ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹೈಡ್ರಾಕ್ಸಿಕ್ಲೋರೋಕ್ವಿನ್ ಸೇವಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಆರೋಗ್ಯ ಅದ್ಭುತವಾಗಿದೆ'!

|
Google Oneindia Kannada News

ವಾಷಿಂಗ್ಟನ್, ಮೇ 29: ''ಮಹಾಮಾರಿ ಕೋವಿಡ್-19 ಚಿಕಿತ್ಸೆಗಾಗಿ ಪ್ರಸ್ತಾಪಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ಅಥವಾ ಅವೆರಡರ ಕಾಂಬಿನೇಷನ್ ಮನುಷ್ಯನ ದೇಹಕ್ಕೆ ಮಾರಕ'' ಎಂದು ಇತ್ತೀಚೆಗಷ್ಟೇ ನಡೆದ ಅಧ್ಯಯನವೊಂದರಲ್ಲಿ ತಿಳಿದುಬಂದಿತ್ತು.

Recommended Video

ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ | Ambareesh | Birthday Special

''ಕೋವಿಡ್-19 ವಿರುದ್ಧ ಹೋರಾಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಶಕ್ತವಲ್ಲ. ಅದರಿಂದ ಸೈಡ್ ಎಫೆಕ್ಟ್ ಹೆಚ್ಚು'' ಎಂದು ಅಮೇರಿಕಾದ ಸಂಶೋಧಕರು ಕೂಡ ಹೇಳಿದ್ದರು.

ಕೋವಿಡ್-19 ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ನೀಡದಂತೆ ಯೂರೋಪಿಯನ್ ಸರ್ಕಾರಗಳು ನಿರ್ಬಂಧ ಹೇರಿವೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ದೇಹಕ್ಕೆ ಮಾರಕ ಎಂದ ಅಧ್ಯಯನ!ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ದೇಹಕ್ಕೆ ಮಾರಕ ಎಂದ ಅಧ್ಯಯನ!

ಇಷ್ಟೆಲ್ಲಾ ಆದರೂ, ಕೊರೊನಾ ವೈರಸ್ ಸೋಂಕಿನ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನೇ ಬಳಸುವಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವೈಟ್ ಹೌಸ್ ಪದೇ ಪದೇ ಉತ್ತೇಜಿಸುತ್ತಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಂಡ ಮೇಲೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯ ಅದ್ಭುತವಾಗಿದೆ ಎಂದು ವೈಟ್ ಹೌಸ್ ವಕ್ತಾರ ತಿಳಿಸಿದ್ದಾರೆ.

ಟ್ರಂಪ್ ಆರೋಗ್ಯ ಅದ್ಭುತವಾಗಿದೆ

ಟ್ರಂಪ್ ಆರೋಗ್ಯ ಅದ್ಭುತವಾಗಿದೆ

''ಎರಡು ವಾರಗಳ ಕಾಲ ಮಲೇರಿಯಾ ನಿರೋಧಕ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸೇವಿಸಿದ ಬಳಿಕ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯ ಅದ್ಭುತವಾಗಿದೆ. ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂದು ಅವರಿಗೆ ಅನಿಸಿದರೆ, ಮತ್ತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ'' ಎಂದು ವೈಟ್ ಹೌಸ್ ವಕ್ತಾರ ಹೇಳಿದ್ದಾರೆ.

ಯಾವ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ.?

ಯಾವ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ.?

ಹೈಡ್ರಾಕ್ಸಿಕ್ಲೋರೋಕ್ವಿನ್ ಸಲ್ಫೇಟ್ ಅನ್ನು ಮೊದಲು ಸಿನ್ಥೆಸೈಸ್ ಮಾಡಲಾಗಿದ್ದು 1946 ರಲ್ಲಿ. ಮಲೇರಿಯಾ ರೋಗವನ್ನು ತಡೆಗಟ್ಟಲು ಇದನ್ನ ಔಷಧಿಯಾಗಿ ಬಳಸಲಾಗುತ್ತದೆ. ಮಲೇರಿಯಾ, ರುಮಟಾಯ್ಡ್ ಆರ್ಥ್ರೈಟಿಸ್, ಲೂಪಸ್, ಚೈಲ್ಡ್ ಹುಡ್ ಆರ್ಥ್ರೈಟಿಸ್ ಮತ್ತು ಇತರೆ ಆಟೋ-ಇಮ್ಯೂನ್ ಕಾಯಿಲೆಗಳ ಚಿಕಿತ್ಸೆಗಳಿಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸು ಯು.ಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್.ಡಿ.ಎ) ಅನುಮೋದಿಸಿದೆ.

ಯುರೋಪ್ : ಕೊವಿಡ್ 19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಷೇಧ!ಯುರೋಪ್ : ಕೊವಿಡ್ 19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ನಿಷೇಧ!

ಹೈಡ್ರಾಕ್ಸಿಕ್ಲೋರೋಕ್ವಿನ್ ಗೆ ಅನುಮೋದನೆ ಸಿಕ್ಕಿಲ್ಲ

ಹೈಡ್ರಾಕ್ಸಿಕ್ಲೋರೋಕ್ವಿನ್ ಗೆ ಅನುಮೋದನೆ ಸಿಕ್ಕಿಲ್ಲ

ಕೋವಿಡ್-19 ಚಿಕಿತ್ಸೆಗಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಲು ಯು.ಎಸ್ ಎಫ್.ಡಿ.ಎ ಅನುಮೋದಿಸಿಲ್ಲ. ಆದರೆ, ಕೊರೊನಾ ವೈರಸ್ ಸೋಂಕಿಗೆ ಸಂಭಾವ್ಯ ಚಿಕಿತ್ಸೆಯಾಗಿ 'ಹೈಡ್ರಾಕ್ಸಿಕ್ಲೋರೋಕ್ವಿನ್' ಅನ್ನು ಗುರುತಿಸಲಾಗಿದೆ.

ಗೇಮ್ ಚೇಂಜರ್

ಗೇಮ್ ಚೇಂಜರ್

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಡ್ರಗ್ ಅನ್ನು 'ಗೇಮ್ ಚೇಂಜರ್' ಎಂದು ಡೊನಾಲ್ಡ್ ಟ್ರಂಪ್ ಪರಿಗಣಿಸಿದ್ದಾರೆ. ಹೀಗಾಗಿ, ಭಾರತದಿಂದ ಮಿಲಿಯನ್ ಗಟ್ಟಲೆ ಹೈಡ್ರಾಕ್ಸಿಕ್ಲೋರೋಕ್ವಿನ್ ಡೋಸ್ ಗಳನ್ನು ಟ್ರಂಪ್ ಆಡಳಿತ ಆಮದು ಮಾಡಿಕೊಂಡಿತ್ತು.

ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!ಕೋವಿಡ್-19 ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್: WHO ಕಡೆಯಿಂದ ಬಂತು ಎಚ್ಚರಿಕೆ!

English summary
Donald Trump feels absolutely great after taking Hydroxychloroquine says White House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X