• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೋವಿಡ್-19'ಗೆ ಲಕ್ಷ ಜನ ಬಲಿ: ಅಮೇರಿಕನ್ನರ ಸಾವಿಗೆ ಕಾರಣವಾದ ಇತರೆ ಮಹಾ ದುರ್ಘಟನೆಗಳ ವಿವರ

|

ವಾಷಿಂಗ್ಟನ್, ಮೇ 27: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಮಹಾಮಾರಿ ನೋವೆಲ್ ಕೊರೊನಾ ವೈರಸ್ ಸೋಂಕು ಇಲ್ಲಿಯವರೆಗೂ 17,25,275 ಮಂದಿಗೆ ತಗುಲಿದೆ. ಈವರೆಗೂ ಯು.ಎಸ್.ಎ ಒಂದರಲ್ಲೇ 1,00,572 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ.

   3C ಪಾಲಿಸಿ ಮೂಲಕ ಕೊರೊನಾ ವಿರುದ್ಧ ಜಯಸಾಧಿಸಿದ ಜಪಾನ್..! | Japan against Corona

   ಇಡೀ ವಿಶ್ವದಲ್ಲೇ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಪ್ರಮಾಣ ಮತ್ತು ಸಾವಿನ ಸಂಖ್ಯೆ ಅತಿ ಹೆಚ್ಚು ದಾಖಲಾಗಿರುವುದು ಅಮೇರಿಕಾದಲ್ಲಿ.

   ಅಮೆರಿಕಾದಲ್ಲಿ ಕೊರೊನಾ ರಣಕೇಕೆ: 1 ಲಕ್ಷದ ಸನಿಹಕ್ಕೆ ಸಾವಿನ ಸಂಖ್ಯೆ

   ಕೋವಿಡ್-19 ರೋಗದಿಂದಾಗಿ ಯು.ಎಸ್.ಎ ಅಕ್ಷರಶಃ ಜರ್ಜರಿತಗೊಂಡಿದೆ. ಮೊದಲನೇ ಮಹಾ ಯುದ್ಧ, ಎರಡನೇ ಮಹಾ ಯುದ್ಧ ಮತ್ತು ಸ್ಪ್ಯಾನಿಶ್ ಫ್ಲೂ ಬಿಟ್ಟರೆ.. ಇಷ್ಟೊಂದು ಪ್ರಮಾಣದ ಸಾವು ಅಮೇರಿಕಾದಲ್ಲಿ ಸಂಭವಿಸಿರುವುದು ನೋವೆಲ್ ಕೊರೊನಾ ವೈರಸ್ ನಿಂದಲೇ.!

   ಚೀನಾಗಿಂತ ಯೂರೋಪ್, USನಲ್ಲಿ ಕೊರೊನಾ ಆರ್ಭಟ ಯಾಕೆ? ಭಯಾನಕ ಮಾಹಿತಿ ಬಯಲು!

   ಅಮೇರಿಕಾದಲ್ಲಿ ಮಾರಣಹೋಮಕ್ಕೆ ಕಾರಣವಾದ ಮಹಾ ದುರ್ಘಟನೆಗಳತ್ತ ಒಂದು ಇಣುಕು ನೋಟ ಇಲ್ಲಿದೆ, ಓದಿರಿ...

   ಸ್ಪ್ಯಾನಿಶ್ ಫ್ಲ್ಯೂಗೆ ಅತಿ ಹೆಚ್ಚು ಸಾವು

   ಸ್ಪ್ಯಾನಿಶ್ ಫ್ಲ್ಯೂಗೆ ಅತಿ ಹೆಚ್ಚು ಸಾವು

   1918 ರಿಂದ 1920 ವರೆಗೂ ಅಮೇರಿಕಾದಲ್ಲಿ ವ್ಯಾಪಕವಾಗಿ ಹಬ್ಬಿದ ಮಹಾಮಾರಿ ಸ್ಪ್ಯಾನಿಶ್ ಫ್ಲ್ಯೂಗೆ 6,75,000 ಕ್ಕೂ ಅಧಿಕ ಅಮೇರಿಕನ್ನರು ಪ್ರಾಣ ಬಿಟ್ಟಿದ್ದರು.

   {ಚಿತ್ರಕೃಪೆ: ಓಟಿಸ್ ಹಿಸ್ಟಾರಿಕಲ್ ಆರ್ಕೈವ್ಸ್, ನ್ಯಾಷನಲ್ ಮ್ಯೂಸಿಯಂ ಆಫ್ ಹೆಲ್ತ್ ಅಂಡ್ ಮೆಡಿಸಿನ್}

   ಎರಡನೇ ಮಹಾಯುದ್ಧ

   ಎರಡನೇ ಮಹಾಯುದ್ಧ

   1939 ರಿಂದ 1945 ವರೆಗೂ ನಡೆದ ಎರಡನೇ ಮಹಾಯುದ್ಧದಲ್ಲಿ 4 ಲಕ್ಷಕ್ಕೂ ಅಧಿಕ ಅಮೇರಿಕನ್ನರು ಮೃತಪಟ್ಟಿದ್ದರು.

   {ಚಿತ್ರಕೃಪೆ: ಬ್ರಿಟಾನಿಕಾ}

   ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

   ಮೊದಲನೇ ಮಹಾಯುದ್ಧ

   ಮೊದಲನೇ ಮಹಾಯುದ್ಧ

   1914 ರಿಂದ 1918 ವರೆಗೂ ನಡೆದ ಮೊದಲನೇ ಮಹಾಯುದ್ಧದಲ್ಲಿ 116,000 ಕ್ಕೂ ಅಧಿಕ ಅಮೇರಿಕನ್ನರು ಸಾವನ್ನಪ್ಪಿದ್ದರು.

   {ಚಿತ್ರಕೃಪೆ: ಹಿಸ್ಟರಿ.ಕಾಮ್}

   ವಿಯೆಟ್ನಾಂ ವಾರ್

   ವಿಯೆಟ್ನಾಂ ವಾರ್

   ನವೆಂಬರ್ 1, 1955 ರಿಂದ ಏಪ್ರಿಲ್ 30, 1975 ವರೆಗೂ ನಡೆದ ವಿಯೆಟ್ನಾಂ ವಾರ್ ನಲ್ಲಿ 58 ಸಾವಿರಕ್ಕೂ ಅಧಿಕ ಅಮೇರಿಕನ್ನರು ಜೀವ ಬಿಟ್ಟಿದ್ದರು.

   {ಚಿತ್ರಕೃಪೆ: ಟಿಮ್ ಪೇಜ್/ಕಾರ್ಬಿಸ್/ಗೆಟ್ಟಿ ಇಮೇಜಸ್}

   ಕೊರಿಯನ್ ವಾರ್

   ಕೊರಿಯನ್ ವಾರ್

   ಜೂನ್ 25, 1950 ರಿಂದ ಜುಲೈ 27, 1953 ವರೆಗೂ ನಡೆದ ಕೊರಿಯನ್ ವಾರ್ ನಿಂದಾಗಿ ಸುಮಾರು 37 ಸಾವಿರ ಅಮೇರಿಕನ್ನರು ಮೃತಪಟ್ಟಿದ್ದರು.

   {ಚಿತ್ರಕೃಪೆ: ಸಿಎನ್ಎನ್.ಕಾಮ್}

   9/11 ಅಟ್ಯಾಕ್

   9/11 ಅಟ್ಯಾಕ್

   ಸೆಪ್ಟೆಂಬರ್ 11, 2001 ರಂದು ಆಲ್ ಖೈದಾ ಉಗ್ರಗಾಮಿಗಳು ನಾಲ್ಕು ಪ್ಯಾಸೆಂಜರ್ ಏರ್ ಲೈನ್ಸ್ ನಿಂದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಸಿದರು. ಈ ವೈಮಾನಿಕ ದಾಳಿಯಿಂದ ಸುಮಾರು 3 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದರು.

   ಪರ್ಲ್ ಹಾರ್ಬರ್ ಅಟ್ಯಾಕ್

   ಪರ್ಲ್ ಹಾರ್ಬರ್ ಅಟ್ಯಾಕ್

   ಡಿಸೆಂಬರ್ 7, 1941 ರಂದು ಇಂಪೀರಿಯಲ್ ಜಪಾನೀಸ್ ನೇವಿ ಏರ್ ಸರ್ವೀಸ್ ನಿಂದ ಹೊನಲುಲು (ಹವಾಯಿ) ನಲ್ಲಿನ ನೌಕಾ ನೆಲೆ ಪರ್ಲ್ ಹಾರ್ಬರ್ ಮೇಲೆ ಮಿಲಿಟರಿ ದಾಳಿಯಾಯ್ತು. ಈ ದಾಳಿಯಿಂದ ಸತ್ತವರ ಸಂಖ್ಯೆ ಸುಮಾರು 2,400 ಮಂದಿ.

   {ಚಿತ್ರಕೃಪೆ: ಬ್ರಿಟಾನಿಕಾ/ ನ್ಯಾಷನಲ್ ಆರ್ಕೈವ್ಸ್, ವಾಷಿಂಗ್ಟನ್ ಡಿ.ಸಿ}

   English summary
   Covid-19 Death Toll In US crosses 1 lakh: Have a look at US Deaths from other deadly events.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more