ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದ ಕಾಳ್ಗಿಚ್ಚಿಗೆ 31 ಮಂದಿ ಬಲಿ, ನೂರಾರು ಮಂದಿ ನಾಪತ್ತೆ

|
Google Oneindia Kannada News

ಕ್ಯಾಲಿಫೋರ್ನಿಯಾ, ನವೆಂಬರ್ 12: ಕ್ಯಾಲಿಫೋರ್ನಿಯಾದ ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಆವರಿಸಿರುವ ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 31ಕ್ಕೇರಿದೆ. ಇದು ರಾಜ್ಯದ ಇತಿಹಾಸದಲ್ಲೇ ಭೀಕರ ಕಾಡ್ಗಿಚ್ಚು ಎಂದು ಘೋಷಿಸಲಾಗಿದೆ.

ಕ್ಯಾಲಿಫೋರ್ನಿಯಾವನ್ನು ಸುಡುತ್ತಿದೆ ಬೆಂಕಿ: ಅಗ್ನಿ ಜ್ವಾಲೆಗೆ 9 ಮಂದಿ ದಹನ ಕ್ಯಾಲಿಫೋರ್ನಿಯಾವನ್ನು ಸುಡುತ್ತಿದೆ ಬೆಂಕಿ: ಅಗ್ನಿ ಜ್ವಾಲೆಗೆ 9 ಮಂದಿ ದಹನ

ಉತ್ತರ ಕ್ಯಾಲಿಫೋರ್ನಿಯಾದಲ್ಲಿನ ಕಾಡ್ಗಿಚ್ಚಿನಿಂದಾಗಿ ಒಂದೇ ಮನೆಯಲ್ಲಿ ಸುಟ್ಟು ಕರಕಲಾಗಿರುವ 5 ಮೃತದೇಹಗಳು ಪತ್ತೆಯಾಗಿವೆ. ಇನ್ನೊಂದೆಡೆ ಕಾರಿನಲ್ಲಿ 6 ಮೃತದೇಹಗಳು ದೊರಕಿವೆ ಎಂದು ಕಾಲ್ ಫೈರ್ ಅಧಿಕಾರಿಗಳು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆ ಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆ

ಸುಮಾರು 228 ಜನ ನಾಪತ್ತೆಯಾಗಿದ್ದು, 137 ಜನರು ಸ್ನೇಹಿತರು ಮತ್ತು ಸಂಬಂಧಿ ಮನೆಗಳಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಯಾರೊಬ್ಬರ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ಗುರುವಾರದಿಂದ ಆರಂಭಗೊಂಡ ಕಾಡ್ಗಿಚ್ಚು, ಗಾಳಿಯ ರಭಸಕ್ಕೆ ಮುನ್ನುಗ್ಗುತ್ತಿದ್ದು, ಈಗಾಗಲೇ 85,000 ಎಕರೆ (28,300) ಹೆಕ್ಟೇರ್ ಪ್ರದೇಶವನ್ನು ಸುಟ್ಟುಹಾಕಿದೆ. 6,700 ಮನೆಗಳು ಮತ್ತು ಉದ್ಯಮಗಳು ಸಂಪೂರ್ಣ ನಾಶವಾಗಿವೆ. ಇಲ್ಲಿ ತನಕ 1,50,000ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ. ಬೆಂಕಿಯ ಕೆನ್ನಾಲಿಗೆ ಹತೋಟಿಗೆ ಬರುತ್ತಿಲ್ಲ. ಹಾಗಾಗಿ ಎಲ್ಲೆಡೆ ವ್ಯಾಪಿಸಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು

Death toll hits 31, hundreds missing in record-breaking California wildfires

ಕಾಲ್ ಫೈರ್ ನ ಇತಿಹಾಸದಲ್ಲಿ 6,000 ಮನೆ ನಾಶ ಹಾಗೂ 1,11,000 ಎಕರೆ ನಾಶವೇ ಅಧಿಕ ಪ್ರಮಾಣದ ಹಾನಿ ಎನ್ನಲಾಗಿತ್ತು.

English summary
Deadly wildfires burning across Northern and Southern California have killed a total of 31 people across the state and forced the evacuation of hundreds of thousands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X