ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ ಅಮೆರಿಕ ಗಢಗಢ, ಟ್ರಂಪ್ ಮೇಲೆ ಜೋ ಗರಂ

By ಅನಿಕೇತ್
|
Google Oneindia Kannada News

ವಾಷಿಂಗ್ಟನ್, ಜುಲೈ 17: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ರಣಕೇಕೆ ಹಾಕುತ್ತಿರುವ ಕೊರೊನಾ ನಿನ್ನೆ ಮತ್ತೊಂದು ದಾಖಲೆ ಬರೆದಿದೆ. ನಿನ್ನೆ ಒಂದೇ ದಿನ ಅಮೆರಿಕದಲ್ಲಿ 77 ಸಾವಿರ ಕೊರೊನಾ ಕೇಸ್‌ಗಳು ಖಚಿತವಾಗಿವೆ. ಈ ಮೂಲಕ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 37 ಲಕ್ಷದ ಗಡಿಗೆ ಬಂದು ನಿಂತಿದೆ. ಕೊರೊನಾಸೋಂಕು ನಿಯಂತ್ರಣದಲ್ಲಿ ಸೋಲುತ್ತಿರುವ ಅಧ್ಯಕ್ಷ ಟ್ರಂಪ್ ವಿರುದ್ಧ ಅಧ್ಯಕ್ಷೀಯ ಚುನಾವಣೆಯಲ್ಲಿನ ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್, ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ 5 ಸಾವಿರ ಹೊಸ ಕೇಸ್‌ಗಳು ದಾಖಲಾದರೆ ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 37 ಲಕ್ಷದ ಗಡಿ ದಾಟಲಿದೆ. ಸಾವಿನ ಸಂಖ್ಯೆಯಲ್ಲೂ ಭಾರಿ ಏರಿಕೆ ಕಂಡುಬರುತ್ತಿದ್ದು, ಈಗಾಗಲೇ 1 ಲಕ್ಷ 41 ಅಮೆರಿಕನ್ನರು ಡೆಡ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ 963 ಜನರ ಉಸಿರು ನಿಂತುಹೋಗಿದೆ.

ಅಮೆರಿಕಾದಲ್ಲಿ ಒಂದೇ ದಿನ 68,428 ಮಂದಿಗೆ ಕೊರೊನಾವೈರಸ್ ಸೋಂಕು!ಅಮೆರಿಕಾದಲ್ಲಿ ಒಂದೇ ದಿನ 68,428 ಮಂದಿಗೆ ಕೊರೊನಾವೈರಸ್ ಸೋಂಕು!

ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಅರಿಝೋನಾ ಹಾಗೂ ಟೆಕ್ಸಾಸ್ ರಾಜ್ಯಗಳಲ್ಲಿ ಎಂತಹ ಗಂಭೀರ ಸ್ಥಿತಿ ನಿರ್ಮಾಣವಾಗಿದೆ ಎಂದರೆ, ರೋಗಿಗಳಿಗೆ ಬೆಡ್‌ಗಳೇ ಸಿಗುತ್ತಿಲ್ಲ. ವಿಶ್ವದ ನಂಬರ್ 1 ದೇಶದಲ್ಲೇ ಇಂತಹ ದುಃಸ್ಥಿತಿ ಎದುರಾಗಿದೆ. ಈ ನಾಲ್ಕೂ ರಾಜ್ಯಗಳಲ್ಲಿ ಅತಿಹೆಚ್ಚಿನ ಸೋಂಕುಗಳು ಪತ್ತೆಯಾದರೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.

ಚಿತ್ರಕೃಪೆ: ಎಪಿ/ಪಿಟಿಐ

ಟ್ರಂಪ್ ವಿರುದ್ಧ ತೀವ್ರ ಆಕ್ರೋಶ

ಟ್ರಂಪ್ ವಿರುದ್ಧ ತೀವ್ರ ಆಕ್ರೋಶ

ಅಮೆರಿಕದ ಕನಿಷ್ಠ 39 ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಆದರೆ ಪರಿಸ್ಥಿತಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ವಿಪಕ್ಷ ನಾಯಕರ ಕಣ್ಣು ಕೆಂಪಾಗಿಸಿದೆ. ಟ್ರಂಪ್ ವಿರುದ್ಧ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೋ ಬಿಡೆನ್, ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಸ್ವಪಕ್ಷೀಯರಲ್ಲೇ ಟ್ರಂಪ್ ಕುರಿತು ಅಪಸ್ವರ ಏಳುವಂತೆ ಮಾಡಿದೆ. ಇದೆಲ್ಲವೂ ಟ್ರಂಪ್‌ಗೆ ಎಲೆಕ್ಷನ್‌ನಲ್ಲಿ ಏಟು ಕೊಡುವ ಸಂಭವ ಹೆಚ್ಚಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿದ್ದು, ಈ ಸಂದರ್ಭದಲ್ಲಿ ಕೊರೊನಾ ಸೃಷ್ಟಿಸುತ್ತಿರುವ ಅವಾಂತರ, ಟ್ರಂಪ್ ಅವರನ್ನ ಕಂಗಾಲಾಗಿಸಿದೆ. ಹಾಗೇ 2ನೇ ಬಾರಿಗೆ ಆಯ್ಕೆ ಬಯಸಿರುವ ಟ್ರಂಪ್‌ಗೆ ಕಠಿಣ ಸವಾಲು ಮುಂದಿಟ್ಟಿದೆ.

ಲ್ಯಾಟಿನ್ ಅಮೆರಿಕದಲ್ಲೂ ಭಯಾನಕ ಸ್ಥಿತಿ..!

ಲ್ಯಾಟಿನ್ ಅಮೆರಿಕದಲ್ಲೂ ಭಯಾನಕ ಸ್ಥಿತಿ..!

ಕೊರೊನಾ ಕೇವಲ ಉತ್ತರ ಅಮೆರಿಕವನ್ನು ತತ್ತರಿಸುವಂತೆ ಮಾಡಿಲ್ಲ. ದಕ್ಷಿಣ ಅಮೆರಿಕದಲ್ಲಿ ಕೂಡ ಇದೇ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ದಕ್ಷಿಣ ಅಮೆರಿಕ ಖಂಡದ ಬಹುದೊಡ್ಡ ದೇಶ ಬ್ರೆಜಿಲ್‌ನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಬ್ರೆಜಿಲ್ ಜನಸಂಖ್ಯೆಯೇ 20 ಕೋಟಿ, ಆದರೆ ಅಲ್ಲಿನ ಸೋಂಕಿತರ ಸಂಖ್ಯೆ 20 ಲಕ್ಷದ ಗಡಿ ದಾಟಿದೆ. ಈವರೆಗೂ 76 ಸಾವಿರಕ್ಕೂ ಹೆಚ್ಚು ಜನ ಬ್ರೆಜಿಲ್‌ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಲ್ಲೂ ಕೂಡ ಅಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ಮೊಳಗಿದೆ. ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೋ ಪರಿಸ್ಥಿತಿ ನಿಭಾಯಿಸುವಲ್ಲಿ ಎಡವುತ್ತಿದ್ದಾರೆ ಅಂತಾ ವಿಪಕ್ಷ ನಾಯಕರು ಹಾಗೂ ಬ್ರೆಜಿಲ್ ನಾಗರಿಕರು ರೊಚ್ಚಿಗೆದ್ದಿದ್ದಾರೆ.

ಕೊವಿಡ್ 19 : ಯಾವ ಯಾವ ದೇಶದಲ್ಲಿ ಅತಿ ಹೆಚ್ಚು ಸಾವು ನೋವುಕೊವಿಡ್ 19 : ಯಾವ ಯಾವ ದೇಶದಲ್ಲಿ ಅತಿ ಹೆಚ್ಚು ಸಾವು ನೋವು

ಬ್ರೆಜಿಲ್‌ನಲ್ಲಿರುವ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ

ಬ್ರೆಜಿಲ್‌ನಲ್ಲಿರುವ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ

ಹಾಗೇ ಬ್ರೆಜಿಲ್‌ನಲ್ಲಿರುವ ಭಾಗಶಃ ಎಲ್ಲಾ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಚಿಕಿತ್ಸೆ ಸಿಗುತ್ತಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲೂ ಸರಿಯಾದ ಸವಲತ್ತುಗಳು ಇಲ್ಲ. ಇನ್ನು ಅಮೆಜಾನ್ ದಟ್ಟ ಕಾಡು ಹಬ್ಬಿರುವ ಬ್ರೆಜಿಲ್‌ನಲ್ಲಿ ಸರಿಯಾದ ರಸ್ತೆಗಳೂ ಇಲ್ಲ. ಸಾರಿಗೆ ವ್ಯವಸ್ಥೆ ಲೋಪದಿಂದ ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಅಡ್ಡಿ ಎದುರಾಗುತ್ತಿದೆ. ಇಷ್ಟೆಲ್ಲದರ ಮಧ್ಯೆ ಸ್ವತಃ ಬ್ರೆಜಿಲ್ ಅಧ್ಯಕ್ಷರಿಗೂ ಸೋಂಕು ವಕ್ಕರಿಸಿದ್ದು, ಬದುಕಿರುವಾಗಲೇ ಬ್ರೆಜಿಲ್ ನಿವಾಸಿಗಳು ರೌರವ ನಕರ ಕಾಣುತ್ತಿದ್ದಾರೆ.

ಇಟಲಿ ಹಾಗೂ ಸ್ಪೇನ್ ಪರಿಸ್ಥಿತಿ ಈಗ ಹೇಗಿದೆ

ಇಟಲಿ ಹಾಗೂ ಸ್ಪೇನ್ ಪರಿಸ್ಥಿತಿ ಈಗ ಹೇಗಿದೆ

ಅಮೆರಿಕದ ಸದ್ಯದ ಸ್ಥಿತಿ ಇಟಲಿ ಹಾಗೂ ಸ್ಪೇನ್ ದೇಶಗಳನ್ನು ನೆನಪು ಮಾಡುತ್ತಿದೆ. ಕೆಲ ತಿಂಗಳ ಹಿಂದೆ ಸ್ಪೇನ್, ಇಟಲಿಯಲ್ಲಿ ಇದೇ ರೀತಿಯ ಸ್ಥಿತಿ ಎದುರಾಗಿತ್ತು. ಇದೀಗ ಅಮೆರಿಕದಲ್ಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ಇಟಲಿಯಲ್ಲಿ ಸದ್ಯ 243,736 ಪ್ರಕರಣಗಳಿದ್ದು, 35, 107 ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಸೋಂಕಿತರು, ಸಾವಿನ ಸಂಖ್ಯೆ ಹೊಂದಿರುವ ದೇಶಗಳ ಟಾಪ್ 10 ಪಟ್ಟಿಯಿಂದ ಇಟಲಿ ಹೊರಗಿದ್ದು 13ನೇ ಸ್ಥಾನದಲ್ಲಿದೆ. ಇನ್ನು 305,935 ಸೋಂಕಿತರನ್ನು ಹೊಂದಿರುವ ಸ್ಪೇನ್ 9ನೇ ಸ್ಥಾನದಲ್ಲಿದೆ. 28,416 ಮಂದಿ ಮೃತಪಟ್ಟಿದ್ದು ಮೃತರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

English summary
Democratic presidential candidate Joe Biden attacked Donald Trump’s handling of COVID-19 as U.S. cases rise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X