ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯುಎಸ್‌ಗೆ ಡೆಲ್ಟಾ ರೂಪಾಂತರ ದೊಡ್ಡ ಬೆದರಿಕೆ': ತಜ್ಞ ಫೌಸಿ

|
Google Oneindia Kannada News

ವಾಷಿಂಗ್ಟನ್‌, ಜೂ.23: ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದ ಕೊರೊನಾವೈರಸ್‌ನ ರೂಪಾಂತರವು ರಾಷ್ಟ್ರದಲ್ಲಿ ಕೋವಿಡ್‌ ನಿರ್ಮೂಲನೆ ಮಾಡುವ ಯುನೈಟೆಡ್‌ ಸ್ಟೇಟ್ಸ್‌ನ ಪ್ರಯತ್ನಕ್ಕೆ ದೊಡ್ಡ ಅಪಾಯವಾಗಿದೆ ಎಂದು ಯುಎಸ್ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಮಂಗಳವಾರ ಹೇಳಿದ್ದಾರೆ.

ಕೋವಿಡ್‌ನ ಮೂಲ ರೂಪಾಂತರಕ್ಕಿಂತ ಡೆಲ್ಟಾ ರೂಪಾಂತರದಲ್ಲಿ "ಪ್ರಸರಣವು ನಿಸ್ಸಂದೇಹವಾಗಿ ಹೆಚ್ಚಾಗಿದೆ" ಎಂದು ಫೌಸಿ ಹೇಳಿದ್ದು, "ಇದು ಹೆಚ್ಚಿದ ರೋಗದ ತೀವ್ರತೆಗೆ ಪರಿಣಾಮ ಬೀರಿದೆ," ಎಂದಿ‌ದ್ದಾರೆ.

'ಯುಎಸ್‌ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಕಡ್ಡಾಯವಲ್ಲ': ಎಂಇಎ'ಯುಎಸ್‌ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಕಡ್ಡಾಯವಲ್ಲ': ಎಂಇಎ

''ಡೆಲ್ಟಾ ರೂಪಾಂತರವು ಜಾಗತಿಕವಾಗಿ ರೋಗದ ಪ್ರಬಲ ರೂಪಾಂತರವಾಗುತ್ತಿದೆ,'' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಶುಕ್ರವಾರ ಹೇಳಿದ್ದಾರೆ. ''ಫೈಜರ್/ ಬಯೋಎಂಟೆಕ್ ಲಸಿಕೆ ಸೇರಿದಂತೆ ಯುನೈಟೆಡ್ ಸ್ಟೇಟ್‌ನಲ್ಲಿ ಅಧಿಕೃತ ಲಸಿಕೆಗಳು ಕೋವಿಡ್‌ನ ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿ,'' ಎಂದು ಕೂಡಾ ಫೌಸಿ ಹೇಳಿದರು.

Delta Variant Greatest Threat To US says Expert Fauci

"ನಮ್ಮಲ್ಲಿ ಈ ರೂಪಾಂತರದ ವಿರುದ್ದ ಹೋರಾಡಲು ಬೇಕಾದ ಅಗತ್ಯ ಸೌಲಭ್ಯಗಳಿದೆ. ನಾವು ಅದನ್ನು ಬಳಸಿ, ಕೊರೊನಾವನ್ನು ಕೊನೆಗಾಣಿಸೋಣ,'' ಎಂದು ಫೌಸಿ ಕರೆ ನೀಡಿದ್ದರೆ. ''ಜುಲೈ 4 ರ ವೇಳೆಗೆ ಅಮೆರಿಕಾದಲ್ಲಿ ಶೇ.70 ರಷ್ಟು ವಯಸ್ಕರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು ಅದರೆ ಇದು ಕುಸಿತ ಕಾಣುತ್ತಿದೆ. ಆ ಗುರಿಯನ್ನು ತಲುಪಲು ಕೆಲವು ಹೆಚ್ಚುವರಿ ಸಮಯ ಬೇಕಾಗಬಹುದು,'' ಎಂದು ಶ್ವೇತಭವನದ ಕೋವಿಡ್‌ ಹಿರಿಯ ಸಲಹೆಗಾರ ಜೆಫ್ರಿ ಝೆಂಟ್ಸ್‌ ತಿಳಿಸಿದ್ದಾರೆ.

ಸೋಮವಾರದ ಫೆಡರಲ್ ಮಾಹಿತಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ 150 ದಶಲಕ್ಷಕ್ಕೂ ಹೆಚ್ಚು ಜನರು, ಅಥವಾ ಶೇ.45 ಕ್ಕಿಂತ ಹೆಚ್ಚು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The Delta variant of the novel coronavirus that was first found in India is the greatest threat to the United States' effort to eradicate COVID-19 in its borders, said US infectious disease expert Dr Anthony Fauci Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X