• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: 'ಅಪ್ಪ ವಿಶ್ವವನ್ನೇ ಬದಲಾಯಿಸಿದ್ದಾರೆ' ಪ್ರತಿಭಟನೆ ನೋಡಿ ಫ್ಲಾಯ್ಡ್ ಮಗಳ ಮಾತು

|

ವಾಷಿಂಗ್ಟನ್, ಜೂನ್ 4: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಬಿಳಿ ವರ್ಣೀಯ ಪೊಲೀಸ್ ಬೂಟಿಗೆ ಸಿಕ್ಕಿ ಮೃತಪಟ್ಟಿದ್ದರು. ಇಡೀ ಅಮೇರಿಕದಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ.

ಫ್ಲಾಯ್ಡ್ 6 ವರ್ಷದ ಮಗಳು ಜಿಯಾನ್ನಾ 'ಡ್ಯಾಡಿ ಚೇಂಜ್ಡ್ ದಿ ವರ್ಲ್ಡ್'(ಅಪ್ಪ ವಿಶ್ವವನ್ನೇ ಬಲದಾಯಿಸಿದ್ದಾರೆ) ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಹಾಗೂ ಫ್ಲಾಯ್ಡ್ ಆತ್ಮೀಯ ಸ್ನೇಹಿತ ಸ್ಟೀಫನ್ ಜಾಕ್ಸನ್ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಗೂ ಇತ್ತು ಕೊರೊನಾ ವೈರಸ್ ಸೋಂಕು.!

ಜಾರ್ಜ್ ಫ್ಲಾಯ್ಡ್ ಅವರ ಶವಪರೀಕ್ಷೆಯ ವರದಿ ಬಹಿರಂಗವಾಗಿದ್ದು, ಅದರಲ್ಲಿ ಜಾರ್ಜ್ ಫ್ಲಾಯ್ಡ್ ಅವರಿಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು ಎಂಬ ಅಂಶ ಉಲ್ಲೇಖಿಸಲಾಗಿದೆ.

ಆ ವಿಡಿಯೋದಲ್ಲಿ ಏನಿದೆ?

ಆ ವಿಡಿಯೋದಲ್ಲಿ ಜಿಯಾನ್ನಾ ಜಾಕ್ಸನ್‌ ಅವರ ಹೆಗಲಮೇಲೆ ಕುಳಿತಿದ್ದಾಳೆ, ಮಿನ್ನಿಯಾಪೊಲೀಸ್‌ನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅದು ಅಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನಿಸಿದ ಗಿಯೆನ್ನಾ ಹೌದು ನನ್ನ ತಂದೆ ವಿಶ್ವವನ್ನೇ ಬದಲಿಸಿದ್ದಾರೆ ಎಂದು ಹೇಳುತ್ತಾಳೆ.

6 ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದಾರೆ

6 ಲಕ್ಷ ಮಂದಿ ವಿಡಿಯೋ ವೀಕ್ಷಿಸಿದ್ದಾರೆ

ಫ್ಲಾಯ್ಡ್ ಮಗಳು ಜಿಯಾನ್ನಾ ವಿಡಿಯೋವನ್ನು ಆರು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫ್ಲಾಯ್ಡ್ ಸಾವಿಗೆ ನ್ಯಾಯ ದೊರಕಿಸಿ ಎಂದು ಕುಟುಂಬ ಮನವಿ ಮಾಡಿದ್ದರು. ಸುದ್ದಿಗೋಷ್ಠಿ ಬಳಿಕ ಈ ವಿಡಿಯೋ ತೆಗೆಯಲಾಗಿತ್ತು.

ಜಾರ್ಜ್ ಫ್ಲಾಯ್ಡ್ ಹತ್ಯೆ: ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಫ್ಲಾಯ್ಡ್ ಪತ್ನಿಯ ನೋವಿನ ಮಾತು

ಫ್ಲಾಯ್ಡ್ ಪತ್ನಿಯ ನೋವಿನ ಮಾತು

ಫ್ಲಾಯ್ಡ್ ಒಳ್ಳೆಯವರು ಹೀಗಾಗಿ ಅವರ ಸಾವಿಗೆ ನ್ಯಾಯ ದೊರಕಿಸಿಕೊಡಿ, ಯಾರು ಏನು ಹೇಳುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ ಎಂದು ಫ್ಲಾಯ್ಡ್ ಪತ್ನಿ ರೋಕ್ಸಿ ಹೇಳಿದ್ದಾರೆ.

ಜೂನ್ 9ಕ್ಕೆ ಫ್ಲಾಯ್ಡ್ ಅಂತ್ಯಕ್ರಿಯೆ

ಜೂನ್ 9ಕ್ಕೆ ಫ್ಲಾಯ್ಡ್ ಅಂತ್ಯಕ್ರಿಯೆ

ಅಮೆರಿಕದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದ ಆಫ್ರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರ ಅಂತ್ಯಕ್ರಿಯೆ ಜೂನ್ 9ರಂದು ನಡೆಯಲಿದೆ. ಮಿನ್ನಿಯಾಪೋಲಿಸ್‌ನ ಪೊಲೀಸ್ ಡೆರೆಕ್ ಚೌವಿನ್, ಜಾರ್ಜ್ ಫ್ಲಾಯ್ಡ್ ತಲೆಯನ್ನು ಕಾಲಿನಿಂದ ಒತ್ತಿ ಹಿಡಿದಿದ್ದರಿಂದ ಜಾರ್ಜ್ ಉಸಿರಾಡಲಾಗದೆ ಸಾವನ್ನಪ್ಪಿದ್ದರು. ಜಾರ್ಜ್ ಸಾವು ಅಮೆರಿಕಾದಾದ್ಯಂತ ಪ್ರತಿಭಟನೆಯ ಕಾವೇರಿದೆ. ವರ್ಣಬೇಧ ನೀತಿಯ ವಿರುದ್ಧ ಎಲ್ಲರೂ ಧ್ವನಿಯೆತ್ತಿದ್ದಾರೆ. ಜೂನ್ 8 ರಂದು ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ.ಫ್ಲಾಯ್ಡ್ ಮರಣಾ ನಂತರ ಏನಾದರೂ ಸಹಾಯ ಬೇಕೆ ಎಂದು ಸಾವಿರಾರು ಮಂದಿ ಕರೆ ಮಾಡಿ ವಿಚಾರಿಸಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಕೂಡ ವಿಜೃಂಭಣೆಯಿಂದ ಮಾಡಬೇಕು ಎಂದು ಹೇಳಿದ್ದಾರೆ.

English summary
Amid protests across the United States against the killing of African-American George Floyd by a Minneapolis policeman, a video in which Floyd’s 6-year-old-daughter Gianna is heard saying, “daddy changed the world”, has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more