• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್‌ ಲಸಿಕೆ ಪಡೆದುಕೊಂಡ ಅಮೆರಿಕನ್ನರಿಗೆ ಮಾಸ್ಕ್‌ ಧರಿಸಲು ಯು.ಎಸ್‌. ಸೂಚನೆ

|
Google Oneindia Kannada News

ವಾಷಿಂಗ್ಟನ್, ಜು.28: ಕೋವಿಡ್‌ ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿದ ಅಮೆರಿಕನ್ನರು ಕೊರೊನಾವೈರಸ್‌ ವೇಗವಾಗಿ ಹರಡುತ್ತಿರುವ ಪ್ರದೇಶಗಳಲ್ಲಿ ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕು ಎಂದು ಯು.ಎಸ್. ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ನೀಡಲಾದ ಮಾರ್ಗದರ್ಶನದ ಪ್ರಕಾರ, ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಕೂಡಾ ಶಿಫಾರಸು ಮಾಡಿರುವಂತೆ ನರ್ಸರಿಯಿಂದ ಹಿಡಿದು 12 ನೇ ತರಗತಿಯವರೆಗೆ ಶಾಲೆಗಳಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಸಣ್ಣ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಲಸಿಕೆ ಪಡೆದಿದ್ದರೂ ಕೂಡಾ ಮಾಸ್ಕ್‌ ಧರಿಸಬೇಕಾಗಿದೆ.

ಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿಯಾವ ದೇಶಗಳಲ್ಲಿ ಮಾಸ್ಕ್‌ ಧರಿಸಬೇಕಾಗಿಲ್ಲ? - ಇಲ್ಲಿದೆ ಮಾಹಿತಿ

ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದಿಂದಾಗಿ ಯು.ಎಸ್. ಕೊರೊನಾವೈರಸ್‌ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿ ಮೊದಲು ಪತ್ತೆಯಾದ ಈ ಕೋವಿಡ್‌ನ ಡಬಲ್‌ ರೂಪಾಂತರಿ ಡೆಲ್ಟಾ, ವಿಶ್ವದಾದ್ಯಂತ ಶೀಘ್ರವಾಗಿ ಹರಡಿದೆ. ಯು.ಎಸ್. ಕೊರೊನಾವೈರಸ್ ಪ್ರಕರಣಗಳಲ್ಲಿ 80% ಕ್ಕಿಂತ ಹೆಚ್ಚು ಡೆಲ್ಟಾ ರೂಪಾಂತರಗಳು ಪತ್ತೆಯಾಗಿದೆ.

ಮಾಸ್ಕ್‌ ಧರಿಸಿವುದು ಹಾಗೂ ಲಸಿಕೆ ಪಡೆಯುವ ಪ್ರಮಾಣ ಹೆಚ್ಚಿಸುವುದು 2020 ರಲ್ಲಿ ದೇಶವು ಎದುರಿಸಿದ ಸಾಂಕ್ರಾಮಿಕ ಲಾಕ್‌ಡೌನ್‌ಗಳು, ಬಂದ್ ಹಾಗೂ ಶಾಲೆಗಳ ಮುಚ್ಚುವಿಕೆಗಳನ್ನು ತಪ್ಪಿಸಲು ಯುನೈಟೆಡ್ ಸ್ಟೇಟ್ಸ್‌ಗೆ ಸಹಾಯ ಮಾಡುತ್ತದೆ ಎಂದು ಯು.ಎಸ್. ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. "ನಾವು ಅದಕ್ಕೆ ಹಿಂತಿರುಗುವುದಿಲ್ಲ" ಎಂದು ಕೂಡಾ ಬೈಡೆನ್ ಹೇಳಿದರು.

ಯು.ಎಸ್‌. ನ 63.4% ರಷ್ಟು ದೇಶಗಳಲ್ಲಿ ಪ್ರಸರಣ ದರವು ಅಧಿಕವಾಗಿದ್ದು ಈ ಹಿನ್ನಲೆ ತಕ್ಷಣ ಒಳಾಂಗಣದಲ್ಲೂ ಮಾಸ್ಕ್‌ ಧರಿಸುವ ನೀತಿಯನ್ನು ಪುನರಾರಂಭಿಸಬೇಕು ಎಂದು ಸಿಡಿಸಿ ಹೇಳಿದೆ. ಅಮೇರಿಕನ್ ಫೆಡರೇಶನ್ ಆಫ್ ಟೀಚರ್ಸ್ ಅಧ್ಯಕ್ಷ ರಾಂಡಿ ವೀಂಗಾರ್ಟನ್ ಮಾಸ್ಕ್‌ ಧರಿಸುವ ಮಾರ್ಗದರ್ಶನ ನೀಡಿದ ಹೊಸ ಸಿಡಿಸಿ ಮಾ‌ರ್ಗಸೂಚಿಯನ್ನು ಶ್ಲಾಘಿಸಿದರು.

"12 ವರ್ಷದೊಳಗಿನ ಮಕ್ಕಳು ಕೋವಿಡ್‌ ಲಸಿಕೆ ಪಡೆಯುವವರೆಗೆ ಮತ್ತು 12 ವರ್ಷಕ್ಕಿಂತ ಹೆಚ್ಚಿನ ಅಮೆರಿಕನ್ನರು ಲಸಿಕೆ ಪಡೆಯುವವರೆಗೆ ಮುನ್ನೆಚ್ಚರಿಕೆ ಅಗತ್ಯ," ಎಂದು ಹೇಳಿದರು. ಶಾಲೆಗಳಿಗೆ ಸಿಡಿಸಿಯ ಹಿಂದಿನ ಮಾರ್ಗದರ್ಶನವು ಲಸಿಕೆ ಹಾಕದವರು ಮಾತ್ರ ಮಾಸ್ಕ್‌ ಹಾಕಬೇಕು ಎಂದು ಸೂಚಿಸಿತ್ತು. ಆದಾಗ್ಯೂ, ಹೊಸ ಸಿಡಿಸಿ ಶಿಫಾರಸುಗಳು ಬದ್ಧವಾಗಿಲ್ಲ ಮತ್ತು ಅನೇಕ ಅಮೆರಿಕನ್ನರು, ವಿಶೇಷವಾಗಿ ರಿಪಬ್ಲಿಕನ್-ಒಲವು ಹೊಂದಿರುವ ರಾಜ್ಯಗಳಲ್ಲಿ, ಅವುಗಳನ್ನು ಅನುಸರಿಸದಿರಬಹುದು.

ಅರಿಜೋನ ಗವರ್ನರ್ ಡೌಗ್ ಡ್ಯೂಸಿ, ರಿಪಬ್ಲಿಕನ್, ಸಿಡಿಸಿ ಮಾರ್ಗದರ್ಶನವನ್ನು ತಿರಸ್ಕರಿಸಿದರು. "ಅರಿಝೋನಾ ಮಾಸ್ಕ್ ಆದೇಶಗಳನ್ನು ಅನುಮತಿಸುವುದಿಲ್ಲ," ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಾವು ಈ ನಿಯಮವನ್ನು ಕಾನೂನಿನಲ್ಲಿ ಅಂಗೀಕರಿಸಿದ್ದೇವೆ ಮತ್ತು ಅದು ಬದಲಾಗುವುದಿಲ್ಲ" ಎಂದು ಕೂಡಾ ಹೇಳಿದ್ದಾರೆ.

ನಮಗೆ ಡೆಲ್ಟಾ ರೂಪಾಂತರದ್ದೇ ಅತಿ ದೊಡ್ಡ ಚಿಂತೆ ಎಂದ ಅಮೆರಿಕನಮಗೆ ಡೆಲ್ಟಾ ರೂಪಾಂತರದ್ದೇ ಅತಿ ದೊಡ್ಡ ಚಿಂತೆ ಎಂದ ಅಮೆರಿಕ

ಯುನೈಟೆಡ್ ಸ್ಟೇಟ್ಸ್ ದೈನಂದಿನ ಸರಾಸರಿ ಹೊಸ ಸೋಂಕುಗಳಲ್ಲಿ ವಿಶ್ವದಲ್ಲೇ ಅಧಿಕವಾಗಿದೆ. ಪ್ರತಿದಿನ ವಿಶ್ವಾದ್ಯಂತ ವರದಿಯಾಗುವ ಪ್ರತಿ ಒಂಬತ್ತು ಪ್ರಕರಣಗಳಲ್ಲಿ ಒಂದು ಯುನೈಟೆಡ್ ಸ್ಟೇಟ್ಸ್‌ನ ಕೋವಿಡ್‌ ಪ್ರಕರಣವಾಗಿದೆ. ಹೊಸ ಪ್ರಕರಣಗಳು ಏಳು ದಿನಗಳಿಂದ ಸರಾಸರಿ ತೀವ್ರವಾಗಿ ಏರುತ್ತಿದ್ದು, 57,126 ರಷ್ಟಿದೆ.

ಎರಡು ತಿಂಗಳ ಹಿಂದೆ, ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಮಾಸ್ಕ್‌ಗಳನ್ನು ಧರಿಸಬೇಕಾಗಿಲ್ಲ ಎಂದು ಸಿಡಿಸಿ ಘೋಷಿಸಿದಾಗ, ಕೋವಿಡ್‌ ಪ್ರಕರಣಗಳು ಕ್ಷೀಣಿಸುತ್ತಿದ್ದವು. ಲಸಿಕೆ ನಂತರ ನಿಧಾನವಾಗಿದ್ದು, ಅರ್ಹರಾದ 58% ಜನರಿಗೆ ಮಾತ್ರ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ.

ಹೊಸ ಅಧ್ಯಯನಗಳು ಸೋಂಕಿಗೆ ಒಳಗಾದ ಜನರು ಲಸಿಕೆ ಪಡೆಯದ ಜನರು ಮಾತ್ರವಲ್ಲ ಲಸಿಕೆ ಪಡೆದಿರುವವರು ಆಗಿದ್ದಾರೆ ಪತ್ತೆ ಹಚ್ಚಿದೆ. ಇದು ಇತರರಿಗೆ ಹೆಚ್ಚಾಗಿ ಹರಡಲು ಕಾರಣವಾಗುತ್ತದೆ ಎನ್ನಲಾಗಿದೆ ಎಂದು ಸಿಡಿಸಿ ನಿರ್ದೇಶಕ ಡಾ. ರೋಚೆಲ್ ವಾಲೆನ್ಸ್ಕಿ ಟೆಲಿಫೋನ್ ಬ್ರೀಫಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
Covid Delta variant: U.S. urges vaccinated Americans to wear masks indoors in many places. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X