ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕೊನೆಯ ಸಾಂಕ್ರಾಮಿಕವಲ್ಲ: ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿ

|
Google Oneindia Kannada News

ಜಿನೀವಾ, ಸೆಪ್ಟೆಂಬರ್ 08: ಕೊರೊನಾ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ ಭವಿಷ್ಯದಲ್ಲಿ ಇಂತಹ ಹಲವು ಸವಾಲುಗಳು ಎದುರಾಗಬಹುದು ಅದನ್ನು ಎದುರಿಸಲು ಸಿದ್ಧರಾಗಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೇಯೆಸಸ್ ಅವರು, ಕೊರೋನಾ ವೈರಸ್ ಸೋಂಕು ಕೊನೆಯ ಸಾಂಕ್ರಾಮಿಕವಲ್ಲ. ಇಂತಹ ಹಲವು ಸಾಂಕ್ರಾಮಿಕಗಳು ಭವಿಷ್ಯದಲ್ಲಿ ಜಗತ್ತನ್ನು ಪೀಡಿಸಬಹುದು.

ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಬರುತ್ತೆ ಕೇಂದ್ರ ತಂಡ ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಬರುತ್ತೆ ಕೇಂದ್ರ ತಂಡ

ಹೀಗಾಗಿ ಭವಿಷ್ಯದ ಬಿಕ್ಕಟ್ಟುಗಳಿಗೆ ವಿಶ್ವದಾದ್ಯಂತ ದೇಶಗಳು ಸಿದ್ಧರಾಗಿರಬೇಕು. ಇದು ಮಾತ್ರವಲ್ಲ, ನಾವು ಯಾವುದೇ ಸಮಸ್ಯೆಯನ್ನು ನಿಭಾಯಿಸಬಹುದು, ಇದಕ್ಕಾಗಿ ಎಲ್ಲಾ ದೇಶಗಳು ಆರೋಗ್ಯ ರಕ್ಷಣೆಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

COVID-19 Is Not The Last Pandemic, World Must Be Better Prepared Warns WHO

ಇನ್ನು ಕಳೆದ 2019ರ ಡಿಸೆಂಬರ್ ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಕ್ರಮೇಣ ಜಗತ್ತಿನಾದ್ಯಂತ ಪ್ರಸರಿಸಿದ್ದು, ಸಾಂಕ್ರಾಮಿಕವಾಗಿ ಪರಿಣಮಿಸಿದೆ. ಕಳೆದ ಮಾರ್ಚ್ ನಲ್ಲಿಯೇ ವಿಶ್ವಸಂಸ್ಥೆ ಕೋವಿಡ್-19 ಅನ್ನು ಮಾರ್ಚ್ 11 ರಂದು ಸಾಂಕ್ರಾಮಿಕ ರೋಗವನ್ನು ಘೋಷಿಸಲಾಯಿತು.

ಕೊರೊನಾ ವೈರಸ್ ಕೊನೆಯ ಸಾಂಕ್ರಾಮಿಕವಲ್ಲ. ಸಾಂಕ್ರಾಮಿಕ ರೋಗಗಳು ಜೀವನದ ಒಂದು ಭಾಗ ಎಂದು ಇತಿಹಾಸ ನಮಗೆ ಕಲಿಸಿದೆ.

ಆದರೆ ಮುಂದಿನ ಬಾರಿ ಇಂತಹ ಸಾಂಕ್ರಾಮಿಕ ರೋಗ ಬಂದಾಗ, ನಾವೆಲ್ಲರೂ ಅದಕ್ಕೆ ಸಿದ್ಧರಾಗಿರಬೇಕು. ತಂತ್ರಜ್ಞಾನಗಳಲ್ಲಿ ಹೆಚ್ಚಿನ ಪ್ರಗತಿಯ ಹೊರತಾಗಿಯೂ, ಅನೇಕ ದೇಶಗಳು ಇನ್ನೂ ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಸರಿಯಾದ ದಿಕ್ಕಿನಲ್ಲಿ ಗಮನಹರಿಸಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇಶಗಳು ಸಾರ್ವಜನಿಕ ಆರೋಗ್ಯ ಸೇವೆಗಾಗಿ ಹೆಚ್ಚು ಹೂಡಿಕೆ ಮಾಡಬೇಕಾಗುತ್ತದೆ ಎಂದು ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.

English summary
World Health Organisation (WHO) chief Tedros Adhanom Ghebreyesus called on countries to invest in public health as COVID-19 will not be the last pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X