ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ತೊಲಗದಿದ್ದರೆ ಒದ್ದು ಓಡಿಸೋದು ಗ್ಯಾರಂಟಿ: ಅಮೆರಿಕ ಸಂಸದರು..!

|
Google Oneindia Kannada News

ಮನಸ್ಸಿಗೆ ಬಂದಂತೆ ವರ್ತಿಸುತ್ತಾ, 200ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಅಮೆರಿಕ ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದಿದ್ದ ಟ್ರಂಪ್‌ಗೆ ಈಗ ಮುಟ್ಟಿದ್ದೆಲ್ಲವೂ ಮುಳ್ಳಾಗುತ್ತಿದೆ. ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಮತ್ತು ಸಹಚರರು ನಡೆಸಿದ ದಾಳಿಯನ್ನ ಅಮೆರಿಕ ಸಂಸದರು ಪಕ್ಷ ಭೇದ ಮರೆತು ಖಂಡಿಸುತ್ತಿದ್ದಾರೆ. ಅಲ್ಲದೆ ಹೇಗಾದರೂ ಮಾಡಿ ಟ್ರಂಪ್‌ ಖುರ್ಚಿ ಬಿಟ್ಟು ಓಡಿ ಹೋಗಬೇಕು ಅಂತಾ ಕಾಯುತ್ತಿದ್ದಾರೆ. ಹೀಗೆ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಡೆಮಾಕ್ರಟಿಕ್ ಪಕ್ಷದ ಸಂಸದರು ಮುಂದಾಗಿದ್ದಾರೆ.

ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡಿಸಲು ಮುಂದಾಗಿದ್ದಾರೆ. ಅಧ್ಯಕ್ಷ ತಪ್ಪು ಮಾಡಿದ ಸಂದರ್ಭದಲ್ಲಿ ಈ ವಾಗ್ದಂಡನೆ ಮಂಡನೆಯಾಗುತ್ತದೆ. ಕೆಲ ತಿಂಗಳ ಹಿಂದಷ್ಟೇ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡನೆಯಾಗಿತ್ತು. ಆದರೆ ಆಗ ರಿಪಬ್ಲಿಕನ್ ಸಂಸದರು ಟ್ರಂಪ್ ಪರ ನಿಂತಿದ್ದರಿಂದ, ಹೀಗಾಗಿ ಟ್ರಂಪ್ ಬಚಾವ್ ಆಗಿದ್ದರು. ಆದ್ರೆ ಸದ್ಯದ ಸ್ಥಿತಿ ವ್ಯತಿರಿಕ್ತವಾಗಿದೆ. ಸ್ವತಃ ಟ್ರಂಪ್ ಪಕ್ಷದವರು ಕೂಡ, ಈ ಆಸಾಮಿ ತೊಲಗಿದರೆ ಸಾಕಪ್ಪ ಅಂತಿದ್ದಾರೆ. ಹೀಗಾಗಿ ಡೆಮಾಕ್ರಟಿಕ್ ಪಕ್ಷದ ಸಂಸದರು ಸೋಮವಾರವೇ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.

ವಾಗ್ದಂಡನೆಗೆ ಹಲವು ವಾರಗಳು ಅಗತ್ಯ

ವಾಗ್ದಂಡನೆಗೆ ಹಲವು ವಾರಗಳು ಅಗತ್ಯ

ಅಮೆರಿಕ ಸಂವಿಧಾನದ ಪ್ರಕಾರ ಸಂಸದರು ಒಗ್ಗಟ್ಟು ಪ್ರದರ್ಶಿಸಿ, ಅಧ್ಯಕ್ಷನನ್ನ ಅಧಿಕಾರದಿಂದ ಒದ್ದೋಡಿಸಲು ಸಾಧ್ಯವಿದೆ. ಇದೇ ಪ್ರಕ್ರಿಯೆಯನ್ನ ವಾಗ್ದಂಡನೆ ಅಥವಾ ಇಂಪೀಚ್‌ಮೆಂಟ್ (Impeachment) ಎನ್ನಲಾಗುತ್ತೆ. ಆದರೆ ವಾಗ್ದಂಡನೆ ಎಂಬುದು ಸುಲಭವಾದ ಪ್ರಕ್ರಿಯೆ ಅಲ್ಲ. ಅದು ಸುದೀರ್ಘವಾಗಿರುತ್ತದೆ ಮತ್ತು ವಾಗ್ದಂಡನೆ ಪ್ರಕ್ರಿಯೆ ಪೂರ್ಣಗೊಳಿಸಲು ಹಲವು ವಾರಗಳೇ ಅಗತ್ಯ. ಹಾಗಾದರೆ ಸದ್ಯದ ಪರಿಸ್ಥಿತಿಯಲ್ಲಿ ಟ್ರಂಪ್‌ ವಿರುದ್ಧ ವಾಗ್ದಂಡನೆ ಮಂಡನೆಯಾದರೆ ಉಪಯೋಗವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಜನವರಿ 20ರಂದು ಟ್ರಂಪ್ ಅಧ್ಯಕ್ಷಗಿರಿಗೆ ಕಡೇ ದಿನ. ಆ ನಂತರ ಟ್ರಂಪ್ ಪದವಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಸದ್ಯ ವಾಗ್ದಂಡನೆ ಅಗತ್ಯವಿದೆಯಾ ಎಂಬ ಪ್ರಶ್ನೆ ಕೆಲ ಸಂಸದರದ್ದು. ಅದಕ್ಕೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೇರಿದಂತೆ ಹಲವರು ಉತ್ತರ ನೀಡಿದ್ದಾರೆ. ವಾಗ್ದಂಡನೆ ಏಕೆ ಅಗತ್ಯ ಎಂಬುದರ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ನ್ಯೂಕ್ಲಿಯರ್ ದಾಳಿಗೆ ಟ್ರಂಪ್ ಸ್ಕೆಚ್..? ಅಧಿಕಾರ ಹೋಗಿದ್ದಕ್ಕೆ ರಿವೇಂಜ್..?ನ್ಯೂಕ್ಲಿಯರ್ ದಾಳಿಗೆ ಟ್ರಂಪ್ ಸ್ಕೆಚ್..? ಅಧಿಕಾರ ಹೋಗಿದ್ದಕ್ಕೆ ರಿವೇಂಜ್..?

 ‘ಟ್ರಂಪ್ ತೊಲಗದಿದ್ದರೆ ಓಡಿಸಬಹುದು..!’

‘ಟ್ರಂಪ್ ತೊಲಗದಿದ್ದರೆ ಓಡಿಸಬಹುದು..!’

ಇದು ಅಮೆರಿಕದ ಅಳಿವು, ಉಳಿವಿನ ಪ್ರಶ್ನೆ. ಹೀಗಾಗಿ ಅಮೆರಿಕದ ಸಂಸದರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಗ್ದಂಡನೆ ಅತ್ಯಗತ್ಯ ಎಂದು ಡೆಮಾಕ್ರಟಿಕ್ ಸಂಸದರು ಹೇಳುತ್ತಿದ್ದಾರೆ. ಜನವರಿ 20ರ ನಂತರ ಕೂಡ ಟ್ರಂಪ್ ಅಧಿಕಾರ ಬಿಡದೇ ಇದ್ದರೆ, ವಾಗ್ದಂಡನೆ ಮೂಲಕ ಹೊರಗೆ ಕಳುಹಿಸಬಹುದು. ಈಗ ಪ್ರಕ್ರಿಯೆ ಶುರು ಮಾಡಿದರೆ, ವಾಗ್ದಂಡನೆ ಪ್ರಕ್ರಿಯೆ ಪೂರ್ಣಗೊಳ್ಳಲು ವಾರಗಳಷ್ಟು ಸಮಯ ಬೇಕು. ಹೀಗಾಗಿ ಜನವರಿ 20ರ ನಂತರ ಟ್ರಂಪ್ ಕಿರಿಕ್ ಮಾಡಿದರೆ ವೈಟ್‌ಹೌಸ್ ಖಾಲಿ ಮಾಡಿಸಲು ವಾಗ್ದಂಡನೆಯ ಬಲ ಸಿಗುತ್ತದೆ ಎಂಬುದು ಡೆಮಾಕ್ರಟಿಕ್ ಪಕ್ಷದ ಸಂಸದರು ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಾದ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಬೇಡ ಎಂದು ಪೆಲೋಸಿ ಹೇಳುತ್ತಿದ್ದಾರೆ.

'ಅಧಿಕಾರದಿಂದ ಟ್ರಂಪ್‌ನ ಒದ್ದೋಡಿಸಿ': ಡೊನಾಲ್ಡ್ ಟ್ರಂಪ್ ಬಂಟನ ಆಗ್ರಹ..!'ಅಧಿಕಾರದಿಂದ ಟ್ರಂಪ್‌ನ ಒದ್ದೋಡಿಸಿ': ಡೊನಾಲ್ಡ್ ಟ್ರಂಪ್ ಬಂಟನ ಆಗ್ರಹ..!

180 ಸಂಸದರ ಬಲ ಸಿಕ್ಕಿದೆ..!

180 ಸಂಸದರ ಬಲ ಸಿಕ್ಕಿದೆ..!

ಅಂದಹಾಗೆ ಡೆಮಾಕ್ರಟಿಕ್‌ ಸಂಸದ ಟೆಡ್ ಲಿಯು ತಿಳಿಸುವಂತೆ ಅಮೆರಿಕ ಕಾಂಗ್ರೆಸ್‌ನ ಕನಿಷ್ಠ 180 ಸದಸ್ಯರು ಟ್ರಂಪ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಟ್ರಂಪ್ ವಿರುದ್ಧ ಆರೋಪ ಹೊರಿಸಿ ಈಗಾಗಲೇ ಅಮೆರಿಕ ಕಾಂಗ್ರೆಸ್‌ನ 180 ಸದಸ್ಯರು ವಾಗ್ದಂಡನೆ ಪ್ರಸ್ತಾವಕ್ಕೂ ಸಹಿ ಹಾಕಿದ್ದಾರೆ. ಇದು ಡೆಮಾಕ್ರಟಿಕ್ ಹುರಿಯಾಳುಗಳಿಗೆ ಬಲವನ್ನ ನೀಡಿದೆ. ಟ್ರಂಪ್ ವಿರುದ್ಧ ತೊಡೆತಟ್ಟಿರುವ ಸಂಸದರು, ಅಮೆರಿಕದ ಅತ್ಯಂತ ವಿವಾದಾತ್ಮಕ ಅಧ್ಯಕ್ಷನನ್ನ ಮನೆಗೆ ಕಳುಹಿಸುವ ತಯಾರಿಯಲ್ಲಿದ್ದಾರೆ.

 ಮತ್ತೊಂದು ಅಸ್ತ್ರವೂ ಸಿದ್ಧವಿದೆ..!

ಮತ್ತೊಂದು ಅಸ್ತ್ರವೂ ಸಿದ್ಧವಿದೆ..!

ಟ್ರಂಪ್ ವಿರುದ್ಧ ಕೇವಲ ವಾಗ್ದಂಡನೆ ಅಸ್ತ್ರ ಮಾತ್ರವಲ್ಲ, ಮತ್ತೊಂದು ಪ್ರಬಲ ವೆಪನ್ ಕೂಡ ಸಿದ್ಧವಿದೆ. ಅದೇ ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ. ಆದರೆ ಇದನ್ನ ಜಾರಿಗೆ ತರಲು ಉಪಾಧ್ಯಕ್ಷರ ಬೆಂಬಲ ಬೇಕಾಗಿದೆ. ಈ ಸಂದರ್ಭದಲ್ಲಿ ಮೈಕ್ ಪೆನ್ಸ್ ಡಬಲ್ ಗೇಮ್ ಆಡ್ತಿದ್ದಾರೆ ಎಂದು ಖುದ್ದು ಅಮೆರಿಕ ಸಂಸದರು ಗಂಭೀರ ಆರೋಪ ಮಾಡುತ್ತಿದ್ದಾರೆ. ಹೀಗಾಗಿ 25ನೇ ತಿದ್ದುಪಡಿ ಅನ್ವಯ ಆಗದಿದ್ದರೂ, ಟ್ರಂಪ್ ಓಡಿಸಲು ವಾಗ್ದಂಡನೆ ಸಹಕಾರಿಯಾಗಲಿದೆ. ಅಕಸ್ಮಾತ್ ಮೈಕ್ ಪೆನ್ಸ್ ಮನಸ್ಸು ಬದಲಾಯಿಸಿದರೆ ಸಂವಿಧಾನದ 25ನೇ ತಿದ್ದುಪಡಿ ಹೇರಿ, ಟ್ರಂಪ್‌ಗೆ ಮನೆಯ ದಾರಿ ತೋರಿಸಬಹುದು.

ಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿಸೋಲೊಪ್ಪಿಕೊಂಡ ಟ್ರಂಪ್, ಜ.20ಕ್ಕೆ ಹೊಸ ಆಡಳಿತ ಸ್ವಾಗತಿಸಿ

English summary
House Democrats planned to introduce an article of impeachment for 2nd time against Donald Trump on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X