ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 28: ಕೊರೊನಾ ವೈರಸ್ ಅನ್ನು ಕೊಲ್ಲಲು ಮನುಷ್ಯನ ದೇಹದೊಳಗೆ ಲೈಟ್, ಹೀಟ್ ಅಥವಾ ಡಿಸ್ ಇನ್ಫೆಕ್ಟೆಂಟ್ ಇನ್ಜೆಕ್ಟ್ ಮಾಡುವ ಬಗ್ಗೆ ಮಾತನಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಚೀನಾ ವಿರುದ್ಧ ಗುಟುರು ಹಾಕಿದ್ದಾರೆ.

Recommended Video

Sachin shares a special video on his birthday | Oneindia Kannada

''ಚೀನಾ ಮೇಲೆ ನಮಗೆ ತುಂಬಾ ಬೇಸರ ಇದೆ. ಮೊದಲ ಹಂತದಲ್ಲೇ ಕೊರೊನಾ ವೈರಸ್ ಅನ್ನು ಚೀನಾ ತಡೆಗಟ್ಟಿದಿದ್ದರೆ, ಇಡೀ ವಿಶ್ವಕ್ಕೆ ಅದು ಹಬ್ಬುತ್ತಿರಲಿಲ್ಲ. ಚೀನಾ ಎಸಗಿರುವ ಪ್ರಮಾದಕ್ಕೆ ದುಬಾರಿ ಮೊತ್ತ ತೆರಬೇಕಾಗುತ್ತದೆ'' ಎಂದು ನ್ಯೂಸ್ ಕಾನ್ಫರೆನ್ಸ್ ವೇಳೆ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!

''ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ ಭಾರಿ ನಷ್ಟ ಉಂಟಾಗಿದೆ. ಯು.ಎಸ್.ಎ ಗೆ ಭಾರಿ ಹೊಡೆತಬಿದ್ದಿದೆ. ಇದೆಲ್ಲವನ್ನೂ ಚೀನಾ ತುಂಬಿಸಿಕೊಡಬೇಕು'' ಎಂದಿದ್ದಾರೆ ಡೊನಾಲ್ಡ್ ಟ್ರಂಪ್.

ಇಡೀ ವಿಶ್ವವನ್ನು ಕಾಪಾಡಬಹುದಿತ್ತು

ಇಡೀ ವಿಶ್ವವನ್ನು ಕಾಪಾಡಬಹುದಿತ್ತು

''ಚೀನಾ ಮನಸ್ಸು ಮಾಡಿದ್ದರೆ, ಇಡೀ ವಿಶ್ವವನ್ನು ಕಾಪಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ವಿಶ್ವಕ್ಕೆ ಕೊರೊನಾ ವೈರಸ್ ಹರಡಿಸಿದ ನೈತಿಕ ಹೊಣೆಯನ್ನು ಚೀನಾ ಹೊರಬೇಕು'' ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಲಾಕ್ ಡೌನ್ ಸಡಿಲಿಕೆ

ಲಾಕ್ ಡೌನ್ ಸಡಿಲಿಕೆ

ಇದೇ ವೇಳೆ ಲಾಕ್ ಡೌನ್ ಸಡಿಲಿಕೆ ಬಗ್ಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ''ಸದ್ಯದಲ್ಲೇ ಶಾಲೆಗಳು ತೆರೆಯಲಿವೆ'' ಎಂದಿದ್ದಾರೆ. ಇನ್ನು ನವೆಂಬರ್ ನಲ್ಲಿ ನಡೆಯಬೇಕಿರುವ ಅಧ್ಯಕ್ಷೀಯ ಚುನಾವಣೆ ಮುಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!ಗೊತ್ತಿದ್ದೂ ಚೀನಾ ತಪ್ಪೆಸಗಿದ್ದರೆ, ಪ್ರತೀಕಾರ ನಿಶ್ಚಿತ: ಗುಡುಗಿದ ಡೊನಾಲ್ಡ್ ಟ್ರಂಪ್!

ಅರ್ಹತೆ ಇದ್ಯಾ.?

ಅರ್ಹತೆ ಇದ್ಯಾ.?

''ವಿಯೆಟ್ನಾಂ ಯುದ್ಧದಲ್ಲಿ ಮಡಿದವರಿಗಿಂತ ಕೊರೊನಾ ವೈರಸ್ ನಿಂದಾಗಿ ಅಮೇರಿಕಾದಲ್ಲಿ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗಿರುವಾಗ, ಪುನರ್ ಆಯ್ಕೆ ಆಗುವ ಅರ್ಹತೆ ನಿಮಗೆ ಇದ್ಯಾ?'' ಎಂದು ನ್ಯೂಸ್ ಕಾನ್ಫರೆನ್ಸ್ ವೇಳೆ ಪತ್ರಕರ್ತರೊಬ್ಬರು ಡೊನಾಲ್ಡ್ ಟ್ರಂಪ್ ಗೆ ಪ್ರಶ್ನಿಸಿದರು.

ಕಠಿಣ ಶ್ರಮ ಹಾಕಿದ್ದೇವೆ

ಕಠಿಣ ಶ್ರಮ ಹಾಕಿದ್ದೇವೆ

ಪತ್ರಕರ್ತನ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಉತ್ತರಿಸಿದ್ದು ಹೀಗೆ - ''ಕೊರೊನಾ ವೈರಸ್ ನಿಂದ ಹೆಚ್ಚು ಜನ ಸಾವನ್ನಪ್ಪಿದ್ದಾರೆ ನಿಜ. ಆದರೆ, 2.2 ಮಿಲಿಯನ್ ಅಮೇರಿಕನ್ನರು ಕೊರೊನಾಗೆ ಬಲಿಯಾಗುತ್ತಾರೆ ಎಂದು ಮೊದಲು ಅಂದಾಜಿಸಲಾಗಿತ್ತು. ಆದ್ರೆ, ಕಠಿಣ ಪರಿಶ್ರಮದಿಂದ ಸಾವಿನ ಪ್ರಮಾಣವನ್ನು 60-70 ಸಾವಿರಕ್ಕೆ ಇಳಿಸಿದ್ದೇವೆ. ಸರಿಯಾದ ಸಮಯಕ್ಕೆ ನಾವು ಉತ್ತಮ ನಿರ್ಧಾರಗಳನ್ನು ಕೈಗೊಂಡ್ವಿ''

ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!ತಾರಕಕ್ಕೇರಿದ ಕೊರೊನಾ ಜಟಾಪಟಿ: ಅಮೇರಿಕಾ ಏಟಿಗೆ ಚೀನಾ ತಿರುಗೇಟು!

English summary
Coronavirus: We are not happy with China says Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X