ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ವರ್ಷಗಳ ಬಳಿಕ ತನ್ನ ಅಂತಾರಾಷ್ಟ್ರೀಯ ಗಡಿ ತೆರೆದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 08: ಕೊರೊನಾ ಸೋಂಕಿನಿಂದಾಗಿ ಬಹುತೇಕ ದೇಶಗಳು ತನ್ನ ಅಂತಾರಾಷ್ಟ್ರೀಯ ಗಡಿ ಮುಚ್ಚಿದ್ದವು. ಅದರಲ್ಲಿ ಅಮೆರಿಕ ಕೂಡ ಒಂದಾಗಿತ್ತು.

ಇದೀಗ ಎರಡು ವರ್ಷಗಳ ಬಳಿಕ ಅಮೆರಿಕವು ತನ್ನ ಅಂತಾರಾಷ್ಟ್ರೀಯ ಗಡಿ ತೆರೆದಿದ್ದು, ಭಾರತ ಸೇರಿದಂತೆ ವಿವಿಧ ದೇಶಗಳ ನಾಗರಿಕರಿಗೆ ಪ್ರಯಾಣಾವಕಾಶವನ್ನು ಕಲ್ಪಿಸಿಕೊಟ್ಟಿದೆ.

ಅಕ್ಟೋಬರ್ 15ರಿಂದ ಭಾರತಕ್ಕೆ ಬರಲು ವಿದೇಶಿ ಪ್ರವಾಸಿಗರಿಗೆ ಅನುಮತಿಅಕ್ಟೋಬರ್ 15ರಿಂದ ಭಾರತಕ್ಕೆ ಬರಲು ವಿದೇಶಿ ಪ್ರವಾಸಿಗರಿಗೆ ಅನುಮತಿ

ಕೊರೊನಾ ಲಸಿಕೆಯ ಎರಡು ಡೋಸ್ ಪಡೆದಿರಬೇಕು ಜತೆಗೆ ಕೊರೊನಾ ನೆಗೆಟಿವ್ ವರದಿ ಪಡೆದಿದ್ದರೆ ಸಾಕು ಅಮೆರಿಕವನ್ನು ಪ್ರವೇಶಿಸಬಹುದು. ಅಮೆರಿಕ-ಮೆಕ್ಸಿಕೋ ನಡುವಿನ ಗಡಿಯೂ ಕೂಡ ತೆರೆದಿದೆ. ಅಮೆರಿಕದಲ್ಲಿರುವ ಭಾರತೀಯರು ಸ್ವದೇಶಕ್ಕೆ ಆಗಮಿಸಲು ಹಾಗೂ ಅಮೆರಿಕದಿಂದ ಭಾರತಕ್ಕೆ ಬಂದವರು ಮತ್ತೆ ಅಮೆರಿಕಕ್ಕೆ ಮರಳಲು ಸಾಧ್ಯವಾಗಲಿದೆ. ಜಗತ್ತಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿಷೇಧ ಹೇರಲಾಗಿತ್ತು.

COVID-19 Travel Restrictions Ends

ಯುರೋಪ್‌ನ ವಿವಿಧ ದೇಶಗಳು ಹಾಗೂ ಗಡಿಗೆ ಹೊಂದಿಕೊಂಡ ಮೆಕ್ಸಿಕೋ, ಕೆನಡಾ ಮೇಲಿನ ನಿರ್ಬಂಧ ಸಡಿಲಿಸಲಾಗಿದೆ. ಇದು ಈ ದೇಶಗಳ ಜನರಿಗೆ ಆಪ್ತರು, ಕುಟುಂಬ ಸದಸ್ಯರ ಭೇಟಿಗೆ ಹಾದಿ ಸುಗಮಗೊಳಿಸಿದೆ.

ನಿರ್ಬಂಧ ತೆರವು ಹಿಂದೆಯೇ ವಿಮಾನಯಾನ ಸಂಸ್ಥೆಗಳು ಯುರೋಪ್ ಹಾಗೂ ಇತರೆಡೆಯಿಂದ ಹೆಚ್ಚಿನ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದೆ. ಅಂಕಿ ಅಂಶಗಳ ಪ್ರಕಾರ ಯುರೋಪ್ ಹಾಗೂ ಅಮೆರಿಕ ನಡುವಣ ಪ್ರಯಾಣಿಕರ ಪ್ರಮಾಣ ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಈ ತಿಂಗಳು ಶೇ.21ರಷ್ಟು ಹೆಚ್ಚಾಗಿದೆ.

ಭಾರತವು ಅಕ್ಟೋಬರ್ 15ರಿಂದ ಪ್ರವಾಸಿ ವೀಸಾ ನೀಡಲು ಆರಂಭಿಸಿದೆ. ಚಾರ್ಟರ್ಡ್ ವಿಮಾನವನ್ನು ಹೊರತುಪಡಿಸಿ ಬೇರೆ ವಿಮಾನಗಳ ಮೂಲಕ ಭಾರತಕ್ಕೆ ಪ್ರಯಾಣಿಸುವ ವಿದೇಶಿ ಪ್ರವಾಸಿಗರು ನವೆಂಬರ್ 15ರಿಂದ ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳಿಗೆ ಅನುಸಾರವಾಗಿ ವೀಸಾ ನೀಡಲು ಸಾಧ್ಯವಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇತರೆ ವಿಮಾನಗಳ ಮೂಲಕ ಭಾರತಕ್ಕೆ ಬರುವವರಿಗೆ ನವೆಂಬರ್ 15ರ ಬಳಿಕ ವೀಸಾ ನೀಡಲಾಗುವುದು ಎಂದು ಹೇಳಿದೆ. ಚಳಿಗಾಲ ಆರಂಭವಾದ ಬಳಿಕ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ ಗೋವಾದ ತೀರಗಳು ವಿದೇಶಿ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಿದ್ದವು, ಈ ಕಾಣದಿಂದ ವಿದೇಶಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿರಲಿಲ್ಲ. ಈಗ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಲು ಸರ್ಕಾರ ಮುಂದಾಗಿದೆ.

English summary
Travel restrictions put in place during the pandemic are ending after more than a year and a half. On Monday, travelers from around the world can resume flights to the U.S. as long as they are vaccinated. VOA’s Arash Arabasadi spoke with an economist who explains what this means.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X