ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಲಸಿಕೆಗಳ ಮೇಲೆ ಹೇರಿದ್ದ ಡಿಪಿಎ ಹಿಂಪಡೆದ ಅಮೆರಿಕ ಸರ್ಕಾರ

|
Google Oneindia Kannada News

ವಾಷಿಂಗ್ಟನ್, ಜೂನ್ 04: ಮೂರು ಲಸಿಕೆಗಳ ಮೇಲೆ ಹೇರಿದ್ದ ಡಿಫೆನ್ಸ್ ಪ್ರೊಡಕ್ಷನ್ ಆಕ್ಟ್‌(ಡಿಪಿಎ)ನ್ನು ಅಮೆರಿಕ ಸರ್ಕಾರ ಹಿಂಪಡೆದಿದೆ.

ಅಮೆರಿಕದಲ್ಲಿ ಕೋವಿಡ್ ಲಸಿಕೆಯು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರಾಜೆನೆಕಾ, ನೋವಾವ್ಯಾಕ್ಸ್, ಸನೋಫಿ ಲಸಿಕೆ ಮೇಲೆ ಹೇರಿದ್ದ ಡಿಪಿಎ ಹಿಂಪಡೆಯಲಾಗಿದೆ. ಆದ್ಯತಾ ರೇಟಿಂಗ್‌ನ್ನು ಅಮೆರಿಕ ಸರ್ಕಾರ ತೆಗೆದುಹಾಕಿದೆ.

ಕೊರೊನಾ ಲಸಿಕೆ; ಭಾರತದ ಸಾಮರ್ಥ್ಯದ ಬಗ್ಗೆ ಅಮೆರಿಕ ಮೆಚ್ಚುಗೆ ಮಾತುಕೊರೊನಾ ಲಸಿಕೆ; ಭಾರತದ ಸಾಮರ್ಥ್ಯದ ಬಗ್ಗೆ ಅಮೆರಿಕ ಮೆಚ್ಚುಗೆ ಮಾತು

ಅಮೆರಿಕವು ಮೂರು ಕಾರ್ಯ ವಿಧಾನಗಳ ಮೂಲಕ ಲಸಿಕೆಯನ್ನು ಪೂರೈಸಲಿದೆ, ಮೊದಲನೆಯದಾಗಿ ತನ್ನ ನಾಗರಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಿದ ಬೆನ್ನಲ್ಲೇ ಇತರೆ ರಾಷ್ಟ್ರಗಳಿಗೆ ವಿತರಣೆ ಮಾಡುವುದು. ಎರಡನೆಯದಾಗಿ ವಿಶ್ವದ ಇತರೆ ಭಾಗಗಳಿಗೆ ಲಸಿಕೆ ಪೂರೈಕೆಯನ್ನು ಅಪಾರವಾಗಿ ಹೆಚ್ಚಿಸಲು ಲಸಿಕೆ ಉತ್ಪಾದನಾ ಕಂಪನಿಯನ್ನು ಉತ್ತೇಜಿಸುವುದು. ಮೂರನೆಯದಾಗಿ ಪಾಲುದಾರ ರಾಷ್ಟ್ರ ಮತ್ತು ಔಷಧ ಕಂಪನಿಗಳೊಂದಿಗೆ ಸೇರಿ ಲಸಿಕೆ ಉತ್ಪಾದನೆ ಮಾಡುವುದು ಎಂದು ಶ್ವೇತಭವನ ಕೋವಿಡ್ ನಿರ್ವಹಣಾ ತಂಡದ ಸಂಯೋಜಕ ಜೆಫ್ ತಿಳಿಸಿದ್ದಾರೆ.

Covid-19: US Removes DPA Ratings On AstraZeneca, Novavax, Sanofi Vaccines

ಡಿಪಿಎ ಮತ್ತು ಇತರೆ ಕಠಿಣ ಕ್ರಮಗಳಿಂದಾಗಿ ಈಗ ಅಮೆರಿಕನ್ನರಿಗೆ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಿದೆ. ಈ ದೃಷ್ಟಿಯಿಂದ ಆಸ್ಟ್ರಾಜೆನೆಕಾ , ನೋವಾವ್ಯಾಕ್ಸ್, ಮತ್ತು ಸನೋಫಿ ಕಂಪನಿಗಳ ಮೇಲೆ ಹೇರಲಾಗಿದ್ದ ಡಿಪಿಎಯನ್ನು ತೆಗೆದು ಹಾಕಲಾಗಿದೆ.

ಅಮೆರಿಕವು ಈಗಾಗಲೇ 40 ಲಕ್ಷ ಆಸ್ಟ್ರಾಜೆನೆಕಾ ಲಸಿಕೆಯ ಡೋಸ್‌ಗಳನ್ನುಕೆನಡಾ ಮತ್ತು ಮೆಕ್ಸಿಕೋಗೆನೀಡಿದೆ. ಜೂನ್ ಅಂತ್ಯದವರೆಗೆ 8 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದರು. ಇದು ಕಂಪನಿಗಳಿಗೆ ಲಸಿಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ ಎಂದರು.

English summary
Confident of the availability of Covid-19 vaccines in the country, the Biden Administration has removed Defense Production Act priority ratings on AstraZeneca, Novavax and Sanofi vaccines, a top US official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X