ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ 3 ವಾರಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದ್ವಿಗುಣ

|
Google Oneindia Kannada News

ವಾಷಿಂಗ್ಟನ್, ಜುಲೈ 14: ಅಮೆರಿಕದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕೇವಲ ಮೂರೇ ವಾರಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿವೆ.

"ಜುಲೈನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಬಹುದು ಎಂದು ನಾವು ನಿರೀಕ್ಷಿಸಿದ್ದೆವು, ಇಂದು ಇದು ಏಕಾಏಕಿ ಆಗಿರುವ ಬದಲಾವಣೆಯಲ್ಲ'' ಎಂದು ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಾಂಕ್ರಾಮಿಕ ರೋಗ ವಿಭಾಗದ ಸಹ ನಿರ್ದೇಶಕ ಡಾ. ಬಿಲ್ ಪೌಡರ್ಲಿ ಹೇಳಿದ್ದಾರೆ.

'ಜಾನ್ಸನ್ & ಜಾನ್ಸನ್‌ ಕೋವಿಡ್ ಲಸಿಕೆ ಪಾರ್ಶ್ವವಾಯುಗೆ ಕಾರಣವಾಗಬಹುದು': ಎಫ್‌ಡಿಎ ಎಚ್ಚರಿಕೆ'ಜಾನ್ಸನ್ & ಜಾನ್ಸನ್‌ ಕೋವಿಡ್ ಲಸಿಕೆ ಪಾರ್ಶ್ವವಾಯುಗೆ ಕಾರಣವಾಗಬಹುದು': ಎಫ್‌ಡಿಎ ಎಚ್ಚರಿಕೆ

ವೇಗವಾಗಿ ಹಡರುವ ಡೆಲ್ಟಾದಿಂದಾಗಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೂರು ವಾರಗಳ ಹಿಂದೆ 11,300ರಷ್ಟಿದ್ದ ಸರಾಸರಿ ಪ್ರಕರಣಗಳ ಸಂಖ್ಯೆ ಜುಲೈ 12ಕ್ಕೆ 23,600ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

 COVID-19 Cases In America Rising Again, Doubling Over Three Weeks

ಎರಡು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಐದು ರಾಜ್ಯಗಳು ಕಡಿಮೆ ಪ್ರಮಾಣದ ಲಸಿಕಾ ದರವನ್ನು ಹೊಂದಿವೆ.

ಅಮೆರಿಕನ್ನದಲ್ಲಿ ಶೇ.55.6ರಷ್ಟು ಜನರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಮಾಹಿತಿ ನೀಡಿವೆ.

ಅಮೆರಿಕದ ಸಾಕಷ್ಟು ಭಾಗಗಳಲ್ಲಿ ಲಸಿಕೆ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ, ಮತ್ತೊಂದೆಡೆ ವೇಗವಾಗಿ ಹರಡುತ್ತಿರುವ ಡೆಲ್ಟಾ ವೈರಸ್ ರೂಪಾಂತರ ತಳಿ ಕೋವಿಡ್ ಪ್ರಕಟಣಗಳನ್ನು ಹೆಚ್ಚಿಸುತ್ತಿದೆ.

ಮೈನೆ ಮತ್ತು ದಕ್ಷಿಣ ಡಕೋತಾ ಈ ಎರಡು ರಾಜ್ಯಗಳಲ್ಲಿ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

English summary
The COVID-19 curve in the United States is rising again after months of decline, with the number of new cases per day doubling over the past three weeks, driven by the fast-spreading delta variant, lagging vaccination rates and Fourth of July gatherings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X