ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಜತೆಗಿನ ರಕ್ಷಣಾ ಒಪ್ಪಂದ: ಅಮೆರಿಕದಿಂದ ಭಾರತಕ್ಕೆ ನಿರ್ಬಂಧದ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಜನವರಿ 5: ರಷ್ಯಾ ನಿರ್ಮಿತ ಎಸ್-400 ವೈಮಾನಿಕ ರಕ್ಷಣಾ ವ್ಯವಸ್ಥೆಯ ಬಹುಕೋಟಿ ವೆಚ್ಚದ ಖರೀದಿ ಒಪ್ಪಂದವು ಭಾರತಕ್ಕೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಒಪ್ಪಂದದ ಕಾರಣ ಭಾರತವು ಅಮೆರಿಕದ ನಿರ್ಬಂಧಕ್ಕೆ ಒಳಗಾಗಬಹುದು ಎಂದು ಅಮೆರಿಕದ ಸಂಸದೀಯ ವರದಿಯೊಂದು ಎಚ್ಚರಿಕೆ ನೀಡಿದೆ.

ಅಮೆರಿಕ ಸಂಸತ್ತಿನ ಕಾಂಗ್ರೆಷನಲ್ ರೀಸರ್ಚ್ ಸರ್ವೀಸ್ (ಸಿಆರ್ಎಸ್) ಎಂಬ ಸ್ವತಂತ್ರ ಮತ್ತು ಉಭಯಪಕ್ಷೀಯ ಸಂಶೋಧನಾ ಘಟಕ ತನ್ನ ಇತ್ತೀಚಿನ ವರದಿಯಲ್ಲಿ ಈ ಎಚ್ಚರಿಕೆ ನೀಡಿದೆ. 'ಭಾರತವು ಮತ್ತಷ್ಟು ತಂತ್ರಜ್ಞಾನ ಹಂಚಿಕೆ ಹಾಗೂ ಸಹ ಉತ್ಪಾದನಾ ಚಟುವಟಿಕೆಗಳಿಗೆ ಆಸಕ್ತಿ ತೋರಿಸುತ್ತಿದೆ. ಈ ನಡುವೆ ಅಮೆರಿಕವು ಭಾರತದ ರಕ್ಷಣಾ ಆಫ್‌ಸೆಟ್ ನೀತಿಯಲ್ಲಿ ಸುಧಾರಣೆ ಮತ್ತು ತನ್ನ ರಕ್ಷಣಾ ವಲಯದಲ್ಲಿ ಅಧಿಕ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದೆ' ಎಂದು ತಿಳಿಸಿದೆ.

ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಸಹಿ ಹಾಕಿದ ಮೋದಿ-ಪುಟಿನ್

ಸಂಸತ್‌ನ ಸದಸ್ಯರು ನಿರ್ಧಾರ ತೆಗೆದುಕೊಳ್ಳಲು ಅನುಕೂಲಕರವಾಗುವಂತೆ ಸಿದ್ಧಪಡಿಸಲಾಗಿರುವ ವರದಿಯು, ರಷ್ಯಾ ನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಭಾರತದ ಬಹುಕೋಟಿ ಡಾಲರ್ ಒಪ್ಪಂದವು, ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್ ಅಡಿಯಲ್ಲಿ ಭಾರತದ ಮೇಲಿನ ಅಮೆರಿಕದ ನಿರ್ಬಂಧಕ್ಕೆ ಎಡೆಮಾಡಿಕೊಡಬಹುದು ಎಂದು ಎಚ್ಚರಿಕೆ ನೀಡಿದೆ. ಮುಂದೆ ಓದಿ.

ಇದೇ ಅಂತಿಮ ವರದಿಯಲ್ಲ

ಇದೇ ಅಂತಿಮ ವರದಿಯಲ್ಲ

ಸಿಆರ್ಎಸ್ ವರದಿಯು ಅಮೆರಿಕ ಕಾಂಗ್ರೆಸ್‌ನ ಅಧಿಕೃತ ವರದಿಯಲ್ಲ ಮತ್ತು ಅದು ಸಂಸತ್ ಸದಸ್ಯರ ಅಧಿಕೃತ ದೃಷ್ಟಿಕೋನವನ್ನು ಪ್ರತಿಬಿಂಬಿಸುವುದಿಲ್ಲ. ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಸತ್ ಸದಸ್ಯರಿಗೆ ನೆರವಾಗುವಂತೆ ಸ್ವತಂತ್ರ ಪರಿಣತರು ಈ ವರದಿಗಳನ್ನು ಸಿದ್ಧಪಡಿಸುತ್ತಾರೆ.

ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?

ಐದು ಬಿಲಿಯನ್ ಡಾಲರ್ ಒಪ್ಪಂದ

ಐದು ಬಿಲಿಯನ್ ಡಾಲರ್ ಒಪ್ಪಂದ

2018ರ ಅಕ್ಟೋಬರ್‌ನಲ್ಲಿ ರಷ್ಯಾದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಐದು ಘಟಕಗಳನ್ನು ಖರೀದಿಸುವ ಸಲುವಾಗಿ ಭಾರತವು 5 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವು ಅಮೆರಿಕದ ನಿರ್ಬಂಧಗಳಿಗೆ ಆಹ್ವಾನ ನೀಡಬಲ್ಲದು ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಎಚ್ಚರಿಕೆ ನಡುವೆಯೂ ಭಾರತ ಮುಂದುವರಿದಿತ್ತು.

800 ಮಿಲಿಯನ್ ಡಾಲರ್ ಪಾವತಿ

800 ಮಿಲಿಯನ್ ಡಾಲರ್ ಪಾವತಿ

ಕ್ಷಿಪಣಿ ವ್ಯವಸ್ಥೆಗಳಿಗಾಗಿ 2019ರಲ್ಲಿ ರಷ್ಯಾಕ್ಕೆ ಸುಮಾರು 800 ಮಿಲಿಯನ್ ಡಾಲರ್‌ನ ಮೊದಲ ಹಂತದ ಪಾವತಿಯನ್ನು ಭಾರತ ಮಾಡಿತ್ತು. ಎಸ್-400 ರಷ್ಯಾದ ಅತ್ಯಂತ ಆಧುನಿಕ ಸುದೀರ್ಘ ವ್ಯಾಪ್ತಿಯ ನೆಲದಿಂದ ವಾಯು ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ.

ನಿರ್ಬಂಧಗಳನ್ನು ಪರಿಗಣಿಸುವುದಿಲ್ಲ

ನಿರ್ಬಂಧಗಳನ್ನು ಪರಿಗಣಿಸುವುದಿಲ್ಲ

ಎಸ್-400 ಕ್ಷಿಪಣಿ ವ್ಯವಸ್ಥೆಗಳ ಬ್ಯಾಚ್ ಪೂರೈಕೆ ಸೇರಿದಂತೆ ಭಾರತದೊಂದಿಗಿನ ಹಾಲಿ ರಕ್ಷಣಾ ಒಪ್ಪಂದಗಳನ್ನು ಜಾರಿಗೊಳಿಸುತ್ತಿರುವುದಾಗಿ ರಷ್ಯಾ ಕಳೆದ ತಿಂಗಳು ತಿಳಿಸಿತ್ತು. ಅಮೆರಿಕದ ನಿರ್ಬಂಧ ಬೆದರಿಕೆಗೆ ಸೆಡ್ಡು ಹೊಡೆದಿದ್ದ ರಷ್ಯಾದ ರಾಯಭಾರಿ ನಿಕೊಲಯ್ ಕುದಶೆವ್, ಅಂತಾರಾಜ್ಯ ಅಥವಾ ಅಂತಾರಾಷ್ಟ್ರೀಯ ಹಿತಾಸಕ್ತಿಗಳ ಸಾಧನ ಅಥವಾ ಭಾಷೆಯನ್ನಾಗಿ ಏಕಪಕ್ಷೀಯ ನಿರ್ಬಂಧಗಳನ್ನು ಬಳಸುವುದನ್ನು ನಾವು ಪರಿಗಣಿಸುವುದಿಲ್ಲ ಅಥವಾ ಸ್ವಾಗತಿಸುವುದಿಲ್ಲ ಎಂದು ಹೇಳಿದ್ದರು.

English summary
CRS reports of US Congress has warned that India's S-400 air defence missile system deal with Russia may trigger US sanctions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X