ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಮೇಲೆ ನ್ಯೂಕ್ಲಿಯರ್ ದಾಳಿಗೆ ಸಂಚು, ಬೆಚ್ಚಿಬಿದ್ದ 'ದೊಡ್ಡಣ್ಣ'

|
Google Oneindia Kannada News

ಅಮೆರಿಕದಲ್ಲಿ ಮತ್ತೊಮ್ಮೆ ಹ್ಯಾಕರ್ಸ್‌ ಅಟ್ಟಹಾಸ ಮೆರೆದಿದ್ದಾರೆ. ಈ ಬಾರಿ ಅಮೆರಿಕದ ಇಂಧನ ಇಲಾಖೆ ಮೇಲೆ ಸೈಬರ್ ಅಟ್ಯಾಕ್ ಆಗಿದೆ. ದಾಳಿಯನ್ನು ಅಮೆರಿಕ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೈಬರ್ ಅಟ್ಯಾಕ್ ಎಂದು ಅಮೆರಿಕದ ಫೆಡರಲ್ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟಕ್ಕೂ ಸಾಮಾನ್ಯ ದಾಳಿಯಾಗಿದ್ದರೆ ಅಮೆರಿಕ ಅಷ್ಟು ತಲೆಕೆಡಿಸಿಕೊಂಡು ಕೂರುತ್ತಿರಲಿಲ್ಲ. ಆದರೆ ಅಮೆರಿಕದ ಇಂಧನ ಇಲಾಖೆ ನ್ಯೂಕ್ಲಿಯರ್ ಪ್ಲಾಂಟ್‌ಗಳ ಉಸ್ತುವಾರಿ ಹೊತ್ತಿರುತ್ತದೆ.

ಹೀಗಾಗಿ ಇಂಧನ ಇಲಾಖೆ ಮೇಲೆ ದಾಳಿ ನಡೆದರೆ, ಅಮೆರಿಕದ ನ್ಯೂಕ್ಲಿಯರ್ ಪ್ಲಾಂಟ್‌ಗಳ ರಹಸ್ಯ ಮಾಹಿತಿಗಳು ಕೂಡ ಸೈಬರ್ ಕಳ್ಳರ ಕೈಸೇರಿರುವ ಸಾಧ್ಯತೆ ದಟ್ಟವಾಗಿದೆ. ಹಲವಾರು ಮಹತ್ವದ ದಾಖಲೆಗಳನ್ನ ಸೈಬರ್ ದಾಳಿಕೋರರು ಕದ್ದಿದ್ದು, ಸದ್ಯಕ್ಕೆ ಅಮೆರಿಕದ ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಆದರೆ ಇದು ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಸೃಷ್ಟಿಸುತ್ತದೆ ಎಂಬ ಭೀತಿ ಫೆಡರಲ್ ಅಧಿಕಾರಿಗಳದ್ದು.

ಅಮೆರಿಕ ವಿರುದ್ಧ ರಷ್ಯಾ ಯುದ್ಧ? ದೊಡ್ಡಣ್ಣನ ಖಜಾನೆಗೆ ಹ್ಯಾಕರ್ಸ್ ಕನ್ನ..?ಅಮೆರಿಕ ವಿರುದ್ಧ ರಷ್ಯಾ ಯುದ್ಧ? ದೊಡ್ಡಣ್ಣನ ಖಜಾನೆಗೆ ಹ್ಯಾಕರ್ಸ್ ಕನ್ನ..?

ಅಮೆರಿಕದಲ್ಲಿ ಈ ತಿಂಗಳಲ್ಲೇ ಎರಡು ಬಾರಿ ದೊಡ್ಡ ದೊಡ್ಡ ಸೈಬರ್ ದಾಳಿಗಳು ನಡೆದಿವೆ. ಕೆಲ ದಿನಗಳ ಹಿಂದೆ ಅಮೆರಿಕದ ಆರ್ಥಿಕ ಇಲಾಖೆ ಮೇಲೆ ಸೈಬರ್ ದಾಳಿ ನಡೆದಿತ್ತು. ಆಗ ಖಜಾನೆ ಲೂಟಿಗೆ ಹ್ಯಾಕರ್ಸ್ ಯತ್ನಿಸಿದ್ದಾರೆ ಎಂದು ಅಮೆರಿಕ ಆರೋಪ ಮಾಡಿತ್ತು.

 ರಷ್ಯಾ ವಿರುದ್ಧ ಅಮೆರಿಕ ಆರೋಪ..!

ರಷ್ಯಾ ವಿರುದ್ಧ ಅಮೆರಿಕ ಆರೋಪ..!

ಸೈಬರ್ ದಾಳಿಯ ಬೆನ್ನಲ್ಲೇ ಅಮೆರಿಕ ಬೆಚ್ಚಿಬಿದ್ದಿದೆ. ಅದರಲ್ಲೂ ತನ್ನ ದೇಶದ ನ್ಯೂಕ್ಲಿಯರ್ ಸೀಕ್ರೇಟ್ಸ್ ಶತ್ರು ಪಡೆ ಕೈಗೆ ಸಿಕ್ಕರೆ ಕತೆ ಮುಗಿಯಿತು ಎಂಬ ಭಯ ಅಮೆರಿಕದ ಅಧಿಕಾರಿಗಳಲ್ಲಿ ಆವರಿಸಿದೆ. ಹೀಗಾಗಿ ಎಲ್ಲೆಡೆ ಹೈಅಲರ್ಟ್ ಘೋಷಿಸಿರುವ ಅಮೆರಿಕದ ಅಧಿಕಾರಿಗಳು, ನ್ಯೂಕ್ಲಿಯರ್ ಪ್ಲಾಂಟ್‌ಗಳ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಇಂತಹ ದಾಳಿಗೆ ರಷ್ಯಾ ಮೂಲದ ಹ್ಯಾಕರ್ಸ್ ಕಾರಣ ಎಂದು ಅಮೆರಿಕ ಆರೋಪ ಮಾಡಿದೆ. ಆದರೆ ಅಮೆರಿಕದ ಆರೋಪವನ್ನು ರಷ್ಯಾ ತಳ್ಳಿಹಾಕಿದ್ದು, ತಲೆಬುಡ ಇಲ್ಲದ ಆರೋಪಗಳನ್ನ ಮಾಡಬೇಡಿ ಎಂದು ರಷ್ಯಾ ಖಡಕ್ ವಾರ್ನಿಂಗ್ ಕೊಟ್ಟಿದೆ.

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ಜಗತ್ತಿನಲ್ಲಿ ರಷ್ಯನ್ ಹ್ಯಾಕರ್ಸ್ ಹೆಸರು ಕೇಳಿದರೆ ಭಯ ಆವರಿಸಿಬಿಡುತ್ತದೆ. ಏಕೆಂದರೆ ರಷ್ಯಾದ ಹ್ಯಾಕರ್‌ಗಳು ಅಷ್ಟು ಖತರ್ನಾಕ್. ಚಿಟಿಕೆ ಹೊಡೆಯುವುದರ ಒಳಗಾಗಿ ಎಂತಹ ಪ್ರಬಲ ಕಂಪ್ಯೂಟರ್‌ಗಳನ್ನು ಬೇಕಾದರೂ ಮುಳುಗಿಸಿಬಿಡುತ್ತಾರೆ. ಅದೆಷ್ಟೇ ಸೈಬರ್ ಸೆಕ್ಯೂರಿಟಿ ಕೊಟ್ಟಿದ್ದರೂ ರಷ್ಯನ್ ಹ್ಯಾಕರ್ಸ್ ಕೈಯಿಂದ ಬಚಾವ್ ಆಗುವುದು ತುಂಬಾನೇ ಕಷ್ಟ. ಅದರಲ್ಲೂ ಅಮೆರಿಕದ ಕಂಪ್ಯೂಟರ್‌ಗಳು ಎಂದರೆ ರಷ್ಯಾ ಹ್ಯಾಕರ್ಸ್‌ಗೆ ಬಲು ಪ್ರೀತಿ. ಹೀಗಾಗಿ ಪದೇ ಪದೆ ಅಮೆರಿಕದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ ಎಂಬ ಆರೋಪವಿದೆ.

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಅಂದಹಾಗೆ 2 ತಿಂಗಳ ಅಂತರದಲ್ಲಿ ಅಮೆರಿಕದ ಸರ್ಕಾರಿ ಇಲಾಖೆಗಳ ಮೇಲೆ ನಡೆಯುತ್ತಿರುವ 3ನೇ ಸೈಬರ್ ದಾಳಿ ಇದಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ದಾಳಿ ನಡೆದಿತ್ತು. ಕಳೆದ ಅಕ್ಟೋಬರ್ ಅಂತ್ಯದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕದ ನೀರು ಸರಬರಾಜು ಕೇಂದ್ರ, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನ ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿತ್ತು. ಅದು ಕೂಡ ನಡೆದು ಹೋಗಿದೆ. ಅಮೆರಿಕದ ಇಂಧನ ಇಲಾಖೆ ಮೇಲೆ ದಾಳಿ ಮಾಡುವ ಮೂಲಕ ಅಲ್ಲಿನ ನ್ಯೂಕ್ಲಿಯರ್ ಪ್ಲಾಂಟ್‌ಗಳ ಮೇಲೆ ದಾಳಿಗೆ ಹೊಂಚು ಹಾಕಿರುವುದು ಬಯಲಾಗಿದೆ.

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್‌ಪೋರ್ಟ್‌ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ಮೇಲೆ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಬೈಡನ್ ಕೊಟ್ಟ ವಾರ್ನಿಂಗ್ ಏನು..?

ಬೈಡನ್ ಕೊಟ್ಟ ವಾರ್ನಿಂಗ್ ಏನು..?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಶತ್ರುದೇಶಗಳು ಹಸ್ತಕ್ಷೇಪ ಮಾಡಲು ಯತ್ನಿಸುತ್ತಿವೆ ಎಂದು ಡಿಬೆಟ್ ವೇಳೆ ಬೈಡನ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೆ ಅಮೆರಿಕ ತಂಟೆಗೆ ಬಂದವರಿಗೆ ಮುಂದಿದೆ ಮಾರಿಹಬ್ಬ ಎಂಬ ಮುನ್ಸೂಚನೆ ಕೂಡ ಜೋ ಬೈಡನ್ ರಿಂದ ಸಿಕ್ಕಿತ್ತು. ಬೈಡನ್ ಈ ರೀತಿಯ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ರಷ್ಯಾ ಹ್ಯಾಕರ್ಸ್ ಕೃತ್ಯ ಬಟಾಬಯಲಾಗಿತ್ತು. ರಷ್ಯಾ ಮೂಲದ ಹ್ಯಾಕರ್‌ಗಳ ಬಗ್ಗೆ ಜೋ ಬೈಡನ್ ಸಹಿತವಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಹಲವು ವರ್ಷಗಳಿಂದ ನಾನಾ ಆರೋಪ ಮಾಡುತ್ತಾ ಬಂದಿದ್ದಾರೆ.

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

ಎಲ್ಲಾ ಆರೋಪಗಳಿಗೂ ಅಮೆರಿಕ ಅಧಿಕಾರಿಗಳೇ ಉತ್ತರ ನೀಡಿದ್ದು, ಅಮೆರಿಕದ ಮೇಲೆ ಸೈಬರ್ ದಾಳಿ ಮಾಡಿರುವ ಬಗ್ಗೆ ಸತ್ಯ ಒಪ್ಪಿಕೊಂಡಿದ್ದಾರೆ. ಅಲ್ಲದೆ ತಾವು ಅಧಿಕಾರಕ್ಕೆ ಬಂದ ನಂತರ ಇದಕ್ಕೆ ಉತ್ತರ ನೀಡುವುದಾಗಿ ಜೋ ಬೈಡನ್ ಹೇಳಿದ್ದರು, ಮುಂದಿನ ತಿಂಗಳು ಬೈಡನ್ ಅಧಿಕಾರ ವಹಿಸಿಕೊಳ್ಳಲಿದ್ದು ತೀವ್ರ ಕುತೂಹಲ ಕೆರಳಿಸಿದೆ.

English summary
Another cyber-attack on American government. Energy department faced worst ever cyber-attack, this is the 2nd major cyber-attack in this month on America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X