ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಕ್ ನ್ಯೂಸ್ ಪ್ರಶಸ್ತಿ ಘೋಷಿಸಿದ ಡೊನಾಲ್ಡ್ ಟ್ರಂಪ್

By Manjunatha
|
Google Oneindia Kannada News

ವಾಷಿಂಗ್ಟನ್, ಜನವರಿ 18: ಅಧಿಕಾರಕ್ಕೆ ಬಂದಾಗಿನಿಂದಲೂ ಮಾಧ್ಯಮಗಳ ಮೇಲೆ ತಮ್ಮ ಅಸಹನೆ ಪ್ರಕಟಿಸುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಇನ್ನೂ ಒಂದು ಹೆಜ್ಜೆ ಹೋಗಿ ಕೆಲವು ಪತ್ರಿಕೆ, ದೃಶ್ಯ ಮಾಧ್ಯಮಗಳಿಗೆ ಫೇಕ್ ನ್ಯೂಸ್ (ಸುಳ್ಳು ಸುದ್ದಿ) ಪ್ರಶಸ್ತಿ ಪ್ರಕಟಿಸಿ, ಸುದ್ದಿ ಮಾಧ್ಯಮಗಳಿಗೆ ಭಾರಿ ಮುಖಭಂಗ ಎಸಗಿದ್ದಾರೆ.

ಟ್ವಿಟರ್‌ನಲ್ಲಿ ಫೇಕ್ ನ್ಯೂಸ್ ಪ್ರಶಸ್ತಿ ಪಡೆದ ಸುದ್ದಿ ಮಾಧ್ಯಮಗಳು ಇವು ಎಂದು ಡೊನಾಲ್ಡ್ ಟ್ರಂಪ್ ಬಗ್ಗೆ ತಪ್ಪು ಸುದ್ದಿ ಹಾಕಿದ್ದ ಪತ್ರಿಕೆಗಳ ಮಾಹಿತಿ ಇರುವ ರಿಪಬ್ಲಿಕ್ ಪಕ್ಷದ ಬ್ಲಾಗ್ ಪೋಸ್ಟ್ ಒಂದನ್ನು ಅವರು ಹಂಚಿಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಹಾಕಿರುವ ಸುಳ್ಳು ಸುದ್ದಿ ಪ್ರಕಟಿಸುವ ಸುದ್ದಿ ಮಾಧ್ಯಮಗಳ ಪಟ್ಟಿಯಲ್ಲಿ ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ಸ್ ಟೈಮ್ಸ್, ಎಬಿಸಿ, ಸಿಎನ್ಎನ್ ಅಂತಹಾ ವಿಶ್ವ ವಿಖ್ಯಾತ ಪತ್ರಿಕೆಗಳು ಮತ್ತು ಸುದ್ದಿ ವಾಹಿನಗಳ ಹೆಸರಿದೆ.

ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಈ ಸುದ್ದಿ ಮಾಧ್ಯಮಗಳು ಬರೆದಿದ್ದ ಹಾಗೂ ಪ್ರಸಾರ ಮಾಡಿದ್ದ ಸುಳ್ಳು ಸುದ್ದಿಯನ್ನು ಬ್ಲಾಗ್ ನಲ್ಲಿ ನಮೂದಿಸಿ, ಆ ಸುದ್ದಿಯ ಸತ್ಯಾಸತ್ಯೆಯ ಮಾಹಿತಿಯನ್ನೂ ಬ್ಲಾಗ್ ನಲ್ಲಿ ನೀಡಲಾಗಿದೆ.

Donald Trump announce fake news award on twitter

ಟ್ರಂಪ್ ಅವರ ಈ ಅತಿರೇಕದ ವ್ಯಂಗ್ಯಕ್ಕೆ ಅಮೆರಿಕದ ಪತ್ರಿಕಾಲೋಕದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಡೊನಾಲ್ಡ್ ಟ್ರಂಪ್ ಅವರ ಟ್ವೀಟ್‌ಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಹಲವರು ಧನಿ ಎತ್ತಿರುವುದು ಪತ್ರಿಕೋದ್ಯಮಕ್ಕೆ ಸ್ವಲ್ಪ ಸಮಾಧಾನ ತರಬಲ್ಲ ಸಂಗತಿಯಾಗಿದೆ.

English summary
America president Donald Trump hate towards press continuous. Today He announce fake news awards in twitter. reputed media houses like Washington post, new York's time, cnn are in the trump's fake news list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X