ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಕೊಟ್ಟ 'ಸೂಪರ್ ಸುಪ್ರೀಂ ಐಡಿಯಾ'ಗೆ ವೈದ್ಯರೇ ತಬ್ಬಿಬ್ಬು!

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 24: ಇಡೀ ವಿಶ್ವದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ರುದ್ರ ತಾಂಡವವಾಡುತ್ತಿದೆ. ವಿಶ್ವದಾದ್ಯಂತ 191,086 ಜನರ ಜೀವ ನುಂಗಿರುವ ಕೊರೊನಾ ವೈರಸ್ ಅಮೇರಿಕಾದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಯನ್ನ ಬಲಿ ಪಡೆದಿದೆ.

Recommended Video

ಹಿಂದೂ ಮುಸ್ಲಿಂ ಒಗ್ಗಟ್ಟಾದ್ರೆ ಮಾತ್ರ ಕೊರೊನಾ ವಿರುದ್ಧದ ಹೋರಾಟ ಫಲಿಸುತ್ತೆ | Oneindia Kannada

ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಔಷಧಿಯನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ವಿವಿಧ ದೇಶಗಳ ವಿಜ್ಞಾನಿಗಳು, ಸಂಶೋಧಕರು ತೊಡಗಿರುವಾಗಲೇ 'ಹೈಡ್ರಾಕ್ಸಿಕ್ಲೋರೋಕ್ವಿನ್' ಡ್ರಗ್ ನತ್ತ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖ ಮಾಡಿದರು.

ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!

ಮಲೇರಿಯಾಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಕೋವಿಡ್-19 ರೋಗಿಗಳಿಗೂ ಉಪಯುಕ್ತ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅದನ್ನ ಭಾರತದಿಂದ ತರಿಸಿಕೊಂಡು ರೋಗಿಗಳ ಮೇಲೆ ಪ್ರಯೋಗ ಮಾಡಿದರು. ಆದ್ರೆ, ರೋಗಿಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ನಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅಸಲಿಗೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದ ರೋಗಿಗಳ ಪೈಕಿ 27.8% ಮಂದಿ ಮೃತಪಟ್ಟರು.!

ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!

ಈ ಮಹಾ ಪ್ರಮಾದ ಎಸಗಿದ ಬಳಿಕ ಎಚ್ಚೆತ್ತು ಕೊಳ್ಳದ ಡೊನಾಲ್ಡ್ ಟ್ರಂಪ್ ಇದೀಗ ವೈಟ್ ಹೌಸ್ ನಲ್ಲಿ ನ್ಯೂಸ್ ಬ್ರೀಫಿಂಗ್ ವೇಳೆ ವೈದ್ಯರಿಗೆ ಮತ್ತೊಂದು ಸೂಪರ್ ಸುಪ್ರೀಂ ಐಡಿಯಾ ಕೊಟ್ಟಿದ್ದಾರೆ. ಡೊನಾಲ್ಡ್ ಟ್ರಂಪ್ ಕೊಟ್ಟ ಐಡಿಯಾ, ಆಡಿದ ಮಾತುಗಳನ್ನು ಕೇಳಿ ವೈದ್ಯರೇ ತಬ್ಬಿಬ್ಬಾಗಿದ್ದಾರೆ.

ಅಧ್ಯಯನದಿಂದ ತಿಳಿದು ಬಂದಿದ್ದೇನು.?

ಅಧ್ಯಯನದಿಂದ ತಿಳಿದು ಬಂದಿದ್ದೇನು.?

ಗುರುವಾರದ ನ್ಯೂಸ್ ಬ್ರೀಫಿಂಗ್ ವೇಳೆ ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಂ ಬ್ರಿಯಾನ್, ''ಸೂರ್ಯನ ಬೆಳಕು, ಬಿಸಿಲು ಮತ್ತು ತೇವಾಂಶ ಇರುವ ಪ್ರದೇಶದಲ್ಲಿ ಕೊರೊನಾ ವೈರಸ್ ನಶಿಸಿ ಹೋಗುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ'' ಎಂದರು,

ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

ಡೊನಾಲ್ಡ್ ಟ್ರಂಪ್ ಹೇಳಿದ್ದೇನು.?

ವಿಲಿಯಂ ಬ್ರಿಯಾನ್ ಮಾತುಗಳನ್ನು ಕೇಳಿ, ''ಕೊರೊನಾ ವೈರಸ್ ನ ಕೊಲ್ಲಲು ಮನುಷ್ಯನ ದೇಹದೊಳಗೆ light, heat ಅಥವಾ disinfectant inject ಮಾಡಬಹುದಾ.? ಸೂರ್ಯನ ಬೆಳಕು ಮತ್ತು ಶಾಖದಿಂದ ರೋಗಿಗಳನ್ನು ಗುಣಮುಖಪಡಿಸುವ ಬಗ್ಗೆ ವೈದ್ಯರ ಬಳಿ ನಾನು ಮಾತನಾಡುತ್ತೇನೆ. ಅದು ವರ್ಕ್ ಆಗಬಹುದು, ಆಗದೆಯೂ ಇರಬಹುದು. ನಾನು ವೈದ್ಯ ಅಲ್ಲ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!

ತಬ್ಬಿಬ್ಬಾದ ವೈದ್ಯೆ

ತಬ್ಬಿಬ್ಬಾದ ವೈದ್ಯೆ

''ಕೋವಿಡ್-19 ರೋಗವನ್ನು ವಾಸಿ ಮಾಡಲು ಹೀಟ್ ಅಥವಾ ಲೈಟ್ ಬಳಸಿರುವ ಬಗ್ಗೆ ಎಲ್ಲದರೂ ಕೇಳಿದ್ದೀರಾ.?'' ಎಂದು ಡಾ.ಡೆಬೋರಾ ಬ್ರಿಕ್ಸ್ ಬಳಿ ಡೊನಾಲ್ಡ್ ಟ್ರಂಪ್ ಕೇಳಿದಾಗ, ತಬ್ಬಿಬ್ಬಾದ ಆಕೆ ''ಚಿಕಿತ್ಸೆಯಾಗಿ ಬಳಸಿಲ್ಲ'' ಎಂದು ಉತ್ತರಿಸಿದರು. ''ಈ ಬಗ್ಗೆ ಗಮನ ಹರಿಸಿ'' ಎಂದು ಆಕೆಗೆ ಡೊನಾಲ್ಡ್ ಟ್ರಂಪ್ ಸೂಚಿಸಿದರು.

ಗುಡುಗಿದ ಟ್ರಂಪ್

ಗುಡುಗಿದ ಟ್ರಂಪ್

ಡೊನಾಲ್ಡ್ ಟ್ರಂಪ್ ಆಡಿದ ಮಾತುಗಳನ್ನು ಕೇಳಿದ ಓರ್ವ ಪತ್ರಕರ್ತ, ''ವದಂತಿಗಳನ್ನು ಹರಡುತ್ತಿದ್ದೀರಾ'' ಎಂದು ಹೇಳಿದ ಕೂಡಲೆ ''ನಾನು ಇಲ್ಲಿರುವುದು ಐಡಿಯಾಗಳನ್ನು ಹೇಳುವುದಕ್ಕೆ. ಒಂದು ವೇಳೆ ಶಾಖ ಒಳ್ಳೆಯದ್ದು ಎಂದಾದರೆ, ಸೂರ್ಯನ ಬೆಳಕು ಒಳ್ಳೆಯದ್ದು ಎಂದಾದರೆ, ನನ್ನ ಮಟ್ಟಿಗೆ ಅವು ಒಳ್ಳೆಯದ್ದೇ'' ಎಂದು ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಗುಡುಗಿದರು.

ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!ಕೊರೊನಾ ಜನ್ಮ ರಹಸ್ಯದ ವ್ಯೂಹ ಬೇಧಿಸಲು ಹೊರಟ ಅಮೇರಿಕಾ.!

ಅಮೇರಿಕಾದ ಅಂಕಿ-ಅಂಶ

ಅಮೇರಿಕಾದ ಅಂಕಿ-ಅಂಶ

ಅಮೇರಿಕಾದಲ್ಲಿ ಇಲ್ಲಿಯವರೆಗೂ 8,86,709 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈವರೆಗೂ ಕೋವಿಡ್-19 ನಿಂದ 50,243 ಮಂದಿ ಬಲಿಯಾಗಿದ್ದಾರೆ. 14,997 ಜನರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

English summary
Donald Trump directs experts to see whether they can Bring light inside the body to kill Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X