ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಮೇಯರ್

|
Google Oneindia Kannada News

ವಾಷಿಂಗ್ಟನ್, ಜನವರಿ 07: ಯುಎಸ್ಎನಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ಹೊತ್ತಿಗೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಪುಂಡಾಟ ಹೆಚ್ಚಾಗುತ್ತಿದ್ದಂತೆ ವಾಷಿಂಗ್ಟನ್ ಡಿಸಿಯಲ್ಲಿ ತುರ್ತು ಪರಿಸ್ಥಿತಿಯನ್ನು ಮೇಯರ್ ಮುರಿಯಲ್ ಬೌಸರ್ ಘೋಷಿಸಿದ್ದಾರೆ.

ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಇನ್ನು 15ದಿನಗಳ ಕಾಲ (ಜನವರಿ 21) ವಿಸ್ತರಿಸಲಾಗಿದೆ, ಎಲ್ಲೆಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಮೇಯರ್ ಹೇಳಿದ್ದಾರೆ. ಕ್ಯಾಪಿಟಲ್ ಹಿಲ್ಸ್ ಮೇಲೆ ಹಿಂಸಾತ್ಮಕ ದಾಳಿ ಮುಂದುವರೆದಿದ್ದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಮೇಯರ್ ಹೇಳಿದ್ದಾರೆ.

ಈ ದುರ್ಘಟನೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, ಮೊದಲಿಗೆ ಮೃತಪಟ್ಟ ಮಹಿಳೆಯನ್ನು ವಾಯುಸೇನೆಯ ಹಿರಿಯ ಅಧಿಕಾರಿ ಅಶ್ಲಿ ಬಾಬಿಟ್ ಎಂದು ಗುರುತಿಸಲಾಗಿದೆ.

Washington, D.C. Mayor Muriel Bowser extends public emergency for 15 Days

ಕ್ಯಾಪಿಟಲ್ ಹಿಲ್ಸ್ ಸಂಘರ್ಷ ಘಟನೆಗೆ ಸಂಬಂಧಿಸಿದಂತೆ ಸುಮಾರು 52ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ಮುಖ್ಯಸ್ಥ ರಾಬರ್ಟ ಜೆ ಕಾಂಟಿ ಹೇಳಿದ್ದಾರೆ.

ಟ್ರಂಪ್ ಟ್ವಿಟ್ಟರ್, ಫೇಸ್ಬುಕ್ ಖಾತೆ ತಾತ್ಕಾಲಿಕ ಬಂದ್ ಆಗಿದ್ದೇಕೆ?ಟ್ರಂಪ್ ಟ್ವಿಟ್ಟರ್, ಫೇಸ್ಬುಕ್ ಖಾತೆ ತಾತ್ಕಾಲಿಕ ಬಂದ್ ಆಗಿದ್ದೇಕೆ?

ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು12 ಗಂಟೆಗಳ ಕಾಲ ಹಾಗೂ ಫೇಸ್ಬುಕ್ 24ಗಂಟೆಗಳ ಕಾಲ ಕಾರ್ಯ ನಿರ್ವಹಿಸದಂತೆ ಸ್ಥಗಿತಗೊಳಿಸಲಾಗಿದೆ ಎಂದು ಫೇಸ್ಬುಕ್ ಪ್ರಕಟಣೆ ಹೊರಡಿಸಿದೆ. ಇದರ ಬೆನ್ನಲ್ಲೇ ಇನ್ಸ್ಟಾಗ್ರಮ್ ಖಾತೆ ಕೂಡಾ 24 ಗಂಟೆಗಳ ಕಾಲ ಲಾಕ್ ಆಗಿರಲಿದೆ ಎಂದು ಮುಖ್ಯಸ್ಥರಾದ ಆಡಂ ಮೊಸ್ಸೆರಿ ಹೇಳಿದ್ದಾರೆ. ಆದರೆ, ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು ವಾಪಸ್ ತೆರಳಿ, ಶಾಂತಿಯುತವಾಗಿ ವರ್ತಿಸಿ ಎಂದು ಟ್ರಂಪ್ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.

Washington, D.C. Mayor Muriel Bowser extends public emergency for 15 Days

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದಿದ್ದಾರೆ ಎಂದು ಈಗಾಗ್ಲೇ ಎಲೆಕ್ಟೊರಾಲ್ ಕಾಲೇಜು ಸ್ಪಷ್ಟಪಡಿಸಿದೆ. 46ನೇ ಅಧ್ಯಕ್ಷರಾಗಿ ಬೈಡನ್ ಗೆಲುವನ್ನು ಅಮೆರಿಕ ಚುನಾವಣಾ ಆಯೋಗ ಖಚಿತಪಡಿಸಿದೆ. ಇದರ ಬೆನ್ನಲ್ಲೇ ಅಮೆರಿಕನ್ ಕಾಂಗ್ರೆಸ್ ಅಥವಾ ಜನಪ್ರತಿನಿಧಿಗಳ ಸಭೆಯಲ್ಲಿ ಬೈಡನ್ ಗೆಲುವನ್ನು ಅಂಗೀಕರಿಸಿ ಪ್ರಮಾಣ ಪತ್ರ ನೀಡಿದೆ.

English summary
Washington, D.C. Mayor Muriel Bowser extends public emergency for 15 Days following US Capitol breach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X