ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ಗೆ ಮತ ಹಾಕ್ಬೇಡಿ! ಅಜ್ಜಿಯ ಶ್ರದ್ಧಾಂಜಲಿ ಸಂದೇಶ ವೈರಲ್

|
Google Oneindia Kannada News

ವಾಷಿಂಗ್ಟನ್, ಅ. 23: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧದ ಅಲೆ ದಿನದಿಂದ ದಿನ ಹೆಚ್ಚಾಗುತ್ತಲೇ ಇದೆ. ಅಭ್ಯರ್ಥಿಗಳ ಪರಸ್ಪರ ಆರೋಪ ಪ್ರತ್ಯಾರೋಪಗಳ ನಡುವೆ ಮತದಾರರ ನಡುವೆ ವಿರೋಧಿ ಅಲೆ ಎಬ್ಬಿಸಲಾಗುತ್ತಿದೆ.

ಮಿನ್ನಿಯಾಪೋಲಿಸ್ ಕಂಡು ಬಂದ ಶ್ರದ್ಧಾಂಜಲಿ ಪ್ರಕಟಣೆಯಲ್ಲಿ ಟ್ರಂಪ್ ಅವರಿಗೆ ಮತ ಹಾಕಬೇಡಿ ಎಂದು ಸಂದೇಶವಿದೆ. ಈ ಪತ್ರ ಈಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮತದಾರರು ಅಜ್ಜಿಯ ಆತ್ಮಕ್ಕೆ ಶಾಂತಿ ಕೋರುತ್ತಾ, ಟ್ರಂಪ್ ವಿರುದ್ಧ ಮತ ಹಾಕುವುದಾಗಿ ಘೋಷಿಸಿದ್ದಾರೆ.

Do not vote for Donald Trump- obituary message of Georgia May adkins

ಸೇಂಟ್ ಪೌಲ್ ನ 93 ವರ್ಷ ವಯಸ್ಸಿನ ಅಜ್ಜಿ ಜಾರ್ಜಿಯಾ ಮೆ ಅಡ್ಕಿನ್ಸ್ ಅವರು ಸೆಪ್ಟೆಂಬರ್ 28 ರಂದು ಸೇಂಟ್ ಪೌಲ್ ಯುನೈಟೆಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ. 19, 1927 ರಲ್ಲಿ ಜನಿಸಿದ ಅಡ್ಕಿನ್ಸ್ ವೆಸ್ಟ್ ಪಬ್ಲಿಷಿಂಗ್ ಕಂಪನಿಯಲ್ಲಿ ಲಿನೋ ಟೈಪಿಸ್ಟ್ ಆಗಿ 32 ವರ್ಷ ಸೇವೆ ಸಲ್ಲಿಸಿದ್ದರು. ವಿವಿಧ ಪತ್ರಿಕೆಗಳಲ್ಲಿ ಶ್ರದ್ಧಾಂಜಲಿ ಕೋರಿದ ಪತ್ರಗಳು ಪ್ರಸಾರವಾಗಿದೆ. ಸೈಂಟ್ ಪಾಲ್ ಪಯೋನಿಯರ್ ಪ್ರೆಸ್ ಪ್ರಕಟಿಸಿದ್ದು ಎಂದು ತಿಳಿದು ಬಂದಿದೆ.

ಅಕ್ಟೋಬರ್ 11 ರಂದು ಸ್ಥಳೀಯ ಚರ್ಚ್ ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊವಿಡ್ 19 ನಿಯಮಗಳಿಗೆ ಅನುಸಾರವಾಗಿ ಕಾರ್ಯಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Recommended Video

ಯುವಜನತೆಗೆ ಉದ್ಯೋಗ ಕೊರತೆ | Raghuram Rajan | Oneindia Kannada

ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಹೂಗುಚ್ಛದ ಬದಲಾಗಿ ನೀವು ಡೊನಾಲ್ಡ್ ಟ್ರಂಪ್ ಗೆ ಮತ ಹಾಕದೇ ನನಗೆ ಶ್ರದ್ಧಾಂಜಲಿ ಸಲ್ಲಿಸಿ ಎಂದು ಅವರು ಮನವಿ ಮಾಡಿದ್ದಾರೆ ಎಂದು ಪ್ರಕಟಿಸಲಾಗಿದೆ. ಅಜ್ಜಿಗೆ ಒಬ್ಬ ಮಗ, ಮೂವರು ಹೆಣ್ಣು ಮಕ್ಕಳು, ಇಬ್ಬರು ಮಲ ಮಕ್ಕಳು, 17 ಮೊಮ್ಮಕ್ಕಳು, 24 ಮರಿ ಮಕ್ಕಳು, ಒಂದು ಮರಿ ಮಕ್ಕಳಿಗೆ ಜನಿಸಿದ ಮಗು ಇದೆ.

English summary
Do not vote for Donald Trump- An obituary message of 93 year old Georgia May adkins goes viral. Minneapolis-area voters owe to fullfill her last wish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X