ಯುಎಸ್ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವು ಒಪ್ಪಿಕೊಂಡ ಟ್ರಂಪ್!ಯುಎಸ್ ಚುನಾವಣೆಯಲ್ಲಿ ಜೋ ಬಿಡೆನ್ ಗೆಲುವು ಒಪ್ಪಿಕೊಂಡ ಟ್ರಂಪ್!

ಜೋ ಬೈಡನ್ ಎದುರು ತಮ್ಮ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವ ಡೊನಾಲ್ಡ್ ಟ್ರಂಪ್, ಮತ ಎಣಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಪುರಾವೆರಹಿತ ಆರೋಪಗಳನ್ನು ಸತತವಾಗಿ ಮಾಡುತ್ತಿದ್ದಾರೆ.

Donald Trump Fires Top Security Official Who Rejected Election Fraud Allegations

'2020ರ ಚುನಾವಣೆಯ ಭದ್ರತೆ ಕುರಿತು ಕ್ರಿಸ್ ಕ್ರೆಬ್ಸ್ ಅವರ ಇತ್ತೀಚಿನ ಹೇಳಿಕೆ ತೀವ್ರ ಅಸಮರ್ಪಕವಾಗಿದೆ. ಚುನಾವಣೆಯಲ್ಲಿ ಭಾರಿ ಅಕ್ರಮಗಳು ಮತ್ತು ವಂಚನೆ ನಡೆದಿದೆ' ಎಂದು ಟ್ರಂಪ್ ಹೇಳಿದ್ದಾರೆ.

'ಹೀಗಾಗಿ ತಕ್ಷಣದಿಂದಲೇ ಜಾರಿಯಾಗುವಂತೆ ಕ್ರಿಸ್ ಕ್ರೆಬ್ಸ್ ಅವರನ್ನು ಸೈಬರ್ ಸೆಕ್ಯುರಿಟಿ ಮತ್ತು ಮೂಲಸೌಕರ್ಯ ಸೆಕ್ಯುರಿಟಿ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿದೆ' ಎಂದು ತಿಳಿಸಿದ್ದಾರೆ.

ಯಾರು ಅಧಿಕಾರದಲ್ಲಿರುತ್ತಾರೋ ಯಾರಿಗೆ ಗೊತ್ತು?: ಡೊನಾಲ್ಡ್ ಟ್ರಂಪ್ಯಾರು ಅಧಿಕಾರದಲ್ಲಿರುತ್ತಾರೋ ಯಾರಿಗೆ ಗೊತ್ತು?: ಡೊನಾಲ್ಡ್ ಟ್ರಂಪ್

ಚುನಾವಣೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಹೇಳಿಕೊಂಡಿದ್ದ ಕ್ರಿಸ್ ಅವರು ತಮ್ಮನ್ನು ಕೆಲಸದಿಂದ ಕಿತ್ತುಹಾಕುವ ಸಾಧ್ಯತೆ ಇದೆ ಎಂದು ಕಳೆದ ವಾರವೇ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು. 'ಸೇವೆ ಸಲ್ಲಿಸುವ ಗೌರವ ನನ್ನದಾಗಿದೆ. ನಾವು ಸರಿಯಾಗಿ ಕೆಲಸ ಮಾಡಿದ್ದೇವೆ. ಇಂದು ರಕ್ಷಿಸಿ ನಾಳೆಯನ್ನು ಭದ್ರಗೊಳಿಸಿದ್ದೇವೆ' ಎಂದು ಕ್ರಿಸ್ ಟ್ವೀಟ್ ಮಾಡಿದ್ದರು.

English summary
US Elections: Donald Trump has fired top security official Chris Krebs who rejected his claims of massive fraud in the votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X