ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಸೋಂಕಿಗೆ ಹೊಸ ಹೊಸ ಹೆಸರು ಕೊಟ್ಟ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜೂನ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಚೀನಾ ವಿರುದ್ಧ ಕಿಡಿಕಾರಿದ್ದಾರೆ. ಚೀನಾದಿಂದ ಇಡೀ ವಿಶ್ವಕ್ಕೆ ವೈರಸ್ ಸೋಂಕು ಹರಡಿದೆ ಎಂದು ತೀಕ್ಷ್ಣವಾದ ಟೀಕೆ, ಭೀಕರ ಆರೋಪಗಳನ್ನು ಹೊರೆಸುವ ಮೂಲಕ ಟ್ರಂಪ್ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ಚೀನಾ ಕುಂಗ್ ಫೂ ಮಾತ್ರವಲ್ಲ, ಕುಂಗ್ ಫ್ಲೂ ಹರಡಿದ ದೇಶ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಚೈನೀಸ್ ವೈರಸ್, ವುಹಾನ್ ವೈರಸ್ ಎಂದು ಕರೆಯುತ್ತಿದ್ದ ಟ್ರಂಪ್ ಈ ಬಾರಿ ಇನ್ನಷ್ಟು ಹೆಸರು ಸೇರಿಸಿದ್ದಾರೆ.

Donald Trump calls Covid-19 kung flu at Tulsa rally

ಡೊನಾಲ್ಡ್ ಟ್ರಂಪ್ ಅವರು ಒಕ್ಲಾಹೋಮಾದ ತುಲ್ಸಾದಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊದಲಪ್ರಚಾರ ಭಾಷಣದಲ್ಲಿ ಚೀನಾ ವಿರುದ್ಧ ದಾಳಿ ನಡೆಸಿದರು.

ಕೊರೊನಾ ವೈರಸ್‌ಗೆ ಹೊಸ ಹೆಸರು ನೀಡಬೇಕಿದೆ ಈ ವೈರಸ್ ಅನ್ನು ಕುಂಗ್ ಫ್ಲೂ ಎಂದು ಕರೆಯಬಹುದುಸಮರ ಕಲೆಗಳ ಕುಂಗ್ ಫೂನಂತೆಯೇ ಚೀನಾ ಕುಂಗ್ ಫೂ ಅನ್ನು ಹುಟ್ಟುಹಾಕಿದೆ ಎಂದು ಭಾಷಣದಲ್ಲಿ ಹೇಳಿದರು.

ಕೊರೊನಾವೈರಸ್ ಗೆ ಒಂದಲ್ಲ ಎರಡಲ್ಲ 20 ಹೆಸರನ್ನು ಬೇಕಾದರೂ ನೀಡುತ್ತೇನೆ ಎಂದರು. ಕೊವಿಡ್ 10 ಬಿಕ್ಕಟ್ಟಿನ ನಡುವೆ ಚೀನಾ ತನ್ನ ನೆರೆಹೊರೆಯವರೊಂದಿಗೆ ಗಡಿ ವಿವಾದಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಕೊರೊನವೈರಸ್‌ನಿಂದಾಗಿ ತಮ್ಮ ದೇಶದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನು ಜಗತ್ತಿನಲ್ಲಿ ಸ್ಪಷ್ಟಪಡಿಸಲಿ ಎಂದರು. ಅಮೆರಿಕದಲ್ಲಿ 2 ಮಿಲಿಯನ್ ಸೋಂಕಿತರಿದ್ದು, 1 ಲಕ್ಷ ಮಂದಿ ಮೃತರಾಗಿದ್ದಾರೆ.

'ಚೀನಾ ನೀಡಿದ ಕೆಟ್ಟ ಉಡುಗೊರೆ ಕೊರೊನಾ': ಡೊನಾಲ್ಡ್ ಟ್ರಂಪ್ ವಾಗ್ದಾಳಿ'ಚೀನಾ ನೀಡಿದ ಕೆಟ್ಟ ಉಡುಗೊರೆ ಕೊರೊನಾ': ಡೊನಾಲ್ಡ್ ಟ್ರಂಪ್ ವಾಗ್ದಾಳಿ

''ಕೊರೊನಾ ವೈರಸ್ ಚೀನಾ ನೀಡಿದ ಉಡುಗೊರೆ. ಆದರೆ, ಅದು ಒಳ್ಳೆಯದಲ್ಲ. ಅದನ್ನು ಆರಂಭದಲ್ಲಿಯೇ ತಡೆಯಬೇಕಿತ್ತು. ವೈರಸ್ ಸೃಷ್ಟಿಯಾದ ವುಹಾನ್ ಬಹಳ ಅಪಾಯಕ್ಕೆ ಸಿಲುಕಿತ್ತು. ಆದರೆ, ಚೀನಾದ ಇತರೆ ಜಾಗದಲ್ಲಿ ಅದು ಹರಡಿಲಿಲ್ಲ'' ಎಂದು ಟ್ರಂಪ್ ಜೂನ್ ಮೊದಲ ವಾರದ ಭಾಷಣದಲ್ಲಿ ಹೇಳಿದ್ದರು.

English summary
Donald Trump used racist language to describe the coronavirus pandemic at a campaign rally in Tulsa, Oklahoma, by terming the virus as the “kung flu”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X