ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೇ ಗೆದ್ದಿದ್ದೆಂದು ಘೋಷಿಸಿ: ನ್ಯಾಯಾಧೀಶರಿಗೆ ಡೊನಾಲ್ಡ್ ಟ್ರಂಪ್ ಮನವಿ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 19: ಪೆನ್ಸಲ್ವೇನಿಯಾದಲ್ಲಿ ತಮ್ಮನ್ನು ವಿಜಯಶಾಲಿ ಎಂದು ಘೋಷಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯಾಯಾಧೀಶರಿಗೆ ಬುಧವಾರ ಮನವಿ ಮಾಡಿದ್ದಾರೆ.

ಪೆನ್ಸಿಲ್ವೇನಿಯಾದ ರಿಪಬ್ಲಿಕನ್ ನಿಯಂತ್ರಣದಲ್ಲಿರುವ ಶಾಸಕಾಂಗವು ಅಮೆರಿಕ ಎಲೆಕ್ಟೊರಲ್ ಕಾಲೇಜ್ ವ್ಯವಸ್ಥೆಯಲ್ಲಿ ಮತ ಹಾಕುವ ಮತದಾರರನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಜೋ ಬೈಡನ್ ಪರ ವಾಲುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳುಜೋ ಬೈಡನ್ ಪರ ವಾಲುತ್ತಿರುವ ಡೊನಾಲ್ಡ್ ಟ್ರಂಪ್ ಆಡಳಿತದ ಅಧಿಕಾರಿಗಳು

2020ರ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ದೋಷಯುಕ್ತವಾಗಿದೆ ಮತ್ತು ಪೆನ್ಸಿಲ್ವೇನಿಯಾದ ಮತದಾರರನ್ನು ಆಯ್ಕೆ ಮಾಡಲು ಪೆನ್ಸಿಲ್ವೇನಿಯಾ ಜನರಲ್ ಅಸೆಂಬ್ಲಿಗೆ ಅವಕಾಶ ನೀಡುವಂತೆ ಆದೇಶ ಹೊರಡಿಸಿ ಎಂದು ಅಮೆರಿಕ ಜಿಲ್ಲಾ ನ್ಯಾಯಾಧೀಶ ಮ್ಯಾಥ್ಯೂ ಬ್ರಾನ್ ಅವರನ್ನು ಡೊನಾಲ್ಡ್ ಟ್ರಂಪ್ ಪ್ರಚಾರ ತಂಡ ಕೋರಿದೆ.

Donald Trump Asks Pennsylvania Judge To Declare Him Winner

ಪೆನ್ಸಿಲ್ವೇನಿಯಾದ ಫಲಿತಾಂಶವನ್ನು ಪ್ರಶ್ನಿಸಿದ ನವೆಂಬರ್ 9ರಂದು ಟ್ರಂಪ್ ಪ್ರಚಾರ ತಂಡ ಸಲ್ಲಿಸಿದ್ದ ಮೊಕದ್ದಮೆಯಲ್ಲಿ ತಿದ್ದುಪಡಿ ತಂದು ಈ ಹೊಸ ಮನವಿ ಮಾಡಲಾಗಿದೆ.

ಮೊಕದ್ದಮೆಯಿಂದ ಕೈಬಿಡಲಾಗಿದ್ದ ಕಾನೂನನ್ನು ಮರಳಿ ಸೇರಿಸಲು ಅನುಮತಿ ನೀಡುವಂತೆ ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಲಾನಿ ನೇತೃತ್ವದ ಕಾನೂನು ತಂಡ ಬ್ರಾನ್ ಅವರಿಗೆ ಮನವಿ ಮಾಡಿದೆ. ಮೇಲ್ ಇನ್ ಮತಪತ್ರಗಳ ಎಣಿಕೆ ಸಂದರ್ಭದಲ್ಲಿ ಅದನ್ನು ಪರಿಶೀಲಿಸಲು ರಿಪಬ್ಲಿಕನ್ ವೀಕ್ಷಕರಿಗೆ ಪ್ರವೇಶಾವಕಾಶ ನೀಡಿರಲಿಲ್ಲ ಎಂದು ಅದು ಆರೋಪಿಸಿದೆ.

ಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆಜೋ ಬೈಡನ್ ಸಂಪುಟದಲ್ಲಿ ವಿವೇಕ್ ಮೂರ್ತಿ, ಅರುಣ್ ಮಜುಂದಾರ್‌ಗೆ ಸ್ಥಾನ ಸಾಧ್ಯತೆ

ಮೇಲ್ ಇನ್ ಮತಪತ್ರಗಳಲ್ಲಿ ಕೌಂಟಿ ಚುನಾವಣಾ ಅಧಿಕಾರಿಗಳ ನಿರ್ವಹಣೆಯು ಸ್ಥಿರತೆ ಹೊಂದಿಲ್ಲ. ಕೆಲವು ಕೌಂಟಿಗಳು ರಹಸ್ಯ ಲಕೋಟೆಗಳು ನಾಪತ್ತೆಯಾಗಿರುವುದು ಸೇರಿದಂತೆ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸುವುದಾಗಿ ಮತದಾರರಿಗೆ ಮಾಹಿತಿ ನೀಡಿವೆ. ಆದರೆ ಉಳಿದ ಕೌಂಟಿಗಳು ಸರಿಪಡಿಸುತ್ತಿಲ್ಲ ಎಂದು ಸಹ ಆರೋಪಿಸಲಾಗಿದೆ.

English summary
US Elections: President Donald Trump's campaign asked judge to declare him winner Pennsylvania.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X