ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಲಕ್ಷಕ್ಕೆ ಏರಿದ ಅಮೆರಿಕ ಸೋಂಕಿತರ ಸಂಖ್ಯೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 11: ಅಮೆರಿಕ ಕೊರೊನಾ ಹೊಡೆತಕ್ಕೆ ನಲುಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ, ಸೊಂಕಿತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿದೆ.

5,04,780 ಮಂದಿಗೆ ಸೋಂಕು ಇರುವುದು ದೃಢವಾಗಿದೆ. 18763 ಮಂದಿ ಮರಣ ಹೊಂದಿದ್ದಾರೆ. 1531 ಸೋಂಕಿತರು ಗುಣಮುಖರಾಗಿದ್ದಾರೆ.

ಮೋದಿ ಹಾಗೂ ಭಾರತೀಯರನ್ನು ವಿಶ್ವದ ಮುಂದೆ ಹೊಗಳಿದ ಟ್ರಂಪ್ಮೋದಿ ಹಾಗೂ ಭಾರತೀಯರನ್ನು ವಿಶ್ವದ ಮುಂದೆ ಹೊಗಳಿದ ಟ್ರಂಪ್

ಅಮೆರಿಕ ವಿಶ್ವದಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶವಾಗಿದೆ. ಚೀನಾದಲ್ಲಿ ಹುಟ್ಟಿಕೊಂಡ ವೈರಸ್‌ ಎಲ್ಲ ದೇಶಗಳಿಗೂ ಹಬ್ಬಿದೆ. ಆದರೆ, ಅಮೆರಿಕದಲ್ಲಿ ಅತಿ ವೇಗವಾಗಿ ವೈರಸ್ ಹರಡಿದೆ.

Coronavirus Positive Cases Crossed 5 Lakhs In America

ನ್ಯೂಯಾರ್ಕ್ ನಲ್ಲಿ ಅತಿ ಹೆಚ್ಚು ಸೋಂಕಿತರು ಇದ್ದಾರೆ. ಅಲ್ಲಿನ 1,59,937 ಜನರಿಗೆ ಪಾಸಿಟಿವ್ ಎಂದು ದೃಢವಾಗಿದೆ. ಉಳಿದಂತೆ, ನ್ಯೂ ಜರ್ಸಿ, ಕ್ಯಾಲಿಫೊರ್ನಿಯ, ಮಿಚಿಗನ್ ನಗರಗಳು ಹೆಚ್ಚಿನ ಸೋಂಕಿತರನ್ನು ಹೊಂದಿವೆ.

ಮತ್ತೊಂದು ಕಡೆ, ಅಮೆರಿಕಕ್ಕೆ ಭಾರತ ಕೆಲ ದಿನಗಳ ಹಿಂದೆಯಷ್ಟೇ ಹೈಡ್ರಾಕ್ಸಿಕ್ಲೋರೋಕ್ವಿನ್ (ಮಲೇರಿಯಾ ತಡೆ ಔಷಧ) ಔಷಧಗಳನ್ನು ಕಳುಹಿಸಿಕೊಟ್ಟಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಭಾರತದ ಜನತೆಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

English summary
Coronavirus positive cases crossed 5 lakhs in america. 18763 people died from coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X