ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಬ್ಯಾಂಕ್ ನೂತನ ಅಧ್ಯಕ್ಷರಾಗಿ ಡೇವಿಡ್ ಮಲ್ಫಾಸ್ ಆಯ್ಕೆ

|
Google Oneindia Kannada News

ನ್ಯೂಯಾರ್ಕ್‌, ಏಪ್ರಿಲ್ 06: ವಿಶ್ವಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಡೇವಿಡ್ ಮಲ್ಫಾಸ್ ಅವರು ಆಯ್ಕೆ ಆಗಿದ್ದಾರೆ. ಅವರು ವಿಶ್ವಬ್ಯಾಂಕ್‌ನ 13ನೇ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವಿಶ್ವಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರುಗಳು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಿಫಾರಸ್ಸಿನ ಮೇರೆಗೆ ಡೇವಿಡ್ ಮಲ್ಫಾಸ್ ಅವರನ್ನು ವಿಶ್ವಬ್ಯಾಂಕ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಏಪ್ರಿಲ್ ಐದರಂದು ಡೇವಿಡ್ ಮಲ್ಫಾಸ್ ಅವರು ಅಧಿಕಾರ ಸ್ವೀಕರಿಸಲಿದ್ದು, ಐದು ವರ್ಷಗಳ ವರೆಗೆ ಅವರು ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

David Malpass selected as world banks new president

ಮಲ್ಫಾಸ್ ಅವರು ಟ್ರಂಪ್ ಅವರ ಆಡಳಿತ ಮುಖ್ಯಸ್ಥರಾಗಿದ್ದರು, ಅವರನ್ನೇ ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿದಾಗ ಆಕ್ಷೇಪಣೆಗಳು ಕೇಳಿ ಬಂದಿದ್ದವು, ನೊಬೆಲ್ ಪ್ರಶಸ್ತಿ ಪುರಸ್ಕೃತ ಜೋಸೆಫ್ ಸ್ಟಿಗ್ಲಿಟ್ಜ್ ಅವರು ಸಹ ಮಲ್ಫಾಸ್‌ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಈವರೆಗೆ ವಿಶ್ವಬ್ಯಾಂಕ್‌ನ ಅಧ್ಯಕ್ಷರಾಗಿರುವ ಎಲ್ಲರೂ ಅಮೆರಿಕದವರೇ ಆಗಿದ್ದಾರೆ. ಈ ಬಾರಿ ಬೇರೆ ದೇಶದವರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿತ್ತು. ಚೀನಾದ ಕಟು ವಿರೋಧಿಯಾಗಿರುವ ಮಲ್ಫಾಸ್ ಅವರ ಆಯ್ಕೆಯ ಹಿಂದೆ ಟ್ರಂಪ್ ಅವರ ಚೀನಾ ವಿರೋಧಿ ನೀತಿ ಇದೆ ಎಂದು ಹೇಳಲಾಗುತ್ತಿದೆ.

English summary
American David Malpass selected as world bank's new president. Donald Trumph recommended him for the post. He would be the 13th world bank president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X