ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾಂಗೀಯ ವಾದ ಒಂದು ರೋಗ, ಅದಕ್ಕೆ ಲಸಿಕೆ ಇಲ್ಲ: ಕಮಲಾ

|
Google Oneindia Kannada News

ಕಮಲಾ.. ಕಮಲಾ.. ಕಮಲಾ.. ಹೀಗೆ ಅಮೆರಿಕದ ಗಲ್ಲಿಗಲ್ಲಿಯಲ್ಲೂ ಭಾರತೀಯ ನಾರಿಯ ಹೆಸರೇ ಮಾರ್ದನಿಸುತ್ತಿದೆ. ಭಾರತ ಮೂಲದ ತಾಯಿ ಹಾಗೂ ಕ್ಯೂಬಾ ಮೂಲದ ತಂದೆಯ ಪುತ್ರಿ ಅಮೆರಿಕ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅಮೆರಿಕ ಉಪಾಧ್ಯಕ್ಷ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಸಲ್ಲಿಸಿರುವ ಉಮೇದುವಾರಿಕೆ ಸ್ವೀಕೃತವಾಗಿದೆ. ಈ ಬೆನ್ನಲ್ಲೇ ಚುನಾವಣಾ ಅಖಾಡದಲ್ಲಿ ಕಮಲಾ ಘರ್ಜಿಸುತ್ತಿದ್ದಾರೆ.

ಟ್ರಂಪ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿರುವ ಕಮಲಾ ಹ್ಯಾರಿಸ್, ಅಮೆರಿಕ ಎಂಬ ದೈತ್ಯ ದೇಶವನ್ನು ಶತಮಾನಗಳಿಂದ ಕಾಡುತ್ತಿರುವ ಜನಾಂಗೀಯ ವಾದ ರೋಗದಂತೆ ಎಂದಿದ್ದಾರೆ. ಅಲ್ಲದೆ ಈ ರೋಗಕ್ಕೆ ಲಸಿಕೆ ಇಲ್ಲ ಎನ್ನುವ ಮೂಲಕ ಟ್ರಂಪ್‌ರನ್ನ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಸಮಾಜದಲ್ಲಿ ಈ ರೋಗ ಉಲ್ಭಣಿಸಬಾರದು ಎಂದರೆ ದೇಶದ ಉನ್ನತ ಸ್ಥಾನಗಳು ಸೂಕ್ತವಾದವರ ಬಳಿಯೇ ಇರಬೇಕು ಎಂದಿರುವ ಕಮಲಾ ಹ್ಯಾರಿಸ್, ದೇಶದ ರಾಜಕೀಯದಲ್ಲಿ ದ್ವೇಷ ಇಲ್ಲದಿದ್ದಾಗ ಮಾತ್ರ ಸಮಾಜದಲ್ಲೂ ಶಾಂತಿ ಸಹಬಾಳ್ವೆ ಸಾಧ್ಯ ಎಂಬುದನ್ನು ಪ್ರತಿಪಾದಿಸಿದ್ದಾರೆ. ಹೀಗೆ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ನಡೆದಿರುವ ತಪ್ಪುಗಳನ್ನ ಜನರ ಮುಂದಿಡುತ್ತಿದ್ದಾರೆ ಕಮಲಾ ಹ್ಯಾರಿಸ್.

ಭರ್ಜರಿ ರೆಸ್ಪಾನ್ಸ್..!

ಭರ್ಜರಿ ರೆಸ್ಪಾನ್ಸ್..!

ಮತ್ತೊಂದು ವಿಶೇಷವೆಂದರೆ ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸಮಾಜದ ಗಣ್ಯರಿಂದ ಹಿಡಿದು, ಅಮೆರಿಕದ ಬಗ್ಗೆ ನಾನಾ ಕನಸು ಹೊಂದಿರುವ ಯುವಪೀಳಿಗೆ ಸಮೇತ ಕಮಲಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದಲ್ಲಿ ಕಮಲಾ ಅವರಿಗೆ ಅತ್ಯುತ್ತಮ ಗೌರವ ಸಿಗುತ್ತಿದೆ. ಇದರ ಜೊತೆ ಜೊತೆಗೆ ಮತದಾರರನ್ನು ಓಲೈಸುವಲ್ಲಿ, ಮತದಾರರ ಮನ ಗೆಲ್ಲುವಲ್ಲಿಯೂ ಕಮಲಾ ಹ್ಯಾರಿಸ್ ಸಕ್ಸಸ್ ಕಾಣುತ್ತಿದ್ದಾರೆ. ಹಾಗೇ ಕಮಲಾ ಅವರ ಚುನಾವಣಾ ಭಾಷಣಗಳು ಅಮೆರಿಕನ್ನರ ಮನ ಗೆಲ್ಲುತ್ತಿವೆ.

ಕಮಲಾ ಆಯ್ಕೆ ಸರಿಯಾಗಿದೆ

ಕಮಲಾ ಆಯ್ಕೆ ಸರಿಯಾಗಿದೆ

ಹಿಂದಿನ ಚುಣಾವಣೆಯಲ್ಲಿ ಟ್ರಂಪ್ ಎದುರು ಸೋಲು ಕಂಡಿದ್ದ ಹಿಲರಿ ಕ್ಲಿಂಟನ್ ಕೂಡ ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಹಿಲರಿ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪರವಾಗಿ ನಾಮನಿರ್ದೇಶನಗೊಂಡ ಕಮಲಾ ಅವರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ ಕಮಲಾ ಆಯ್ಕೆ ಸರಿಯಾಗಿದ್ದು, ನಾವೆಲ್ಲರೂ ಒಟ್ಟಾಗಿ ಬಿಡೆನ್ ಹಾಗೂ ಕಮಲಾ ಅವರ ತಂಡವನ್ನು ಆಯ್ಕೆ ಮಾಡಬೇಕಿದೆ ಎಂದಿದ್ದಾರೆ. ಪಕ್ಷದ ನಾಯಕರಿಗೆ ಈ ಮೂಲಕ ಹಿಲರಿ ಕ್ಲಿಂಟನ್ ಒಗಟ್ಟಿನ ಪಾಠ ಮಾಡಿದ್ದಾರೆ.

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ನಾಮನಿರ್ದೇಶನ ಭಾರತಕ್ಕೆ ಎಷ್ಟು ಪ್ರಸ್ತುತ?ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ನಾಮನಿರ್ದೇಶನ ಭಾರತಕ್ಕೆ ಎಷ್ಟು ಪ್ರಸ್ತುತ?

ಟ್ರಂಪ್ ಮಾಡೋದು ಟೈಂ ಪಾಸ್..!

ಟ್ರಂಪ್ ಮಾಡೋದು ಟೈಂ ಪಾಸ್..!

ಹಿಲರಿ ಕ್ಲಿಂಟನ್ ಪತಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಹಿಂದೆ ಬಿದ್ದಿಲ್ಲ. ಟ್ರಂಪ್ ವಿರುದ್ಧ ತಮ್ಮದೇ ಶೈಲಿಯಲ್ಲಿ ಟೀಕೆಗಳ ಸುರಿಮಳೆಗೈದಿರುವ ಬಿಲ್ ಕ್ಲಿಂಟನ್, ಟ್ರಂಪ್ ಪಾಲಿಗೆ ಅಧ್ಯಕ್ಷ ಹುದ್ದೆ ಎಂದರೆ ಟಿ.ವಿ. ನೋಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಟೈಂ ಪಾಸ್ ಮಾಡುವುದೇ ಆಗಿದೆ ಎಂದಿದ್ದಾರೆ. ಸದ್ಯಕ್ಕೆ ಅಧ್ಯಕ್ಷರ ಕಚೇರಿ ದೇಶ ಮುನ್ನಡೆಸುತ್ತಿಲ್ಲ, ಬದಲಾಗಿ ಬರೀ ವಿವಾದಗಳನ್ನೇ ಸೃಷ್ಟಿ ಮಾಡುವ ಕೇಂದ್ರವಾಗಿದೆ ಎಂದಿದ್ದಾರೆ.

ಅಮೆರಿಕದ VP ಸ್ಥಾನಕ್ಕೆ ಕಮಲ, ತಮಿಳರಿಗೆ ಹೆಮ್ಮೆ ವಿಷ್ಯ: ಒಪಿಎಸ್ಅಮೆರಿಕದ VP ಸ್ಥಾನಕ್ಕೆ ಕಮಲ, ತಮಿಳರಿಗೆ ಹೆಮ್ಮೆ ವಿಷ್ಯ: ಒಪಿಎಸ್

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಟ್ರಂಪ್ ನಾಲಾಯಕ್ ಅಧ್ಯಕ್ಷ..!

ಕೆಲ ದಿನಗಳ ಹಿಂದೆ ಒಬಾಮಾ ಪತ್ನಿ ಮಿಷೆಲ್ ಒಬಾಮಾ ಟ್ರಂಪ್‌ಗೆ ಬೆವರಿಳಿಯುವಂತೆ ಮಾತನಾಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಖುದ್ದು ಬರಾಕ್ ಒಬಾಮಾ ಅವರೇ ಅಖಾಡಕ್ಕೆ ಇಳಿದಿದ್ದಾರೆ. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ, ಟ್ರಂಪ್ ತಾವು ಕುಳಿತ ಕಚೇರಿಗೆ ಒಂದಿಷ್ಟೂ ಯೋಗ್ಯರಲ್ಲ ಎಂದಿದ್ದಾರೆ. ಅಲ್ಲದೆ ಅಧ್ಯಕ್ಷ ಸ್ಥಾನ ನಿಭಾಯಿಸಲು ಟ್ರಂಪ್ ಅದಕ್ಷ ಎಂದು ಯಾವುದೇ ಮುಲಾಜು ನೋಡದೆ ಟ್ರಂಪ್‌ ಆಡಳಿತ ವೈಖರಿಯನ್ನು ಜರಿದಿದ್ದಾರೆ. ಟ್ರಂಪ್ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ತಮಗೆ ಮತ್ತು ತಮ್ಮ ಸ್ನೇಹಿತರನ್ನು ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಧಿಕಾರವನ್ನು ಬಳಸಿಕೊಳ್ಳಲು ಅವರಿಗೆ ಆಸಕ್ತಿಯಿಲ್ಲ ಎಂದು ಟ್ರಂಪ್ ವಿರುದ್ಧ ಆರೋಪಿಸಿದ್ದಾರೆ. ಅಲ್ಲದೆ ಟ್ರಂಪ್‌ಗೆ ಇದು ರಿಯಾಲಿಟಿ ಶೋ ಇದ್ದಂತೆ ಅನ್ನಿಸುತ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?ಅಮೆರಿಕ ಚುನಾವಣೆಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಮಹಿಳೆ: ಯಾರು ಈ ಕಮಲಾ ಹ್ಯಾರಿಸ್?

English summary
Democrats Target Trump At National Convention. Obama, Hillary, Bill Clinton Joins Them. On The Other side Kamala Harris Continues His Election Campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X