ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ದೃಢ: ವಿಮಾನ ಶೌಚಾಲಯದಲ್ಲಿ ಮಹಿಳೆ ಕ್ವಾರಂಟೈನ್

|
Google Oneindia Kannada News

ನ್ಯೂಯಾರ್ಕ್ ಡಿಸೆಂಬರ್ 31: ವಿಮಾನ ಪ್ರಯಾಣದ ವೇಳೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೆ ಮಹಿಳೆ ಐದು ಗಂಟೆಗಳ ಕಾಲ ಶೌಚಾಲಯದಲ್ಲಿ ಪ್ರತ್ಯೇಕವಾಗಿದ್ದ ಘಟನೆ ನಡೆದಿದೆ. ವಿಮಾನ ಪ್ರಯಾಣದ ವೇಳೆ ಅಮೆರಿಕಾದ ಶಾಲಾ ಶಿಕ್ಷಕಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ. ಹೀಗಾಗಿ ಮಹಿಳೆಯನ್ನು ವಿಮಾನದ ಶೌಚಾಲಯದಲ್ಲಿ ಐದು ಗಂಟೆಗಳ ಕಾಲ ಕ್ವಾರಂಟೈನ್ ನಲ್ಲಿರುವ ಪ್ರಸಂಗ ನಡೆದಿದೆ.

ಮಾರಿಸಾ ಫೋಟಿಯೊ ಎಂಬ ಅಮೆರಿಕಾದ ಶಾಲಾ ಶಿಕ್ಷಕಿ ಡಿಸೆಂಬರ್ 20 ರಂದು ಶಿಕಾಗೋದಿಂದ ಐಸ್‌ಲ್ಯಾಂಡ್‌ನ ರೇಕ್‌ಜಾವಿಕ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿದೆ. ಕೂಡಲೆ ಅವರಿಗೆ ರ್‍ಯಾಪಿಡ್ ಕೋವಿಡ್ ಟೆಸ್ಟ್ ಮಾಡಲಾಗಿದೆ. ಬಳಿಕ ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ. ಹೀಗಾಗಿ ಅವರ ಪ್ರಯಾಣದ ಐದು ಗಂಟೆಗಳ ಕಾಲ ಶೌಚಾಲಯದಲ್ಲಿಯೇ ಪ್ರತ್ಯೇಕವಾಗಿದ್ದರು. ಫ್ಲೈಟ್ ಅಟೆಂಡೆಂಟ್ ಅವರಿಗೆ ಶೌಚಾಲಯದಲ್ಲೇ ಆಹಾರ ಮತ್ತು ಪಾನೀಯಗಳನ್ನು ಒದಗಿಸಿದ್ದಾರೆ.

ಆದರೆ ಮಹಿಳೆ ವಿಮಾನ ಹತ್ತುವ ಮೊದಲು ಆಕೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರಾ? ಇಲ್ವಾ? ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇದೊಂದು ಹುಚ್ಚು ಅನುಭವ. ವಿಮಾನದಲ್ಲಿ 150 ಜನರು ಇದ್ದರು. ನನಗೆ ಭಯವೇನೆಂದರೆ ನನ್ನಿಂದ ಸೋಂಕು ಬೇರೆಯವರಿಗೆ ಹರಡುತ್ತಾ ಎನ್ನುವುದಾಗಿತ್ತು ಎಂದು Ms ಫೋಟಿಯೊ NBC ನ್ಯೂಸ್‌ಗೆ ತಿಳಿಸಿದ್ದಾರೆ. ಐಸ್‌ಲ್ಯಾಂಡಿರ್ ಜೆಟ್‌ನ ಶೌಚಾಲಯದ ಒಳಗಿನಿಂದ ಅವಳು ಟಿಕ್‌ಟಾಕ್‌ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಸಮಯದಲ್ಲಿ ತನಗೆ ಸಹಾಯ ಮಾಡಿದ್ದಕ್ಕಾಗಿ ಮಹಿಳೆ ಫ್ಲೈಟ್ ಅಟೆಂಡೆಂಟ್ ಅನ್ನು ಶ್ಲಾಘಿಸಿದ್ದಾಳೆ.

Covid: Woman isolates in toilet for five hours after positive mid-flight test
"ಮುಂದಿನ ಐದು ಗಂಟೆಗಳ ಕಾಲ ಆಹಾರದಿಂದ ಪಾನೀಯಗಳವರೆಗೆ ನನಗೆ ಬೇಕಾದ ಎಲ್ಲವನ್ನೂ ಅವರು ನೋಡಿಕೊಂಡಿದ್ದಾರೆ. ನಾನು ಚೆನ್ನಾಗಿದ್ದೇನೆ. ಜೊತೆಗೆ ಬಹುಬೇಗ ಗುಣಮುಖಳಾಗುತ್ತೇನೆ ಎನ್ನುವ ಭರವಸೆ ಇದೆ. ವಿಮಾನದಲ್ಲಿ ನನ್ನನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತಿತ್ತು" ಎಂದು ಅವರು NBC ಗೆ ತಿಳಿಸಿದರು. ಐಸ್‌ಲ್ಯಾಂಡ್‌ಗೆ ಆಗಮಿಸಿದ ನಂತರ ನಾನು ರೆಡ್‌ಕ್ರಾಸ್ ಹೋಟೆಲ್‌ನಲ್ಲಿ ಪ್ರತ್ಯೇಕಿಸಬೇಕಾಯಿತು ಎಂದು MS Fotieo ಹೇಳಿದರು.

ಚಲಿಸುತ್ತಿದ್ದ ವಿಮಾನದಲ್ಲಿದ್ದಾಗ ನನಗೆ ಕೋವಿಡ್‌ ತಗುಲಿರುವ ವಿಚಾರ ತಿಳಿದು ಅಳು ಬಂತು. ವಿಮಾನ ಪ್ರಯಾಣಕ್ಕೂ ಮುನ್ನ ನನ್ನ ಕುಟುಂಬದವರೊಂದಿಗೆ ಊಟ ಮಾಡಿದ್ದೆ. ವಿಮಾನದಲ್ಲಿ ಹಲವರೊಂದಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಈ ಎಲ್ಲಾ ವಿಷಯಗಳನ್ನು ನೆನೆದು ನನಗೆ ಭಯವಾಯಿತು ಎಂದು ಸೋಂಕಿತೆ ಹೇಳಿಕೊಂಡಿದ್ದಾರೆ. ಮಾರಿಸಾ ಅವರು ಕೋವಿಡ್‌ ಲಸಿಕೆಯ ಎರಡು ಡೋಸ್‌ ಹಾಗೂ ಬೂಸ್ಟರ್‌ ಡೋಸ್‌ ಕೂಡ ಪಡೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆಯದವರ ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಅವರಿಗೆ ಸೋಂಕು ತಗುಲಿದೆ.

ಕೋವಿಡ್ -19ರ ಓಮಿಕ್ರಾನ್ ರೂಪಾಂತರದ ಹರಡುವಿಕೆಯ ಮಧ್ಯೆ ಇಂಥ ಪ್ರಕರಣಗಳು ಯುಎಸ್‌ನಾದ್ಯಂತ ಪ್ರಕರಣಗಳ ಉಲ್ಬಣವನ್ನು ಮುಂದುವರೆಸಿವೆ. ಕೊರೊನಾ ವೈರಸ್‌ನ ಈ ಓಮಿಕ್ರಾನ್ ರೂಪಾಂತರವು ಇತರರಿಗಿಂತ ಸೌಮ್ಯವಾಗಿರುತ್ತದೆ. ಆದರೆ ಹೆಚ್ಚು ಹರಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ನ ಟ್ರ್ಯಾಕರ್ ಪ್ರಕಾರ, ದೇಶದಲ್ಲಿ ಏಳು ದಿನಗಳ ಹೊಸ ಪ್ರಕರಣಗಳ ದೈನಂದಿನ ಸರಾಸರಿ ಸಂಖ್ಯೆ 277,000 ಆಗಿದೆ. ಇದು ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಅತ್ಯಧಿಕ ಪ್ರಕರಣಗಳ ಸಂಖ್ಯೆಯಾಗಿದೆ. ಜೊತೆಗೆ ಸಾವುಗಳು ಮತ್ತು ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಸ್ಥಿರವಾಗಿದೆ. ಸೋಂಕಿನಿಂದಾಗಿ ಪ್ರತ್ಯೇಕಿಸಬೇಕಾದ ಜನರ ಸಂಖ್ಯೆ ಹೆಚ್ಚುತ್ತಿರುವುದು ವಿಮಾನ ಪ್ರಯಾಣ ಸೇರಿದಂತೆ ಹಲವಾರು ಕೈಗಾರಿಕೆಗಳ ಮೇಲೆ ಒತ್ತಡ ಹೇರಿದೆ.

English summary
A US schoolteacher says she spent five hours in voluntary self-isolation in a plane's toilet after testing positive for Covid-19 mid-flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X