ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಬಲ್ ಜೊತೆ ಟ್ರಂಪ್ ಫೋಟೋ: ಆಕ್ರೋಶಗೊಂಡ ಅಮೇರಿಕಾದ ಧಾರ್ಮಿಕ ಮುಖಂಡರು.!

|
Google Oneindia Kannada News

ವಾಷಿಂಗ್ಟನ್, ಜೂನ್ 4: ಅಮೇರಿಕಾದ ಐತಿಹಾಸಿಕ ಸೇಂಟ್ ಜಾನ್ಸ್ ಚರ್ಚ್ ಮುಂದೆ ನಿಂತು, ಕೈಯಲ್ಲಿ ಬೈಬಲ್ ಹಿಡಿದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಮರಾಗಳಿಗೆ ಪೋಸ್ ನೀಡಿದ್ದರು. ಇದಕ್ಕಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಗುಂಪನ್ನು ಹಿಂಸಾತ್ಮಕವಾಗಿ ಚದುರಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ರವರ ಈ ನಡೆ ಅಮೇರಿಕಾದ ಧಾರ್ಮಿಕ ಮುಖಂಡರನ್ನು ಕೆರಳಿಸಿದೆ.

''ರಾಜಕೀಯಕ್ಕಾಗಿ ಪವಿತ್ರವಾಗಿರುವುದನ್ನು ದುರುಪಯೋಗ ಪಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಇದರಿಂದ ನಮಗೆ ಆಘಾತವಾಗಿದೆ'' ಎಂದು ವಾಷಿಂಗ್ಟನ್ ನ ಎಪಿಸ್ಕೋಪಲ್ ಬಿಷಪ್ ಮರಿಯನ್ ಬುಡ್ಡೆ ಕಿಡಿಕಾರಿದ್ದಾರೆ.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

''ತಮ್ಮ ಸ್ಥಾನ ಮತ್ತು ಅಧಿಕಾರವನ್ನು ಸಮರ್ಥಿಸಿಕೊಳ್ಳಲು ನಮ್ಮ ಪವಿತ್ರ ಪಠ್ಯದ ಸಾಂಕೇತಿಕ ಶಕ್ತಿಯನ್ನು ಡೊನಾಲ್ಡ್ ಟ್ರಂಪ್ ಬಳಸಿಕೊಂಡಿದ್ದಾರೆ'' ಎಂದು ಬಿಷಪ್ ಮರಿಯನ್ ಬುಡ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಕೇಂದ್ರಬಿಂದು ಆಗಿದ್ದ ಸೇಂಟ್ ಜಾನ್ಸ್ ಚರ್ಚ್

ಪ್ರತಿಭಟನೆಯ ಕೇಂದ್ರಬಿಂದು ಆಗಿದ್ದ ಸೇಂಟ್ ಜಾನ್ಸ್ ಚರ್ಚ್

ವೈಟ್ ಹೌಸ್ ಬಳಿ ಇರುವ ಐತಿಹಾಸಿಕ ಸೇಂಟ್ ಜಾನ್ಸ್ ಚರ್ಚ್ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು. ಜಾರ್ಜ್ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿ ಪ್ರಾರಂಭವಾದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ನಂತರ ಇದೇ ಸೇಂಟ್ ಜಾನ್ಸ್ ಚರ್ಚ್ ಗೆ ಬೆಂಕಿ ತಗುಲಿತ್ತು. ಬೆಂಕಿಯಿಂದಾಗಿ 200 ವರ್ಷಗಳಷ್ಟು ಹಳೆಯ ಚರ್ಚ್ ಗೆ ಹಾನಿಯುಂಟಾಗಿತ್ತು.

ಟ್ರಂಪ್ ನಡೆ ಖಂಡನೀಯ

ಟ್ರಂಪ್ ನಡೆ ಖಂಡನೀಯ

ಕಳೆದ ಸೋಮವಾರ ಸೇಂಟ್ ಜಾನ್ಸ್ ಚರ್ಚ್ ಬಳಿ ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆಗ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೈಬಲ್ ಹಿಡಿದು ಫೋಟೋ ತೆಗೆಸಿಕೊಳ್ಳುವ ಸಲುವಾಗಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗಿಸಲಾಗಿತ್ತು.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಶವಪರೀಕ್ಷೆಯಲ್ಲಿ ಕಂಡುಬಂದ ಸ್ಫೋಟಕ ಅಂಶಗಳೇನು.?

''ಆ ಸಮಯದಲ್ಲಿ ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ಟ್ರಂಪ್ ರವರ ಈ ನಡೆ ಖಂಡನೀಯ'' ಎಂದಿದ್ದಾರೆ ಬಿಷಪ್ ಮರಿಯನ್ ಬುಡ್ಡೆ.

ಡೊನಾಲ್ಡ್ ಟ್ರಂಪ್ ರವರ ಚರ್ಚ್ ಭೇಟಿಯನ್ನು ''ನಾಚಿಕೆಗೇಡು ಮತ್ತು ಅಸಹ್ಯಕರ'' ಎಂದು ಇತರೆ ಧಾರ್ಮಿಕ ಮುಖಂಡರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ತೆರೆಯದ ಬೈಬಲ್ ಅನ್ನು ಕೈಯಲ್ಲಿ ಹಿಡಿದುಕೊಳ್ಳುವ ಮೂಲಕ ಕ್ರಿಶ್ಚಿಯನ್ ಮತ್ತು ಎಪಿಸ್ಕೋಪಲ್ ಚರ್ಚ್ ಅನುಮೋದನೆ ಪಡೆಯಲು ಅವರು ಭಾವಿಸಿರುವಂತಿದೆ'' ಎಂದು ನ್ಯೂ ಇಂಗ್ಲೆಂಡ್ ಬಿಷಪ್ ಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆರಳಿದ ಕ್ಯಾಥೋಲಿಕ್ ಮುಖಂಡರು

ಕೆರಳಿದ ಕ್ಯಾಥೋಲಿಕ್ ಮುಖಂಡರು

ತಮ್ಮ ಪತ್ನಿಯ ಜೊತೆಗೆ ಸೇಂಟ್ ಜಾನ್ ಪಾಲ್ II ಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ್ದರು. ಇದು ಕ್ಯಾಥೋಲಿಕ್ ಮುಖಂಡರು ಕೂಡ ಕೆರಳಿದ್ದಾರೆ.

''ನಮ್ಮ ಧಾರ್ಮಿಕ ತತ್ವಗಳನ್ನು ಉಲ್ಲಂಘಿಸುವ, ದುರುಪಯೋಗಪಡಿಸಿಕೊಳ್ಳುವಂತೆ ಅನುವು ಮಾಡಿಕೊಡುವ ಯಾವುದೇ ಕ್ಯಾಥೋಲಿಕ್ ಸೌಲಭ್ಯ ಖಂಡನೀಯ ಎಂದು ನಾನು ಭಾವಿಸುತ್ತೇನೆ'' ಎಂದು ವಾಷಿಂಗ್ಟನ್ ನ ಆರ್ಚ್ ಬಿಷಪ್ ವಿಲ್ಟನ್ ಗ್ರೆಗೊರಿ ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!'ನಿಮ್ಮ ಬಾಯಿ ಮುಚ್ಚಿ': ಅಧ್ಯಕ್ಷ ಟ್ರಂಪ್ ವಿರುದ್ಧ ಹೂಸ್ಟನ್ ಪೊಲೀಸ್ ಕೆಂಡಾಮಂಡಲ.!

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡ ಬಳಿಕ, ಕಾನೂನು ಸುವ್ಯವಸ್ಥೆ ಕಾಪಾಡಲು ಮಿಲಿಟರಿ ನಿಯೋಜಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು.

English summary
Donald Trump Angers American Religious leaders with Bible Photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X