ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ v/s ಬಿಡೆನ್ ಕಿರಿಕ್, ಡಿಬೆಟ್ ವೇಳೆ ಮೈಕ್ ಮ್ಯೂಟ್

|
Google Oneindia Kannada News

ಡೊನಾಲ್ಡ್ ಟ್ರಂಪ್ ಹಾಗೂ ಬಿಡೆನ್ ನಡುವಿನ 2ನೇ ಡಿಬೆಟ್‌ನಲ್ಲಿ ಮೈಕ್ ಮ್ಯೂಟ್ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು 23 ದಿನಗಳಲ್ಲಿ ಮತದಾನ ಮುಗಿಯಲಿದೆ. ಆದರೆ ಚುನಾವಣೆಗೂ ಮೊದಲು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ಎಲೆಕ್ಷನ್ ಡಿಬೆಟ್ ಈ ಬಾರಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್ 29ರಂದು ನಡೆದ ಮೊದಲ ಡಿಬೆಟ್‌ ಭಾರಿ ಅವಾಂತರಗಳಿಗೆ ಸಾಕ್ಷಿಯಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ಬಿಡೆನ್ ಮಾತನಾಡುವಾಗ ಮಧ್ಯಪ್ರವೇಶ ಮಾಡಿದ್ದರು. ಇದು ಚರ್ಚೆಯನ್ನೇ ಹಳ್ಳ ಹಿಡಿಸಿ, ನಗೆಪಾಟಲಿಗೂ ಈಡಾಯಿತು. ಈ ಮಧ್ಯೆ ಅಕ್ಟೋಬರ್ 15ರಂದು ನಿರ್ಧರಿತವಾಗಿದ್ದ ಡಿಬೆಟ್ ರದ್ದಾಗಿತ್ತು. ಟ್ರಂಪ್‌ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಡಿಬೆಟ್ ಕ್ಯಾನ್ಸಲ್ ಆಗಿತ್ತು.

ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?ಅಮೆರಿಕ ಚುನಾವಣೆ Poll: ಯಾರಿಗೆ ಸೋಲು, ಯಾರಿಗೆ ಗೆಲುವು..?

ಈಗ ಅಕ್ಟೋಬರ್ 22ರಂದು, ಅಂದರೆ ಗುರುವಾರ 3ನೇ ಹಾಗೂ ಕೊನೆಯ ಡಿಬೆಟ್ ನಡೆಯಲಿದೆ. ಆದರೆ ಅಮೆರಿಕದ ಎಲೆಕ್ಷನ್ ಡಿಬೆಟ್ (ಚರ್ಚೆ) ಇತಿಹಾಸದಲ್ಲೇ ಮೊಲದಬಾರಿಗೆ ಅಭ್ಯರ್ಥಿಗಳ ಮೈಕ್ ಮ್ಯೂಟ್ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಮೂಗುದಾರ ಹಾಕಲಾಗಿದ್ದು, ಡಿಬೆಟ್ ಕಮಿಷನ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಎಲೆಕ್ಷನ್ ಡಿಬೆಟ್‌ಗೆ 6 ದಶಕಗಳ ಇತಿಹಾಸ

ಎಲೆಕ್ಷನ್ ಡಿಬೆಟ್‌ಗೆ 6 ದಶಕಗಳ ಇತಿಹಾಸ

ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೆ ಒಮ್ಮೆ ಅಧ್ಯಕ್ಷೀಯ ಚುನಾವಣೆ ಎದುರಾದಾಗ ಸಾಂಪ್ರದಾಯಿಕವಾಗಿಯೇ ಡಿಬೆಟ್ ನಡೆಸಲಾಗುತ್ತದೆ. ಅಷ್ಟಕ್ಕೂ ಈ ಸಂಪ್ರದಾಯ ಬೆಳೆದು ಬಂದಿದ್ದು 1954ರಲ್ಲಿ, ಅದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರಯತ್ನದಿಂದ. ಇದಾದ ಬಳಿಕ 1960ರಲ್ಲಿ ನಡೆದಿದ್ದ ಕೆನಡಿ ಹಾಗೂ ನಿಕ್ಸನ್ ನಡುವಿನ ಚುನಾವಣಾ ಚರ್ಚೆ (Election Debate) ವಿಶ್ವದ ಗಮನ ಸೆಳೆದಿತ್ತು. ಹೀಗೆ ಸುಮಾರು 66 ವರ್ಷಗಳಿಂದಲೂ ಈ ರೀತಿ ಎಲೆಕ್ಷನ್ ಡಿಬೆಟ್ ಸಂಪ್ರದಾಯ ಮುಂದುವರಿದಿದೆ. ಆದರೆ ಕಳೆದ 6 ದಶಕಗಳಲ್ಲೇ ಹೆಚ್ಚು ವಿವಾದ ಸೃಷ್ಟಿಸಿದ್ದು 2020ರ 1ನೇ ಡಿಬೆಟ್. ಒಬ್ಬರು ಮಾತನಾಡುವಾಗ ಮತ್ತೊಬ್ಬ ಅಭ್ಯರ್ಥಿ ಮಧ್ಯಪ್ರವೇಶ ಮಾಡಿದ್ದು ಜಾಗತಿಕ ಮಟ್ಟದಲ್ಲಿ ಡಿಬೆಟ್ ನಗೆಪಾಟಲಿಗೆ ಈಡಾಗಿತ್ತು.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೂ ತಲೆನೋವು..!

ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೂ ತಲೆನೋವು..!

ಕಳೆದ ತಿಂಗಳು, ಅಂದರೆ ಸೆಪ್ಟೆಂಬರ್ 29ರ ಗುರುವಾರ ನಡೆದಿದ್ದ ಮೊದಲನೆಯ ಡಿಬೆಟ್ ಪತ್ರಕರ್ತ ಕ್ರಿಸ್ ವ್ಯಾಲೆಸ್‌ಗೂ ತಲೆನೋವು ತರಿಸಿತ್ತು. ಕಳೆದ ಹಲವು ವರ್ಷಗಳಿಂದ ಅಮೆರಿಕದಲ್ಲಿ ಡಿಬೆಟ್ ನಡೆಸಿಕೊಟ್ಟಿರುವ ಅನುಭವ ಕ್ರಿಸ್ ವ್ಯಾಲೆಸ್‌ಗೆ ಇದೆ. ಆದರೆ ಇಬ್ಬರು ಅಭ್ಯರ್ಥಿಗಳ ನಡುವೆ ನೇರ ವಾಗ್ವಾದ ಏರ್ಪಟ್ಟಾಗ ಸ್ವತಃ ಕ್ರಿಸ್ ವ್ಯಾಲೆಸ್‌ ಕೂಡ ಕಕ್ಕಾಬಿಕ್ಕಿಯಾಗಿದ್ದರು. ಒಂದು ಕಡೆ ಅಮೆರಿಕದ ಪವರ್‌ಫುಲ್ ಮ್ಯಾನ್ ಟ್ರಂಪ್, ಮತ್ತೊಂದು ಕಡೆ ಮಾಜಿ ಉಪಾಧ್ಯಕ್ಷ ಬಿಡೆನ್. ಇಬ್ಬರ ನಡುವೆ ಸಿಲುಕಿ ಕ್ರಿಸ್ ವ್ಯಾಲೆಸ್ ಕೂಡ ಗೊಂದಲಕ್ಕೆ ಸಿಲುಕಿದ್ದರು. ಬಿಡೆನ್ ಮಾತನಾಡುವ ಸಂದರ್ಭದಲ್ಲಿ ಪದೇಪದೆ ಟ್ರಂಪ್ ಅಡ್ಡಿ ಮಾಡುತ್ತಿದ್ದರು. ಕಡೆಗೆ ತಾಳ್ಮೆ ಕಳೆದುಕೊಂಡ ಕ್ರಿಸ್ ವ್ಯಾಲೆಸ್ ನನಗೆ ಡಿಬೆಟ್ ನಿರ್ವಹಿಸುವ ಹಕ್ಕಿದೆ ಎಂದು ಗದರಿಬಿಟ್ಟಿದ್ದರು.

ಚರ್ಚೆಗೂ, ವಾದಕ್ಕೂ ವ್ಯತ್ಯಾಸವಿದೆ..!

ಚರ್ಚೆಗೂ, ವಾದಕ್ಕೂ ವ್ಯತ್ಯಾಸವಿದೆ..!

ಅದೊಂದು ಕಾಲ ಇತ್ತು. ಅಮೆರಿಕದಲ್ಲಿ ಎಲೆಕ್ಷನ್ ಡಿಬೆಟ್ ನಡೆಯುತ್ತಿದೆ ಎಂದರೆ ಹಲವು ದೇಶಗಳ ಪಿಎಂ, ಪ್ರೆಸಿಡೆಂಟ್‌ಗಳು ಸಹ ನೇರಪ್ರಸಾರ ವೀಕ್ಷಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹದಗೆಟ್ಟಿದ್ದು, ಟ್ರಂಪ್ ಚರ್ಚೆಯ ಹಾದಿ ತಪ್ಪಿಸುತ್ತಿದ್ದಾರೆ ಎಂಬ ಆರೋಪ ಡೆಮಾಕ್ರಟಿಕ್ ನಾಯಕರದ್ದು. ಪ್ರತಿಬಾರಿಯೂ ಎಲೆಕ್ಷನ್ ಡಿಬೆಟ್ ನಡೆಯುವಾಗ ಆಯ್ದ ವಿಷಗಳ ಮೇಲೆ ಚರ್ಚೆ ನಡೆಯುತ್ತದೆ. ಪ್ರತಿಯೊಬ್ಬರೂ 2 ನಿಮಿಷಗಳ ಕಾಲಾವಕಾಶ ಪಡೆಯುತ್ತಾರೆ. ಉದಾಹರಣೆಗೆ ಟ್ರಂಪ್‌ ಮೊದಲು ಮಾತನಾಡಲು 2 ನಿಮಿಷ ಸಮಯ ತೆಗೆದುಕೊಂಡರೆ, ಇನ್ನುಳಿದ 2 ನಿಮಿಷ ಬಿಡೆನ್ ಮಾತನಾಡುತ್ತಾರೆ. ಆಗ ಟ್ರಂಪ್ ಸೈಲೆಂಟ್ ಆಗಿ ಇರಬೇಕಾಗುತ್ತದೆ. ಆದರೆ ಕಳೆದ ಡಿಬೆಟ್‌ನಲ್ಲಿ ಟ್ರಂಪ್ ಪದೇಪದೆ ಬಿಡೆನ್ ಮಾತಿಗೆ ಅಡ್ಡಿಮಾಡಿದ್ದರು.

ಆಯೋಜಕರ ವಿರುದ್ಧ ಸಿಟ್ಟಿಗೆದ್ದ ಟ್ರಂಪ್

ಆಯೋಜಕರ ವಿರುದ್ಧ ಸಿಟ್ಟಿಗೆದ್ದ ಟ್ರಂಪ್

ಈಗಾಗಲೇ ಅಕ್ಟೋಬರ್ 15ರ 2ನೇ ಡಿಬೆಟ್ ಕ್ಯಾನ್ಸಲ್ ಆಗಿದೆ. ಈ ನಡುವೆ 3ನೇ ಮತ್ತು ಕೊನೆಯ ಡಿಬೆಟ್ ನಡೆಸಲು ತಯಾರಿ ನಡೆಸಲಾಗಿದೆ. ಮೊದಲಿಗೆ ಟ್ರಂಪ್ ಹಾಗೂ ಬಿಡೆನ್ ಒಪ್ಪಿಗೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಕೂಡ ಮುಗಿದಿದ್ದು, ಇಬ್ಬರೂ ನಾಯಕರು ಚರ್ಚೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ. ಅಕ್ಟೋಬರ್ 22ರ ಗುರುವಾರ 3ನೇ ಹಾಗೂ ಕೊನೆಯ ಡಿಬೆಟ್ ನಡೆಯಲಿದೆ. ಅದಕ್ಕೂ ಮೊದಲು ಡಿಬೆಟ್ ಕಮಿಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಾರಿ ಚರ್ಚೆ ವೇಳೆ ಅಭ್ಯರ್ಥಿಗಳ ಮೈಕ್ ಮ್ಯೂಟ್ ಮಾಡೋದಕ್ಕೆ ನಿರ್ಧರಿಸಲಾಗಿದೆ. ಆದರೆ ಇದರ ವಿರುದ್ಧ ಟ್ರಂಪ್ ರೊಚ್ಚಿಗೆದ್ದಿದ್ದು, ಆಯೋಜಕರ ವಿರುದ್ಧ ಅಮೆರಿಕದ ಹಾಲಿ ಅಧ್ಯಕ್ಷರು ಗರಂ ಆಗಿದ್ದಾರೆ. ಟ್ರಂಪ್ ಆಪ್ತ ಸಹಾಯಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?ಸಮೀಕ್ಷೆ ವರದಿ; ಅಮೆರಿಕ ಚುನಾವಣೆಯಲ್ಲಿ ಭಾರತೀಯರ ಬೆಂಬಲ ಯಾರಿಗೆ?

Recommended Video

Mysore Dasara : ಮೈಸೂರಿನಿಂದ ವಿಶೇಷ Trains ನಿಮಗೋಸ್ಕರ!! | Oneindia Kannada
ಬಿಡೆನ್‌ಗೆ ಸಹಾಯ ಮಾಡಲು ಈ ಕ್ರಮ..?

ಬಿಡೆನ್‌ಗೆ ಸಹಾಯ ಮಾಡಲು ಈ ಕ್ರಮ..?

ಇಂತಹ ಗಂಭೀರ ಆರೋಪ ಮಾಡುತ್ತಿರುವುದು ಟ್ರಂಪ್ ಆಪ್ತ ಸಹಾಯಕರು ಹಾಗೂ ಟ್ರಂಪ್ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿಕೊಂಡವರು. ಡಿಬೆಟ್ ಸಂದರ್ಭದಲ್ಲಿ ಮೈಕ್ ಮ್ಯೂಟ್ ಮಾಡುತ್ತಿರುವುದರ ಹಿಂದೆ ಬಿಡೆನ್‌ಗೆ ಸಹಾಯ ಮಾಡುವ ಉದ್ದೇಶ ಇದೆ ಎಂದು ಆರೋಪಿಸಲಾಗಿದೆ. ಡಿಬೆಟ್ ಕಮಿಷನ್ ಬಗ್ಗೆ ಟ್ರಂಪ್ ಚುನಾವಣಾ ಪ್ರಚಾರದ ಉಸ್ತುವಾರಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಬಿಡೆನ್ ಪಡೆ ಇದಕ್ಕೆ ತಾಳ್ಮೆಯಿಂದಲೇ ಉತ್ತರ ನೀಡಿದ್ದು, ಚರ್ಚೆ ವೇಳೆ ಪದೇಪದೆ ಅಡ್ಡ ಬಾಯಿ ಹಾಕುವುದನ್ನು ಸಹಿಸಲು ಅಸಾಧ್ಯ ಎಂದು ಟ್ರಂಪ್ ಕಾಲೆಳೆದಿದೆ. ಒಟ್ಟಾರೆ ಅಮೆರಿಕದಲ್ಲಿ ಈ ಬಾರಿ ಚುನಾವಣೆಗಿಂತಲೂ, ಚುನಾವಣೆ ಮೇಲಿನ ಚರ್ಚೆಯೇ ಜಗತ್ತಿನ ಗಮನ ಸೆಳೆದಿದೆ. 3ನೇ ಡಿಬೆಟ್ ಹೇಗೆ ನಡೆಯಲಿದೆ, ಟ್ರಂಪ್ ಹಾಗೂ ಬಿಡೆನ್ ನಡುವೆ ಮತ್ತೆ ಮಾತಿನ ಸಮರ ಏರ್ಪಡುತ್ತಾ ಅನ್ನೋದು ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

English summary
Thursday’s debate between Trump, Biden will feature a mute button to allow each candidate to speak uninterrupted. Debate organizers decided to apply this rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X