ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಸಿಕೆ ಸಿದ್ಧಪಡಿಸುವಲ್ಲಿ ಮಹತ್ವದ ಹೆಜ್ಜೆ: 3D ನಕ್ಷೆ ಸಿದ್ಧ

|
Google Oneindia Kannada News

ನ್ಯೂಯಾರ್ಕ್, ಫೆಬ್ರವರಿ 20: ಮಾರಕ ಕೊರೊನಾ ವೈರಸ್‌ಗೆ (ಕೋವಿಡ್-19) ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಸಂಶೋಧಕರು ನಿರ್ಣಾಯಕ ಪ್ರಗತಿ ಸಾಧಿಸಿದ್ದಾರೆ. ಮಾನವ ಕೋಶಗಳಿಗೆ ಅಂಟಿಕೊಳ್ಳುವ ಮತ್ತು ಸೋಂಕು ಹರಡಿಸುವ ಕೊರೊನಾ ವೈರಸ್‌ನ ಮೊದಲ 3ಡಿ ನಕ್ಷೆಯನ್ನು ಅಮೆರಿಕದ ವಿಜ್ಞಾನಿಗಳು ಸೃಷ್ಟಿಸಿದ್ದಾರೆ.

ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ತಂಡವು ಚೀನಾದ ಸಂಶೋಧಕರು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿರುವ ವೈರಸ್‌ನ ಆನುವಂಶಿಕ ಕೋಶಗಳನ್ನು ಅಧ್ಯಯನ ಮಾಡಿದೆ.

ವೈರಸ್‌ ಅನ್ನು ಹತ್ತಿಕ್ಕಲು ಲಸಿಕೆ ಮತ್ತು ವೈರಾಣು ನಿರೋಧಕ ಔಷಧಗಳನ್ನು ಅಭಿವೃದ್ಧಿಪಡಿಸಲು ಅತ್ಯಗತ್ಯವಾದ ಹೆಜ್ಜೆಯಾಗಿರುವ ಈ 3D ಆಟೋಮಿಕ್ ಪ್ರಮಾಣ ನಕ್ಷೆಯಲ್ಲಿ ಕಂಡುಕೊಂಡಿರುವ ವೈರಸ್‌ನಲ್ಲಿನ ಅಣುವನ್ನು ಸ್ಪೈಕ್ ಪ್ರೊಟೀನ್ ಎಂದು ಕರೆಯಲಾಗುತ್ತದೆ.

ಕೊರೊನಾ ವೈರಸ್‌ಗೆ ಔಷಧ ಅಭಿವೃದ್ಧಿಪಡಿಸಿದ ಚೀನಾಕೊರೊನಾ ವೈರಸ್‌ಗೆ ಔಷಧ ಅಭಿವೃದ್ಧಿಪಡಿಸಿದ ಚೀನಾ

ಈ ಥ್ರೀಡಿ ನಕ್ಷೆಯನ್ನು ಆಧಾರವಾಗಿಟ್ಟುಕೊಂಡು ವೈರಸ್‌ ನಿಯಂತ್ರಿಸಲು ಪರಿಣಾಮಕಾರಿ ಲಸಿಕೆ ಸಿದ್ಧಪಡಿಸಲು ಸಾಧ್ಯವಾಗಲಿದ್ದು, ಈ ವಿಜ್ಞಾನಿಗಳ ತಂಡ ಅದರಲ್ಲಿ ಕಾರ್ಯನಿರತವಾಗಿದೆ. ಕೊರೊನಾ ಹಾವಳಿ ತೀವ್ರವಾಗಿರುವ ಸಂದರ್ಭದಲ್ಲಿ ಇದು ಮಹತ್ವದ ಪ್ರಗತಿಯಾಗಿದೆ.

ಕೊರೊನಾ ವೈರಸ್‌ಗಳ ಅಧ್ಯಯನ

ಕೊರೊನಾ ವೈರಸ್‌ಗಳ ಅಧ್ಯಯನ

'ಇದು ಕೊರೊನಾ ವೈರಸ್ ಎಂಬುದು ನಮಗೆ ತಿಳಿದ ಕೂಡಲೇ ಅದರ ಬಗ್ಗೆ ಅಧ್ಯಯನ ನಡೆಸಬೇಕು ಎಂದು ನಮಗೆ ಅನಿಸಿತು. ಏಕೆಂದರೆ ಈ ಸಂರಚನೆಯನ್ನು ಸಿದ್ಧಪಡಿಸಬಹುದಾದ ಮೊದಲಿಗರಲ್ಲಿ ನಾವೂ ಒಬ್ಬರು. ನಾವು ಈಗಾಗಲೇ ಇತರೆ ಕೊರೊನಾ ವೈರಸ್‌ಗಳ ಕುರಿತು ಈ ಪರಿವರ್ತನೆಯ ಕಾರ್ಯ ಮಾಡಿ ತೋರಿಸಿರುವುದರಿಂದ ಇಲ್ಲಿ ಏನನ್ನು ಖಚಿತವಾಗಿ ಬಳಸಬೇಕು ಎನ್ನುವುದು ನಮಗೆ ತಿಳಿದಿತ್ತು' ಎಂದು ಅಧ್ಯಯನ ತಂಡದ ಮುಖ್ಯ ಸಂಶೋಧಕ ಜೇಸನ್ ಮೆಕ್‌ಲೆಲನ್ ತಿಳಿಸಿದ್ದಾರೆ.

ಮೃತ್ಯುಕೂಪವಾದ ಜಪಾನ್‌ ಹಡಗು: ಕೊರೊನಾಗೆ ಇಬ್ಬರು ಬಲಿಮೃತ್ಯುಕೂಪವಾದ ಜಪಾನ್‌ ಹಡಗು: ಕೊರೊನಾಗೆ ಇಬ್ಬರು ಬಲಿ

ವಿಭಿನ್ನ ಆಕಾರದ ಪ್ರೊಟೀನ್‌ಗಳು

ವಿಭಿನ್ನ ಆಕಾರದ ಪ್ರೊಟೀನ್‌ಗಳು

ಮಾನವ ಕೋಶಗಳ ಮೇಲೆ ಆಕ್ರಮಣ ಮಾಡಲು ಕೊರೊನಾ ವೈರಸ್‌ಗಳು ಬಳಸುವ ಪ್ರಮುಖ ಪ್ರೋಟೀನ್‌ನ ಆಣ್ವಿಕ ರಚನೆಯನ್ನು ಈ ತಂಡ ಪತ್ತೆಹಚ್ಚಿದೆ. ಸ್ಪೈಕ್ ಪ್ರೊಟೀನ್‌ಗಳ ಮೂಲಕ ಕೊರೊನಾ ವೈರಸ್ ಕೋಶಗಳ ಮೇಲೆ ದಾಳಿ ಮಾಡುತ್ತವೆ ಎಂದು ಹಿಂದಿನ ಸಂಶೋಧನೆಗಳು ಬಹಿರಂಗಪಡಿಸಿದ್ದವು. ಆದರೆ ಆ ಪ್ರೊಟೀನ್‌ಗಳು ವಿಭಿನ್ನ ಕೊರೊನಾ ವೈರಸ್‌ಗಳಲ್ಲಿ ವಿಭಿನ್ನ ಆಕಾರ ಪಡೆದುಕೊಂಡಿದ್ದವು.

ಸ್ಪೈಕ್ ಪ್ರೊಟೀನ್ ದಾಳಿ ಹೇಗೆ?

ಸ್ಪೈಕ್ ಪ್ರೊಟೀನ್ ದಾಳಿ ಹೇಗೆ?

ಸಾರ್ಸ್ ಸ್ವರೂಪದ ನವ ಕೊರೊನಾ ವೈರಸ್‌ನಲ್ಲಿನ ಸ್ಪೈಕ್ ಪ್ರೊಟೀನ್‌ನ ಸ್ವರೂಪವನ್ನು ಪತ್ತೆ ಹಚ್ಚುವುದು, ವೈರಸ್‌ಅನ್ನು ಯಾವ ರೀತಿ ಎದುರಿಸಬಹುದು ಎನ್ನುವುದಕ್ಕೆ ಮಹತ್ವದ ಸುಳಿವು ನೀಡುವ ಸವಾಲಾಗಿತ್ತು. ಕೊರೊನಾ ವೈರಸ್ ಪುನರಾವರ್ತನೆಗೆ ಮತ್ತು ಮಾನವ ಕೋಶಗಳ ಮೇಲೆ ಆಕ್ರಮಣ ಮಾಡಲು ವಿಭಿನ್ನ ಪ್ರೊಟೀನ್‌ಗಳನ್ನು ಬಳಸಿದರೂ ಜೀವಕೋಶಗಳೊಳಗೆ ನುಗ್ಗಲು ವೈರಸ್ ಪ್ರಮುಖವಾಗಿ ಬಳಸುವುದು ಸ್ಪೈಕ್ ಪ್ರೊಟೀನ್‌ಅನ್ನು. ಈ ಪ್ರೊಟೀನ್ ಮಾನವ ಕೋಶಗಳ ಒಳಗೆ ದ್ವಾರದಂತೆ ಕೆಲಸ ಮಾಡುತ್ತದೆ.

ಪ್ರೊಟೀನ್ ಸ್ವರೂಪ ಅರಿತರೆ ಮುಂದಿನ ಹೆಜ್ಜೆ ಸಾಧ್ಯ

ಪ್ರೊಟೀನ್ ಸ್ವರೂಪ ಅರಿತರೆ ಮುಂದಿನ ಹೆಜ್ಜೆ ಸಾಧ್ಯ

ಸ್ಪೈಕ್ ಪ್ರೊಟೀನ್ ಮಾನವ ಜೀವಕೋಶದ ಮೇಲೆ ಆಕ್ರಮಿಸಿದಾಗ ವೈರಾಣು ಮಾನವ ಕೋಶದ ಪೊರೆಗಳನ್ನು ನಾಶಪಡಿಸುತ್ತವೆ. ಈ ಮೂಲಕ ವೈರಸ್ ಮಾನವ ಕೋಶದೊಳಗೆ ಪ್ರವೇಶಿಸಿ ಸೋಂಕು ಉಂಟುಮಾಡಲು ಆರಂಭಿಸುತ್ತದೆ. ಹೀಗಾಗಿ ವೈರಸ್‌ನಲ್ಲಿನ ಸ್ಪೈಕ್ ಪ್ರೊಟೀನ್ ಕೋಶಗಳ ಮೇಲೆ ಅಂಟಿಕೊಂಡು ಅದನ್ನು ಆಕ್ರಮಿಸದಂತೆ ತಡೆದರೆ ಸೋಂಕನ್ನು ಸಹ ತಡೆಯಬಹುದು. ಆದರೆ ಈ ಪ್ರೊಟೀನ್‌ಅನ್ನು ಗುರಿಯನ್ನಾಗಿರಿಸುವ ಮುನ್ನ ಅದು ಹೇಗೆ ಕಾಣಿಸುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

English summary
US researchers have created the first 3D map of Coronavirus spike protein, a breakthrough to key step toward vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X