ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಯುಎಸ್‌ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಕಡ್ಡಾಯವಲ್ಲ': ಎಂಇಎ

|
Google Oneindia Kannada News

ವಾಷಿಂಗ್ಟನ್‌, ಜೂ. 18: ಭಾರತೀಯ ವಿದ್ಯಾರ್ಥಿಗಳು ದೇಶಕ್ಕೆ ಪ್ರಯಾಣಿಸಲು ಲಸಿಕೆ ಕಡ್ಡಾಯವಲ್ಲ ಎಂದು ಅಮೆರಿಕಾ ಹೇಳಿದೆ ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಶೈಕ್ಷಣಿಕ ಅಧಿವೇಶನಗಳಿಗೆ ಹಾಜರಾಗಲು ಹಿಂದಿರುಗಿದ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು "ರಚನಾತ್ಮಕ ಪರಿಹಾರ" ವನ್ನು ಕಂಡುಹಿಡಿಯಬೇಕು ಎಂದು ಹೇಳಿದ್ದಾರೆ.

ಕೋವಿಡ್‌ ಲಸಿಕೆ ಬಗ್ಗೆ ಭಯಬೇಡ: ವ್ಯಾಕ್ಸಿನ್‌ ಪಡೆದ ಬಳಿಕ ಸೋಂಕು ದೃಢಪಟ್ಟ ಅಧಿಕ ಜನರಲ್ಲಿ ಸೌಮ್ಯ ಲಕ್ಷಣಕೋವಿಡ್‌ ಲಸಿಕೆ ಬಗ್ಗೆ ಭಯಬೇಡ: ವ್ಯಾಕ್ಸಿನ್‌ ಪಡೆದ ಬಳಿಕ ಸೋಂಕು ದೃಢಪಟ್ಟ ಅಧಿಕ ಜನರಲ್ಲಿ ಸೌಮ್ಯ ಲಕ್ಷಣ

ಇಲ್ಲಿನ ಯು.ಎಸ್. ರಾಯಭಾರ ಕಚೇರಿ ಇತ್ತೀಚೆಗೆ ಶಿಕ್ಷಣಕ್ಕಾಗಿ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸಿದೆ.

 Covid Vaccination not mandatory for students to travel to U.S. says MEA

"ನಮ್ಮ ವಿದ್ಯಾರ್ಥಿಗಳು ಪ್ರಯಾಣಿಸಲು ವ್ಯಾಕ್ಸಿನೇಷನ್ ಕಡ್ಡಾಯವಲ್ಲ ಎಂದು ಯು.ಎಸ್ ಸರ್ಕಾರ ಸ್ಪಷ್ಟಪಡಿಸಿದೆ. ನಮ್ಮ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಈ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ನನಗೆ ತಿಳಿದು ಬಂದಿದೆ," ಎಂದಿದ್ದಾರೆ.

ಒಂದೆಡೆ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ಗಳಿಗೆ ಮರಳಲು ಅನುಮತಿ ನೀಡುವ ಮೊದಲು ಲಸಿಕೆ ಕಡ್ಡಾಯ ಎಂದು ಕೆಲವು ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಹೇಳಿದೆ. ಇನ್ನೊಂದೆಡೆ ಯು.ಎಸ್. ಸರ್ಕಾರ ವಿದ್ಯಾರ್ಥಿಗಳು ಯು.ಎಸ್ ಗೆ ಪ್ರಯಾಣಿಸಲು ಲಸಿಕೆ ಕಡ್ಡಾಯವಲ್ಲ ಎಂದು ಹೇಳಿದೆ.

ಇನ್ನು ಎರಡೂ ಲಸಿಕೆ ಪಡೆಯದವರು ಒಂದು ವಾರ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ರಾಜ್ಯ ಇಲಾಖೆಯ ವಕ್ತಾರರು ಗುರುವಾರ ತಿಳಿಸಿದರು.

"ಜನವರಿ 26 ರಿಂದ ಅಮೆರಿಕಕ್ಕೆ ಬರುವ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಪ್ರಯಾಣಿಕರು ಕೊರೊನಾ ನೆಗೆಟಿವ್‌ ವರದಿ ಹೊಂದಿರಬೇಕು. ಕೊರೊನಾ ಬಂದಿದ್ದರೆ, ಸೋಂಕಿನಿಂದ ಗುಣಮುಖರಾದ ವರದಿ ಹೊಂದಿರಬೇಕು. ಈ ಆದೇಶವು ವಿದೇಶಿ ಪ್ರಜೆಗಳು ಮತ್ತು ಯು.ಎಸ್. ನಾಗರಿಕರಿಗೆ ಅನ್ವಯಿಸುತ್ತದೆ. ಇಲ್ಲಿಗೆ ಆಗಮಿಸಿದ ಐದು ದಿನಗಳಲ್ಲಿ ಮುಂದಿನ ಪರೀಕ್ಷೆಯ ನಡೆಸಲಾಗುತ್ತದೆ," ಎಂದು ವಕ್ತಾರರು ಮಾಹಿತಿ ನೀಡಿದರು.

(ಒನ್‌ಇಂಡಿಯಾ ಸುದ್ದಿ)

English summary
The United States has said vaccination is not a mandatory requirement for Indian students to travel to the country, a senior official of the Ministry of External Affairs said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X