• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್ ಚುನಾವಣೆ: ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ ಅಧಿಕೃತ ಗೆಲುವು

|

ವಾಶಿಂಗ್ಟನ್, ನವೆಂಬರ್.22: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ-2020ರಲ್ಲಿ ಡೆಮಾಕ್ರೆಟಿಕ್ ಪಕ್ಷ ಅಭ್ಯರ್ಥಿ ಜೋ ಬಿಡೆನ್ ಗೆಲುವಿನ ಓಟ ಮುಂದುವರಿದಿದೆ. ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ 80,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಅಧಿಕೃತವಾಗಿ ಪ್ರಮಾಣಿಸಲಾಗಿದೆ.

ಮರು ಮತಎಣಿಕೆಗೆ ದೇಶಾದ್ಯಂತ ಅಭಿಯಾನ ನಡೆಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಪೆನ್ಸಿಲ್ವೇನಿಯಾದ ವಿಲಿಯಮ್ ಸ್ಪೋಟ್ಸ್ ನಲ್ಲಿ ಮಧ್ಯ ಯುಎಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಮ್ಯಾಥ್ಯೂ ಬ್ರಾನ್ ಟ್ರಂಪ್ ಅಭಿಯಾನಕ್ಕೆ ತಡೆಯಾಜ್ಞೆ ನೀಡಿದ್ದರು.

ಅಮೆರಿಕಾದಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ ಅಭ್ಯರ್ಥಿಗೆ 8 ಕೋಟಿ ಮತ!

ಪೆನ್ಸಿಲ್ವೇನಿಯಾದಲ್ಲಿ ಮತಗಳ ಚಾಲನೆ ವೇಳೆ ಸಾಂವಿಧಾನಿಕ ನಿಮಯಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ದೂಷಿಸಿದ್ದರು. ಮೇಲ್ ಮೂಲಕ ಚಲಾಯಿಸಿದ ಮತಗಳ ಎಣಿಕೆಯಲ್ಲಿ ತಾಂತ್ರಿಕ ದೋಷವಾಗಿದೆ ಎಂದು ಟ್ರಂಪ್ ಆರೋಪಿಸಿದ್ದರು.

"ಟ್ರಂಪ್ ರಾಗ ಮೊದಲೇನಲ್ಲ":

ಪೆನ್ಸಿಲ್ವೇನಿಯಾ ಕ್ಷೇತ್ರದಲ್ಲಿ ಈ ಮೊದಲೂ ಕೂಡಾ ಇದೇ ವಿಷಯಗಳನ್ನು ಪ್ರಸ್ತಾಪಿಸಿದ ಟ್ರಂಪ್ ಸೋಲು ಅನುಭವಿಸಿದ್ದರು ಎಂದು ಪೆನ್ಸಿಲ್ವೇನಿಯಾ ಕಾರ್ಯದರ್ಶಿ ಕಥಿ ಬುಕ್ವರ್ ತಿಳಿಸಿದ್ದಾರೆ. "ಅವರು ಬಯಸುವ ಆಮೂಲಾಗ್ರ ಹಕ್ಕು ನಿರಾಕರಣೆಗೆ ಯಾವುದೇ ಸಮರ್ಥನೆ ಇಲ್ಲ" ಎಂದು ವಕೀಲ ಬೂಕ್ವಾರ್ ಅವರು ಗುರುವಾರ ಸಲ್ಲಿಸಿದ ಸಂಕ್ಷಿಪ್ತ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಜೋ ಬಿಡೆನ್ ಮತ್ತು ಟ್ರಂಪ್ ನಡುವೆ ಅಂತರ:

   ರಾಜ್ಯ ರಾಜಕಾರಣ ಅಲ್ಲೋಲ ಕಲ್ಲೋಲವಾಗಲಿದೆ ಎಂದ ಕೋಡಿ ಮಠದ ಶ್ರೀಗಳು | Oneindia Kannada

   ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಟ್ಟು 538 ಮತಗಳ ಪೈಕಿ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕನಿಷ್ಠ 270 ಮತಗಳ ಅಗತ್ಯವಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 290 ಮತಗಳನ್ನು ಪಡೆದುಕೊಳ್ಳುವ ಮೂಲಕ ಜಯಭೇರಿ ಬಾರಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ 232 ಮತಗಳೊಂದಿಗೆ ಸೋಲು ಕಂಡಿದ್ದಾರೆ. ಇಷ್ಟಲ್ಲದೇ ಒಟ್ಟು 306 ಕ್ಷೇತ್ರಗಳಲ್ಲಿ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ.

   English summary
   US Election: Democratic Party Candidate Joe Biden Win In Pennsylvania By More Than 80,000 Votes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X