ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಬಗ್ಗೆ ಇಡೀ ವಿಶ್ವಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ WHO

|
Google Oneindia Kannada News

ಜಿನೇವಾ, ಜೂನ್ 9: ಕೊರೊನಾ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಇಡೀ ವಿಶ್ವಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

Recommended Video

ವಿಶ್ವ ಸಂಸ್ಥೆಯಿಂದ ಮತ್ತೋಂದು ಎಚ್ಚರಿಕೆ | WHO About Corona Again!!

ಹೊಸ ಕೊರೊನಾ ಸೋಂಕಿತ ಪ್ರಕರಣಗಳನ್ನು ನೋಡಿದರೆ ಅಮೆರಿಕದಲ್ಲಂತೂ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಅಮೆರಿಕದಲ್ಲಿ ಪ್ರತಿಭಟನೆ ಕಾವು ಹೆಚ್ಚಿದ್ದು ನಿತ್ಯ ಪ್ರತಿಭಟನೆಯನ್ನು ಸಾವಿರಾರು ಮಂದಿ ಭಾಗಿಯಾಗುತ್ತಿದ್ದಾರೆ. ಇದರಿಂದ ಸೋಂಕು ಸುಲಭವಾಗಿ ಹರಡಬಹುದು ಎಂದು ಎಚ್ಚರಿಕೆ ನೀಡಿದೆ.

ಕೊರೊನಾ ವೈರಸ್ 'ಅಸ್ತಿತ್ವದಲ್ಲಿಲ್ಲ' ಎಂದ ಇಟಲಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಕೊರೊನಾ ವೈರಸ್ 'ಅಸ್ತಿತ್ವದಲ್ಲಿಲ್ಲ' ಎಂದ ಇಟಲಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಪೊಲೀಸ್ ಠಾಣೆಯಲ್ಲಿ ಬಿಳಿಯ ಪೊಲೀಸ್ ಬೂಟಿಗೆ ಸಿಕ್ಕಿ ಉಸಿರುಗಟ್ಟಿ ಸಾವನ್ನಪ್ಪಿದ್ದ ಜಾರ್ಜ್ ಫ್ಲಾಯ್ಡ್ ಅವರಿಗೂ ಕೊರೊನಾ ವೈರಸ್ ಇತ್ತು ಎಂಬುದು ವರದಿ ಬಳಿಕ ಸ್ಪಷ್ಟವಾಗಿತ್ತು.

ನಾವೆಲ್ ಕೊರೊನಾ ವೈರಸ್ ಚೀನಾದಲ್ಲಿ ಡಿಸೆಂಬರ್‌ನಲ್ಲಿ ಹುಟ್ಟಿದ ಕೊರೊನಾ ವೈರಸ್ ಒಟ್ಟು 4,03,000 ಮಂದಿ ಸಾವಿಗೆ ಕಾರಣವಾಗಿದೆ.

ಪೂರ್ವ ಏಷ್ಯಾ, ಯುರೋಪ್ ಕೇಂದ್ರಬಿಂದುವಾಗಿತ್ತು

ಪೂರ್ವ ಏಷ್ಯಾ, ಯುರೋಪ್ ಕೇಂದ್ರಬಿಂದುವಾಗಿತ್ತು

ಪೂರ್ವ ಏಷ್ಯಾ ಹಾಗೂ ಯುರೋಪ್ ಕೊರೊನಾ ವೈರಸ್‌ನ ಕೇಂದ್ರಬಿಂದುವಾಗಿತ್ತು. ಇದೀಗ ಅಮೆರಿಕವು ಆ ಸ್ಥಾನವನ್ನು ಕಸಿದುಕೊಂಡಿದೆ. ಯುರೋಪ್‌ನಲ್ಲಿ ಚೇತರಿಕೆ ಕಾಣುತ್ತಿದ್ದರೂ ವಿಶ್ವದ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

ಒಂದೇ ದಿನದಲ್ಲಿ 1,36,000 ಪ್ರಕರಣ

ಒಂದೇ ದಿನದಲ್ಲಿ 1,36,000 ಪ್ರಕರಣ

ಕಳೆದ ಒಂದು ವಾರ ಅಥವಾ 10 ದಿನಗಳಲ್ಲಿ ವಿಶ್ವದಾದ್ಯಂತ 1,00,000 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಆದರೆ ನಿನ್ನೆ ಒಂದೇ ದಿನದಲ್ಲಿ 1,36,000 ಪ್ರಕರಣಗಳು ಪತ್ತೆಯಾಗಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ಪ್ರಕರಣಗಳಲ್ಲಿ ಅಮೆರಿಕ ಹಾಗೂ ದಕ್ಷಿಣ ಏಷ್ಯಾ ದೇಶಗಳಲ್ಲಿಯೇ ಹೆಚ್ಚಿದೆ.

ಜಾಗ್ರತೆಯಿಂದ ಪ್ರತಿಭಟನೆ ಮಾಡಿ

ಜಾಗ್ರತೆಯಿಂದ ಪ್ರತಿಭಟನೆ ಮಾಡಿ

ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿದ ಫ್ಲಾಯ್ಡ್ ಅವರ ಸಾವಿನ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ನಿತ್ಯ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈಗವಸು, ಮಾಸ್ಕ್ ತಪ್ಪದೇ ಬಳಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಫ್ಲಾಯ್ಡ್ ಹತ್ಯೆ ನಂತರ ಮೇ 25ರಿಂದ ಪ್ರತಿಭಟನೆ ಆರಂಭವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಸಮಾನತೆಯನ್ನು ಗೌರವಿಸುತ್ತದೆ

ವಿಶ್ವ ಆರೋಗ್ಯ ಸಂಸ್ಥೆಯು ಸಮಾನತೆಯನ್ನು ಗೌರವಿಸುತ್ತದೆ

ವಿಶ್ವ ಆರೋಗ್ಯ ಸಂಸ್ಥೆಯು ಸಮಾನತೆಗೆ ಗೌರವ ನೀಡುತ್ತದೆ. ಇಡೀ ವಿಶ್ವದಲ್ಲೇ ವರ್ಣಬೇಧ ನೀತಿ ವಿರುದ್ಧ ಧ್ವನಿ ಎದ್ದಿದೆ, ನಾವು ಕೂಡ ಈ ರೀತಿಯ ಅಸಮಾನತೆಗೆ ಎಂದಿಗೂ ಬೆಂಬಲ ನೀಡುವುದಿಲ್ಲ. ಪ್ರತಿಭಟನೆ ವೇಳೆ ಶುಚಿತ್ವ ಕಾಪಾಡಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಒಂದೊಮ್ಮೆ ಆರೋಗ್ಯ ಸರಿ ಇಲ್ಲದಿದ್ದರೆ ಮನೆಯಲ್ಲಿಯೇ ಇರಿ ಎಂದು ಸೂಚನೆ ನೀಡಿದೆ.

English summary
The World Health Organization said Monday that the coronavirus pandemic situation was worsening around the globe, as it warned against complacency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X