ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ಗಡಿ ವಿಚಾರದಲ್ಲಿ ಮೋದಿಗೆ ಕೋಪ ತರಿಸಿದ್ದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜನವರಿ 17: ಭಾರತ ಮತ್ತು ಚೀನಾ ಏಷ್ಯಾದ ದೇಶಗಳು ಎಂಬುದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿಳಿದಿತ್ತು. ಆದರೆ ಈ ಎರಡೂ ದೇಶಗಳು ಗಡಿ ಹಂಚಿಕೊಂಡಿವೆ ಎನ್ನುವುದೇ ಅವರಿಗೆ ಗೊತ್ತಿರಲಿಲ್ಲ.

ಟ್ರಂಪ್ ಅವರ ಜ್ಞಾನ ಕಂಡು ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಘಾತಕ್ಕೊಳಗಾಗಿದ್ದರು. ಕೊನೆಗೆ ಸಾವರಿಸಿಕೊಂಡಿದ್ದರು ಎಂದು 'ವಾಷಿಂಗ್ಟನ್ ಪೋಸ್ಟ್' ಪತ್ರಕರ್ತರಾದ ಫಿಲಿಪ್ ರುಕ್ಕರ್ ಮತ್ತು ಕರೋಲ್ ಲಿಯೋನಿಂಗ್ ಬರೆದಿರುವ 'ಎ ವೆರಿ ಸ್ಟೇಬಲ್ ಜೀನಿಯಸ್' ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಡೊನಾಲ್ಡ್ ಟ್ರಂಪ್ ವಾಗ್ದಂಡನೆ: ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭಡೊನಾಲ್ಡ್ ಟ್ರಂಪ್ ವಾಗ್ದಂಡನೆ: ಸೆನೆಟ್‌ನಲ್ಲಿ ಪ್ರಕ್ರಿಯೆ ಆರಂಭ

ಟ್ರಂಪ್ ಅಧ್ಯಕ್ಷರಾದ ಬಳಿಕ ಒಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಆಗ ಔಪಚಾರಿಕ ಮಾತುಕತೆ ವೇಳೆ, 'ಚೀನಾ-ಭಾರತ ಗಡಿ ಹಂಚಿಕೆಯೇ ಆಗಿಲ್ಲ. ನೀವು ಚೀನಾ ಗಡಿಯನ್ನು ಆಕ್ರಮಿಸಿಕೊಂಡಿದ್ದೀರಿ' ಎಂದು ಟ್ರಂಪ್ ಹೇಳಿದ್ದರು. ಇದರಿಂದ ಮೋದಿ ಆಘಾತಕ್ಕೆ ಒಳಗಾಗಿದ್ದರು. ಕ್ರಮೇಣ ಅದು ಕೋಪಕ್ಕೆ ಬದಲಾಯಿತು. ಬಳಿಕ ಮಾತು ಬದಲಿಸಿದ್ದರು ಎಂದು ಅವರು ಬರೆದಿದ್ದಾರೆ.

Donald Trump Didnt Know India China Share Border

ಸಭೆ ಬಳಿಕ ಹೊರ ಬಂದಿದ್ದ ಮೋದಿ, 'ಈ ವ್ಯಕ್ತಿಗೆ ಗಾಂಭೀರ್ಯವೇ ಇಲ್ಲ. ಈ ವ್ಯಕ್ತಿಯನ್ನು ನಮ್ಮ ಪಾಲುದಾರ ಎಂದು ಪರಿಗಣಿಸಲು ಸಾಧ್ಯವೇ ಇಲ್ಲ' ಎಂದು ಸಿಟ್ಟಿನಿಂದ ನುಡಿದಿದ್ದರು. ಈ ಸಭೆಯ ಬಳಿಕ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧದಲ್ಲಿ ಭಾರತ ಒಂದು ಹೆಜ್ಜೆ ಹಿಂದೆ ಇರಿಸಿತ್ತು ಎಂದು 417 ಪುಟಗಳ ಪುಸ್ತಕದಲ್ಲಿ ಬರೆಯಲಾಗಿದೆ.

ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್ಇರಾನ್ ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಟ್ರಂಪ್

ಡೊನಾಲ್ಡ್ ಟ್ರಂಪ್ ಅವರ ತಿಳಿವಳಿಕೆ ಮಟ್ಟವು ಅನೇಕ ಬಾರಿ ಟೀಕೆಗೆ ಒಳಗಾಗಿತ್ತು. ಕಳೆದ ವರ್ಷ ನೇಪಾಳ ಮತ್ತು ಭೂತಾನ್ ಭಾರತದಲ್ಲಿ ಇದೆ ಎಂದು ನನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದರು. ನೇಪಾಳವನ್ನು 'ನಿಪ್ಪಲ್' ಎಂದೂ ಭೂತಾನ್‌ಅನ್ನು 'ಬುಟ್ಟೋನ್' ಎಂದೂ ಉಚ್ಚರಿಸಿದ್ದರು.

English summary
US President Donald Trump once shocked PM Narendra Modi with his remarks, 'it's not like you have got China on your border'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X