ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿಂದ ಚೀನಾದಲ್ಲಿ ಸತ್ತವರೆಷ್ಟು? 'ಸತ್ಯ' ಬಾಯ್ಬಿಟ್ಟ ಟ್ರಂಪ್!

|
Google Oneindia Kannada News

ವಾಷಿಂಗ್ಟನ್ ಏಪ್ರಿಲ್ 20: ವಿಶ್ವದಾದ್ಯಂತ ಇಲ್ಲಿಯವರೆಗೂ 24,19,194 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 1,65,775 ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ.

Recommended Video

Tribes life in Quarantine Days | ಲಾಕ್ ಡೌನ್ ನಿಂದ ಬಳಲುತ್ತಿದ್ದಾರೆ ಬುಡಕಟ್ಟು ಜನ | Oneindia Kannada

ಡೆಡ್ಲಿ ಕೊರೊನಾ ವೈರಸ್ ನಿಂದ ಯು.ಎಸ್.ಎ ನಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಪೇನ್ ಮತ್ತು ಇಟಲಿಯಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಜನ್ಮ ತಾಳಿದ ಈ ಕೊರೊನಾ ವೈರಸ್ ಯೂರೋಪ್ ಮತ್ತು ಅಮೇರಿಕಾ ನೆಲದಲ್ಲಿ ಹೆಚ್ಚು ಜನರನ್ನು ಬಲಿ ಪಡೆದಿದೆ.

ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

ಮೊದಲು ವುಹಾನ್ ನಲ್ಲಿ ಕಾಣಿಸಿಕೊಂಡ ನೋವೆಲ್ ಕೊರೊನಾ ವೈರಸ್ ನಿಂದ ಚೀನಾದಲ್ಲಿ ಎಷ್ಟು ಮಂದಿ ಪ್ರಾಣ ಬಿಟ್ಟಿದ್ದಾರೆ ಅಂತ ನಿಮಗೆ ಗೊತ್ತಾ.? ಚೀನಾ ಸರ್ಕಾರ ತೋರಿಸಿರುವ ಲೆಕ್ಕದ ಪ್ರಕಾರ ಕೇವಲ 4,632.!

ಆದ್ರೆ, ಕೋವಿಡ್-19 ನಿಂದ ಚೀನಾದಲ್ಲಿ ಸಂಭವಿಸಿರುವ ಸಾವಿನ ಪ್ರಮಾಣದ ಬಗ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಯಿಂದ ಬಂದಿರುವ ಮಾತೇ ಬೇರೆ. ಸಾವಿನ ಪ್ರಮಾಣದಲ್ಲಿ ಅಮೇರಿಕಾ ನಂಬರ್ 1 ಅಲ್ಲ.. ಚೀನಾ ನಂಬರ್ 1 ..! ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಚೀನಾ ನಂಬರ್ 1

ಚೀನಾ ನಂಬರ್ 1

ಕೊರೊನಾ ವೈರಸ್ ನಿಂದ ಉಂಟಾಗಿರುವ ಸಾವಿನ ಬಗ್ಗೆ ಚೀನಾ ಸರ್ಕಾರ ನೀಡಿರುವ ಮಾಹಿತಿಯ ನಿಖರತೆ ಬಗ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ವ್ಯಕ್ತ ಪಡಿಸಿದ್ದಾರೆ. ಚೀನಾದ ತೋರಿಸಿರುವ ಸಾವಿನ ಪ್ರಮಾಣ 'ಅವಾಸ್ತವಿಕ' ಎಂದಿರುವ ಡೊನಾಲ್ಡ್ ಟ್ರಂಪ್, ಚೀನಾದಲ್ಲಿ ಸತ್ತವರ ಸಂಖ್ಯೆ ಅಮೇರಿಕಾಗಿಂತಲೂ ಹೆಚ್ಚು ಎಂದಿದ್ದಾರೆ. ಜೊತೆಗೆ, ''ಕೋವಿಡ್-19 ನಿಂದ ಹೆಚ್ಚು ಸಾವು ಸಂಭವಿಸಿರುವ ದೇಶಗಳ ಪಟ್ಟಿಯಲ್ಲಿ ಚೀನಾ ನಂಬರ್ 1'' ಅಂತ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮೊನ್ನೆಯಷ್ಟೇ ಪರಿಷ್ಕರಿಸಿದ್ದ ಚೀನಾ

ಮೊನ್ನೆಯಷ್ಟೇ ಪರಿಷ್ಕರಿಸಿದ್ದ ಚೀನಾ

ಕೊರೊನಾ ವೈರಸ್ ನಿಂದ ವುಹಾನ್ ನಗರದಲ್ಲಿ ಉಂಟಾದ ಸಾವಿನ ಸಂಖ್ಯೆಯನ್ನ ಮೊನ್ನೆಯಷ್ಟೇ ಚೀನಾ ಸರ್ಕಾರ ಪರಿಷ್ಕರಿಸಿತ್ತು. ವುಹಾನ್ ನಗರದಲ್ಲಿ 3,869 ಜನ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ, ಚೀನಾದಲ್ಲಿ ಒಟ್ಟು 4,632 ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿತ್ತು. ಇದಾದ ಬಳಿಕ ಚೀನಾದಲ್ಲಿನ 'ಅಸಲಿ' ಸಾವಿನ ಸಂಖ್ಯೆ ಬಗ್ಗೆ ವೈಟ್ ಹೌಸ್ ನಲ್ಲಿ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ.

ಟ್ರಂಪ್ ಹೇಳಿದ್ದೇನು.?

ಟ್ರಂಪ್ ಹೇಳಿದ್ದೇನು.?

''ಸಾವಿನ ಪ್ರಮಾಣದಲ್ಲಿ ನಾವು ನಂಬರ್ 1 ಅಲ್ಲ. ಚೀನಾ ನಂಬರ್ 1. ಸತ್ತವರ ಸಂಖ್ಯೆಯಲ್ಲಿ ಚೀನಾ ನಮಗಿಂತ ಬಹಳಷ್ಟು ಮುಂದೆ ಇದ್ದಾರೆ. ಹತ್ತಿರವಂತೂ ಇಲ್ಲವೇ ಇಲ್ಲ'' ಎಂದಿದ್ದಾರೆ ಡೊನಾಲ್ಡ್ ಟ್ರಂಪ್.

ಚೀನಾದಲ್ಲಿ ಹೆಚ್ಚು ಸಾವು ಸಂಭವಿಸಿದೆ

ಚೀನಾದಲ್ಲಿ ಹೆಚ್ಚು ಸಾವು ಸಂಭವಿಸಿದೆ

''ಅತ್ಯಾಧುನಿಕ ಹೆಲ್ತ್ ಕೇರ್ ಸಿಸ್ಟಮ್ ಹೊಂದಿರುವ ಯು.ಕೆ, ಫ್ರಾನ್ಸ್, ಇಟಲಿ, ಸ್ಪೇನ್, ಬೆಲ್ಜಿಯಂನಲ್ಲೇ ಹೆಚ್ಚು ಸಾವು ಸಂಭವಿಸಿದೆ. ಅಂಥದ್ರಲ್ಲಿ ಚೀನಾದಲ್ಲಿ ಸಾವಿನ ಪ್ರಮಾಣ 0.33 ಹೇಗೆ ಸಾಧ್ಯ? ಚೀನಾ ಸರ್ಕಾರ ಕೊಟ್ಟಿರುವ ಅಧಿಕೃತ ಮಾಹಿತಿಗಿಂತಲೂ ಹೆಚ್ಚು ಸಾವು ಅಲ್ಲಿ ಸಂಭವಿಸಿದೆ'' ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ತನಿಖೆ ನಡೆಸುತ್ತಿದೆ ಅಮೇರಿಕಾ

ತನಿಖೆ ನಡೆಸುತ್ತಿದೆ ಅಮೇರಿಕಾ

ವುಹಾನ್ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಲೀಕ್ ಆಯ್ತಾ ಎಂಬುದರ ಬಗ್ಗೆ ಅಮೇರಿಕಾ ಸದ್ಯ ತನಿಖೆ ನಡೆಸುತ್ತಿದೆ. ಇನ್ನು WHO ಮತ್ತು ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಡೊನಾಲ್ಡ್ ಟ್ರಂಪ್ ನಿಲ್ಲಿಸಿದ್ದಾರೆ.

ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ ಎಷ್ಟು.?

ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ ಎಷ್ಟು.?

ಅಮೇರಿಕಾದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 7,64,265ಕ್ಕೆ ಏರಿದೆ. ಇಲ್ಲಿಯವರೆಗೂ 40,565 ಮಂದಿ ಮೃತಪಟ್ಟಿದ್ದು, 13,566 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

English summary
Coronavirus: President Donald Trump slams China on its Covid 19 death toll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X