ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವಿರುದ್ಧ ರಷ್ಯಾ ಯುದ್ಧ? ದೊಡ್ಡಣ್ಣನ ಖಜಾನೆಗೆ ಹ್ಯಾಕರ್ಸ್ ಕನ್ನ..?

|
Google Oneindia Kannada News

ಕೊರೊನಾ ಕೂಪದಲ್ಲಿ ಸಿಲುಕಿ ವಿಲವಿಲನೆ ಒದ್ದಾಡುತ್ತಿರುವ ಅಮೆರಿಕನ್ನರಿಗೆ ಸೈಬರ್ ಗ್ಯಾಂಗ್ ಮತ್ತೆ ಶಾಕ್ ಕೊಟ್ಟಿದೆ. ಅಮೆರಿಕದ ಹಣಕಾಸು ಇಲಾಖೆ ಕಂಪ್ಯೂಟರ್‌ಗಳನ್ನ ಹ್ಯಾಕರ್ಸ್ ಲಪಟಾಯಿಸಿರುವ ಆರೋಪ ಕೇಳಿಬಂದಿದೆ. ದೊಡ್ಡಣ್ಣ ಅಮೆರಿಕದ ಹಣಕಾಸು ಇಲಾಖೆಗೆ ಸಂಬಂಧಿಸಿದ ಬಹುಮುಖ್ಯ ದಾಖಲೆಗಳನ್ನು ಈ ಮೂಲಕ ಹ್ಯಾಕರ್‌ಗಳು ಕದ್ದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಫೆಡರಲ್ ಅಧಿಕಾರಿಗಳು ತಿಳಿಸಿರುವುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಈ ಹಿಂದೆ ಕೂಡ ಹಲವು ಬಾರಿ ಅಮೆರಿಕದ ಮೇಲೆ ಸೈಬರ್ ಅಟ್ಯಾಕ್ ನಡೆದಿತ್ತು. ಹೀಗೆ ತಮ್ಮ ವಿರುದ್ಧ ಸೈಬರ್ ದಾಳಿಗಳು ನಡೆದಾಗಲೆಲ್ಲಾ ಅಮೆರಿಕ ರಷ್ಯಾ ಕಡೆಗೆ ಬೆರಳು ತೋರಿಸುತ್ತಾ ಬಂದಿದೆ. ಸೈಬರ್ ದಾಳಿ ರಷ್ಯಾ ಮೂಲದ ಹ್ಯಾಕರ್ಸ್ ಕೃತ್ಯ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ. ಆದರೆ ಈವರೆಗೂ ರಷ್ಯಾ ಸೈಬರ್ ದಾಳಿ ಮಾಡಿದೆ ಎಂಬುದಕ್ಕೆ ಬಲವಾದ ಸಾಕ್ಷಿ ಸಿಕ್ಕಿಲ್ಲ. ಇದೀಗ ಮತ್ತೆ ಅಂತಹದ್ದೇ ಘಟನೆ ನಡೆದಿದ್ದು, ಈ ಬಾರಿಯೂ ಸಹಜವಾಗಿ ರಷ್ಯಾದ ಪುಟಿನ್ ಸರ್ಕಾರದ ವಿರುದ್ಧವೇ ಅಮೆರಿಕ ಆರೋಪಿಸಿದೆ. ದಾಳಿಯಲ್ಲಿ ಮಹತ್ವದ ದಾಖಲೆಗಳು ಕಳುವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ಜಗತ್ತಿನಲ್ಲಿ ರಷ್ಯನ್ ಹ್ಯಾಕರ್ಸ್ ಹೆಸರು ಕೇಳಿದರೆ ಭಯ ಆವರಿಸಿಬಿಡುತ್ತದೆ. ಏಕೆಂದರೆ ರಷ್ಯಾದ ಹ್ಯಾಕರ್‌ಗಳು ಅಷ್ಟು ಖತರ್ನಾಕ್. ಚಿಟಿಕೆ ಹೊಡೆಯುವುದರ ಒಳಗಾಗಿ ಎಂತಹ ಪ್ರಬಲ ಕಂಪ್ಯೂಟರ್‌ಗಳನ್ನು ಬೇಕಾದರೂ ಮುಳುಗಿಸಿಬಿಡುತ್ತಾರೆ. ಅದೆಷ್ಟೇ ಸೈಬರ್ ಸೆಕ್ಯೂರಿಟಿ ಕೊಟ್ಟಿದ್ದರೂ ರಷ್ಯನ್ ಹ್ಯಾಕರ್ಸ್ ಕೈಯಿಂದ ಬಚಾವ್ ಆಗುವುದು ತುಂಬಾನೇ ಕಷ್ಟ. ಅದರಲ್ಲೂ ಅಮೆರಿಕದ ಕಂಪ್ಯೂಟರ್‌ಗಳು ಎಂದರೆ ರಷ್ಯಾ ಹ್ಯಾಕರ್ಸ್‌ಗೆ ಬಲು ಪ್ರೀತಿ. ಹೀಗಾಗಿ ಪದೇ ಪದೆ ಅಮೆರಿಕದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ ಎಂಬ ಆರೋಪವಿದೆ.

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಅಂದಹಾಗೆ 2 ತಿಂಗಳ ಅಂತರದಲ್ಲಿ ಅಮೆರಿಕದ ಸರ್ಕಾರಿ ಇಲಾಖೆಗಳ ಮೇಲೆ ನಡೆಯುತ್ತಿರುವ 2ನೇ ಸೈಬರ್ ದಾಳಿ ಇದಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ದಾಳಿ ನಡೆದಿತ್ತು. ಕಳೆದ ಅಕ್ಟೋಬರ್ ಅಂತ್ಯದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕದ ನೀರು ಸರಬರಾಜು ಕೇಂದ್ರ, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿತ್ತು.

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್‌ಪೋರ್ಟ್‌ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ಮೇಲೆ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

'ಟ್ರಂಪ್‌ಗೆ ವೋಟ್ ಹಾಕಿ, ಇಲ್ಲ ಅಂದ್ರೆ..!': ಅಮೆರಿಕನ್ ಮತದಾರರಿಗೆ ಬೆದರಿಕೆ'ಟ್ರಂಪ್‌ಗೆ ವೋಟ್ ಹಾಕಿ, ಇಲ್ಲ ಅಂದ್ರೆ..!': ಅಮೆರಿಕನ್ ಮತದಾರರಿಗೆ ಬೆದರಿಕೆ

ಬೈಡನ್ ಕೊಟ್ಟ ವಾರ್ನಿಂಗ್ ಏನು..?

ಬೈಡನ್ ಕೊಟ್ಟ ವಾರ್ನಿಂಗ್ ಏನು..?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶತ್ರುದೇಶಗಳು ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆ ಎಂದು ಡಿಬೆಟ್ ವೇಳೆ ಬೈಡನ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಅಮೆರಿಕ ತಂಟೆಗೆ ಬಂದವರಿಗೆ ಮುಂದಿದೆ ಮಾರಿಹಬ್ಬ ಎಂಬ ಮುನ್ಸೂಚನೆ ಕೂಡ ಜೋ ಬಿಡೆನ್‌ರಿಂದ ಸಿಕ್ಕಿತ್ತು. ಬಿಡೆನ್ ಈ ರೀತಿಯ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಷ್ಯಾ ಹ್ಯಾಕರ್ಸ್ ಕೃತ್ಯ ಬಟಾಬಯಲಾಗಿತ್ತು. ರಷ್ಯಾ ಮೂಲದ ಹ್ಯಾಕರ್‌ಗಳ ಬಗ್ಗೆ ಜೋ ಬೈಡನ್ ಸಹಿತವಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಹಲವು ವರ್ಷಗಳಿಂದ ನಾನಾ ಆರೋಪ ಮಾಡುತ್ತಾ ಬಂದಿದ್ದಾರೆ. ಎಲ್ಲಾ ಆರೋಪಗಳಿಗೂ ಅಮೆರಿಕ ಅಧಿಕಾರಿಗಳೇ ಉತ್ತರ ನೀಡಿದ್ದು, ಅಮೆರಿಕದ ಮೇಲೆ ಸೈಬರ್ ದಾಳಿ ಮಾಡಿರುವ ಬಗ್ಗೆ ಸತ್ಯ ಒಪ್ಪಿಕೊಂಡಿದ್ದಾರೆ. ಅಲ್ಲದೆ ತಾವು ಅಧಿಕಾರಕ್ಕೆ ಬಂದ ನಂತರ ಇದಕ್ಕೆ ಉತ್ತರ ನೀಡುವುದಾಗಿ ಜೋ ಬೈಡನ್ ಹೇಳಿದ್ದರು, ಮುಂದಿನ ತಿಂಗಳು ಬೈಡನ್ ಅಧಿಕಾರ ವಹಿಸಿಕೊಳ್ಳಲಿದ್ದು ತೀವ್ರ ಕುತೂಹಲ ಕೆರಳಿಸಿದೆ.

English summary
Federal officials have confirmed that cyber-attack on the U.S. Treasury Department. Once again America alleges on Russia about this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X